Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿಂದು ವಿದ್ಯುತ್ ವ್ಯತ್ಯಯ

ಬೆಂಗಳೂರು ಪವರ್ ಕಟ್: ಬೆಂಗಳೂರಿನಲ್ಲಿ ಬೆಸ್ಕಾಂನಿಂದ ಚಳ್ಳಕೆರೆ ವಿಭಾಗ ವ್ಯಾಪ್ತಿಯಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ನಿನ್ನೆಯಿಂದ (ಡಿ.28) ಪವರ್ ಕಟ್ ಮಾಡಲಾಗಿದ್ದು, ಇಂದೂ ಸಹ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ಕಾಮಗಾರಿಯಿಂದಾಗಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯ ವರೆಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗಲಿದೆ.

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿಂದು ವಿದ್ಯುತ್ ವ್ಯತ್ಯಯ
ಬೆಂಗಳೂರಿನ ಈ ಪ್ರದೇಶಗಳಲ್ಲಿಂದು ವಿದ್ಯುತ್ ವ್ಯತ್ಯಯ

Updated on: Dec 29, 2025 | 9:41 AM

ಬೆಂಗಳೂರು, ಡಿಸೆಂಬರ್ 29: ಬೆಂಗಳೂರಿನಲ್ಲಿ ಬೆಸ್ಕಾಂನಿಂದ (BESCOM)ಚಳ್ಳಕೆರೆ ವಿಭಾಗ ವ್ಯಾಪ್ತಿಯಲ್ಲಿ ಮೂರು ತಿಂಗಳ ಕಾಲ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಇಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಕೇಳಿಕೊಂಡಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಎಲ್ಲೆಲ್ಲಿ ಪವರ್ ಕಟ್?

ಚಳ್ಳಕೆರೆ ವಿಭಾಗ ವ್ಯಾಪ್ತಿಯಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ ಹಿನ್ನೆಲೆಯಲ್ಲಿ ನಿನ್ನೆ (ಡಿ.28) ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು. ಇಂದೂ ಸಹ ಇದೇ ಕಾರಣಕ್ಕೆ ಬೆಳಗ್ಗೆ 10 ರಿಂದ ಸಂಜೆ 5ರ ತನಕ ವಿದ್ಯುತ್‌ ಸ್ಥಗಿತವಾಗಲಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಎಇಇ ಜಿ.ಶಿವಪ್ರಸಾದ್ ಮನವಿ ಮಾಡಿದ್ದಾರೆ. ನಿನ್ನೆ ಚಳ್ಳಕೆರೆ ನಗರ ವ್ಯಾಪ್ತಿಯ ಬೆಂಗಳೂರು, ಬಳ್ಳಾರಿ ರಸ್ತೆ, ಬುಡ್ನಹಟ್ಟಿ, ನಗರಂಗೆರೆ, ನನ್ನಿವಾಳ ಗ್ರಾಪಂ ವ್ಯಾಪ್ತಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಪವರ್ ಕಟ್ ಇತ್ತು. ಹಾಗೆಯೇ ಇಂದು ಸಾಣಿಕೆರೆ, ಸೋಮಗುದ್ದು, ಗೋಪನಹಳ್ಳಿ, ಸಾಣಿಕೆರೆ ಶಾಖೆವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

ಸಬ್ಸಿಡಿಯ ಸದ್ಬಳಕೆಗೆ ಮನವಿ

2025ರ ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆಯಡಿ ಗ್ರಾಹಕರು ತಮ್ಮ ಮನೆಯ ಮೇಲ್ಛಾವಣಿಯ ಮೇಲೆ ಸೌರ ಫಲಕ ಅಳವಡಿಸಿ ಪ್ರತಿ ತಿಂಗಳು 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯಬಹುದು. ಈ ಯೋಜನೆಗೆ ಕೇಂದ್ರ ಸರ್ಕಾರವು 1kW ಗೆ 30,000ರೂ. 2kW ಗೆ 60,000 ರೂ. ಮತ್ತು 3kW ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯಕ್ಕೆ ಗರಿಷ್ಠ 78,000 ರೂ. ಸಬ್ಸಿಡಿ ನೀಡುತ್ತಿದೆ. ಆಸಕ್ತರು ಸೂರ್ಯಘರ್ ಯೋಜನೆಗೆ ಈ ಲಿಂಕ್ ಮೂಲಕ https://pmsuryaghar.gov.in ನೋಂದಾಯಿಸಿಕೊಳ್ಳಬಹುದು ಹಾಗೂ ಬೆಸ್ಕಾಂನ ಸೋಲಾರ್ ಸಹಾಯವಾಣಿ ಸಂಖ್ಯೆ 080-22340816 ಕ್ಕೆ ಕರೆಮಾಡಬಹುದು.

ಬೆಂಗಳೂರು ನಗರ

ದಕ್ಷಿಣ ವೃತ್ತ : 8277884011

ಪಶ್ಚಿಮ ವೃತ್ತ:8277884012

ಪೂರ್ವ ವೃತ್ತ : 8277884013

ಉತ್ತರ ವೃತ್ತ :8277884014

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:48 am, Mon, 29 December 25