Bangalore Power Cut: ಇಂದಿನಿಂದ ಮೂರು ದಿನ ಬೆಂಗಳೂರಲ್ಲಿ ವಿದ್ಯುತ್ ವ್ಯತ್ಯಯ, ಇಲ್ಲಿದೆ ಮಾಹಿತಿ

| Updated By: ಆಯೇಷಾ ಬಾನು

Updated on: Aug 29, 2023 | 10:42 AM

ವಿದ್ಯುತ್ ಸರಬರಾಜು ಕಂಪನಿಗಳು ಕೆಲ ನಿರ್ವಹಣಾ ಕಾರ್ಯಗಳನ್ನು ಕೈಗೆತ್ತಿಕೊಂಡಿರುವುದರಿಂದ ಬೆಂಗಳೂರು ನಗರದ ಹಲವು ಏರಿಯಾಗಳಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಿಗದಿತ ಸಮಯದಲ್ಲಿ ವಿದ್ಯುತ್ ಕಡಿತಗೊಳ್ಳುವ ಸಾಧ್ಯತೆ ಇದೆ. ಯಾವ ಯಾವ ಏರಿಯಾಗಳಲ್ಲಿ ಯಾವಾಗ ವಿದ್ಯುತ್ ವ್ಯತ್ಯಾಸ ಉಂಟಾಗಲಿದೆ ಎಂಬ ಮಾಹಿತಿ ಇಲ್ಲಿದೆ.

Bangalore Power Cut: ಇಂದಿನಿಂದ ಮೂರು ದಿನ ಬೆಂಗಳೂರಲ್ಲಿ ವಿದ್ಯುತ್ ವ್ಯತ್ಯಯ, ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಆ.29: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಸ್ಕಾಂ ಹಾಗೂ ಕೆಪಿಟಿಸಿಎಲ್(KPTCL) ಕಂಪನಿಗಳು ತ್ರೈಮಾಸಿಕ ನಿರ್ವಹಣಾ ಕಾರ್ಯಗಳನ್ನು ಕೈಗೆತ್ತಿಕೊಂಡಿರುವುದರಿಂದ ಇಂದಿನಿಂದ ಮೂರು ದಿನಗಳ ಕಾಲ ನಗರದಲ್ಲಿ ನಿಗದಿತ ವೇಳೆಯಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ(Bangalore Power Cut). ಈ ಬಗ್ಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತನ್ನ ವೆಬ್‌ಸೈಟ್​ನಲ್ಲಿ ಪ್ರಕಟಣೆ ಹೊರಡಿಸಿದೆ.

ಕೆಪಿಟಿಸಿಎಲ್, ಬೆಸ್ಕಾಂ ಎರಡನೇ ತ್ರೈಮಾಸಿಕದಲ್ಲಿ ನಿಯತಕಾಲಿಕ ನಿರ್ವಹಣಾ ಯೋಜನೆಗಳನ್ನು ಒಳಗೊಂಡಂತೆ, ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಸ್ತರಣೆಗೆ ಸ್ಥಳಾಂತರದ ಕೆಲಸಗಳು, ಸ್ಟ್ರಿಂಗ್ ಕೆಲಸಗಳು ಮತ್ತು ಜೋಡಣೆ, ಇತ್ಯಾದಿ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆ ಆ.29ರ ಮಂಗಳವಾರ, ಬುಧವಾರ ಮತ್ತು ಗುರುವಾರ ಸೇರಿ ಮೂರು ದಿನ ಬೆಂಗಳೂರಿನ ಹಲವು ಏರಿಯಾಗಳಲ್ಲಿ ನಿಗಧಿತ ಸಮಯದಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ. ನಿರ್ವಾಹಣೆ ಕಾರ್ಯಗಳು ಹೆಚ್ಚಾಗಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ನಡೆಯಲಿವೆ. ಹೀಗಾಗಿ ಈ ಸಮಯದಲ್ಲಿ ಕನಿಷ್ಠ ಐದು ಗಂಟೆಗಳ ಕಾಲ ವಿದ್ಯುತ್ ಕಡಿತಗೊಳ್ಳುವ ಸಾಧ್ಯತೆ ಇದೆ.

ಆಗಸ್ಟ್ 29ರ ಮಂಗಳವಾರ ಯಾವ ಯಾವ ಏರಿಯಾಗಳಲ್ಲಿ ವಿದ್ಯುತ್ ಕಡಿತ

ಆನಂದ ನಗರ, ತಿರುಮಲಾಪುರ, ಟಿ ಬೇಗೂರು, ಹುಚ್ಚೇಗೌಡನಪಾಳ್ಯ, ಮಾರೋಹಳ್ಳಿ, ಬೈರನಹಳ್ಳಿ, ಗಂಗಾನಗಟ್ಟ, ಹುಣಸೆಘಟ್ಟ, ಸೂಗೂರು, ಎಂ ಗೊಲ್ಲರಟ್ಟಿ ಮತ್ತು ಕಾನುಘಟ್ಟ.

ಇದನ್ನೂ ಓದಿ: ಕೋಟಿ ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಹೆಸ್ಕಾಂ ವ್ಯಾಪ್ತಿಯ ಸರ್ಕಾರಿ ಇಲಾಖೆಗಳು

ಆಗಸ್ಟ್ 30, ಬುಧವಾರ ಎಲ್ಲೆಲ್ಲಿ ವಿದ್ಯುತ್ ಕಡಿತ

ಬಿಲಂಕೋಟೆ ಏರಿಯಾ, ಹೊಸಹಳ್ಳಿ, ಹನುಮಂತಪುರ, ಕುಳ್ಳುವನಹಳ್ಳಿ, ಲಕ್ಕೇನಹಳ್ಳಿ, ದೊಡ್ಡೇರಿ, ಗುಂಡೇನಹಳ್ಳಿ, ಕುಲವನಹಳ್ಳಿ ಗ್ರಾ.ಪಂ., ಹರೇಬೋಮನಹಳ್ಳಿ ಗ್ರಾ.ಪಂ., ಕೋಡಿಹಳ್ಳಿ, ಕರದಳ್ಳು, ನಾನ್ವಿಕೆರೆ, ಕಲ್ಲಹಳ್ಳಿ, ಗುಂಗುರಮಲೆ, ಅಂಚೆಕೊಪ್ಪಲು, ಜಿ.ಪಂ. ಮಿತ್ರ, ಕಂದಿಕೆರೆ, ಅಜ್ಜಿಗುಡ್ಡೆ , ಸದರಹಳ್ಳಿ, ಉಪ್ಪಿಕಟ್ಟೆ, ಮತ್ತಿಟ್ಟ, ಹಂದನಕೆರೆ, ಹರೇನಹಳ್ಳಿ, ಸಿಂಗದಹಳ್ಳಿ, ಬಾರ್ಸಿಡ್ಲಹಳ್ಳಿ, ಕತ್ರಿಕೆಹಾಳ್, ಗೈರೆಹಳ್ಳಿ, ಸಿದ್ದರಾಮನಗರ, ಹೆಸರಳ್ಳಿ, ಶೆಟ್ಟಿಕೆರೆ, ಕುಪ್ಪೂರು, ತಮಡಿಹಳ್ಳಿ, ಹುಳಿಯಾರ್, ಯೆಳ್ನಾಡು, ಕೊರ್ಗೆರೆ, ಟಿ. ನೂಂಕೆರೆ, ಟಿ. ನೂಂಕೆರೆ, ಟಿ. ಎಲ್ಲಾ 11 ಕೆ.ವಿ ಚೇಳೂರು, ಹೊಸಕೆರೆ, ಹಾಗಲವಾಡಿ ಮತ್ತು ನಂದಿಹಳ್ಳಿ ಉಪ ಕೇಂದ್ರಗಳ ಫೀಡರ್‌ಗಳು.

ಆಗಸ್ಟ್ 31, ಗುರುವಾರ ಏರಿಯಾಗಳಲ್ಲಿ ವಿದ್ಯುತ್ ಕಡಿತ

ಆನಂದ ನಗರ, ತಿರುಮಲಾಪುರ, ಟಿ ಬೇಗೂರು, ಹುಚ್ಚೇಗೌಡನಪಾಳ್ಯ, ಬೂದಿಹಾಳ್ ಗ್ರಾಮ ಪಂಚಾಯಿತಿ, ಕಾಚನಹಳ್ಳಿ, ಯರಮಂಚನಹಳ್ಳಿ, ವೀರನಂಜಿಪುರ, ಬೊಮ್ಮನಹಳ್ಳಿ, ಬಾರಾಡಿ, ಮಂಡಿಗೆರೆ ಮತ್ತು ಬಸವೇಶ್ವರ.

ಬೆಂಗಳೂರಿಗೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ