ಬೆಂಗಳೂರು, ಸೆಪ್ಟೆಂಬರ್ 25: ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಇಂದು ಪೂರ್ವಯೋಜಿತ ಪವರ್ ಕಟ್ ಇರಲಿದೆ. ದುರಸ್ತಿ ಮತ್ತು ನಿರ್ವಹಣೆಯ ಕಾರಣಕ್ಕೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದ್ದು, ವಿದ್ಯುತ್ ಕಡಿತ ಪ್ರದೇಶ ಹಾಗೂ ಸಮಯದ ವಿವರವನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸುವ ಮೂಲಕ ಒದಗಿಸಿದೆ.
ಕ.ವಿ.ಪ್ರ.ನಿ.ನಿ ಲೈನ್ ದುರಸ್ತಿ/ ನಿರ್ವಹಣಾ ಕಾಮಗಾರಿ ಸಲುವಾಗಿ ಇಂದು ಈ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ. ವಿದ್ಯುತ್ ಅಡಚಣೆಗಾಗಿ ವಿಷಾದಿಸುತ್ತೇವೆ. ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅಥವಾ http://bescom.karnataka.gov.in ಸಂಪರ್ಕಿಸಿ ಎಂದು ಬೆಸ್ಕಾಂ ಮನವಿ ಮಾಡಿದೆ.
ಶಿವಾಜಿ ನಗರ ವ್ಯಾಪ್ತಿಯ ಪೂರ್ವಾಂಕರ ಅಪಾರ್ಟ್‌ಮೆಂಟ್, ಗವಿಗುಡಿ, ಕಲ್ಕೆರೆ ರಸ್ತೆ, ಪೂರ್ಣ ಪ್ರಜ್ಞ, ಮಾರಗೊಂಡನಹಳ್ಳಿ. ಹಳೇಹಳ್ಳಿ. ಬೈರತಿ ಗ್ರಾಮ, ಬೈರತಿ ಬಂಡೆ, ಕನಕಶ್ರೀ ಲೇಔಟ್, ಕಿನಿಯಾಸನಹಳ್ಳಿ ಪ್ರದೇಶಗಳಲ್ಲಿ ಬೆಳಗ್ಗೆ 11 ರಿಂದ ಸಂಜೆ 3.30ರ ವರೆಗೆ ಪವರ್ ಕಟ್ ಇರಲಿದೆ.
ಆರ್ಆರ್ ನಗರ, ರಾಜಾಜಿನಗರ ವ್ಯಾಪ್ತಿಯ ಪ್ರದೇಶಗಳಲ್ಲಿಯೂ ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಕಡಿತ ಇರಲಿದೆ. ಆರ್ಆರ್ ನಗರ, ರಾಜಾಜಿನಗರ ವ್ಯಾಪ್ತಿಯ ಕಲ್ಯಾಣನಗರ, ಬಿಡಿಎ ಲೇಔಟ್, ಶಕ್ತಿ ಉದ್ಯಾನ, ಆದರ್ಶನಗರ, ಬಿಡಿಎ ಲೇಔಟ್, ಎನ್‌ಜಿಇಎಫ್ ಲೇಔಟ್, ನಾಗರಭಾವಿ ಭಾಗ ವಿನಾಯಕ ಲೇಔಟ್, ಬಿಡಿಎ 13 ಹಾಗೂ 14ನೇ ಬ್ಲಾಕ್, ಕೆಂಗಂಟೆ, ಐಟಿಐ ಲೇಔಟ್, ಮಲ್ಲತ್ತಹಳ್ಳಿ, ಉಲ್ಲಿಯಲ್ ರಸ್ತೆ, ಸರಕಾರ, ಪತ್ರಿಕಾ ಬಡಾವಣೆ, ಗವಿಪುರಂ ಲೇಔಟ್, ಎನ್‌ಜಿಇಎಫ್ ಲೇಔಟ್ ಭಾಗ ಮೂಡಲಪಾಳ್ಯ. ಸೆಂಜೀವನಿನಗರ, ಎಸ್.ವಿ.ಜಿ.ಮಾಗರ, ಪಿ.ಎಸ್. ನಗರ. ಕಲ್ಯಾಣನಗರ ನಾಗರಭಾವಿ ಗ್ರಾಮ, ಎನ್‌ಜಿಇಎಫ್ ಲೇಔಟ್, ಟೀಚರ್ಸ್ ಕಾಲೋನಿ, ಐಎಸ್ಇಸಿ, ನ್ಯಾಷನ್ ಲಾ ಸ್ಕೂಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.
ಜಯನಗರ ವ್ಯಾಪ್ತಿಯ ಮಂತ್ರಿ ಅಪಾರ್ಟ್‌ಮೆಂಟ್, ತಲಘಟ್ಟಪುರ, ರಘುವನಗಲ್ಲಿ, ಗುಬ್ಲಾಲ ಕುವೆಂಪು ನಗರ, ವಿವಿ ನಗರ, ವಿವಿ ಲೇಔಟ್, ಬಾಲಾಜಿ ಲೇಔಟ್, ರಾಯಲ್ ಫಾರ್ಮ್ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರ ವರೆಎ ವಿದ್ಯುತ್ ಕಡಿತ ಇರಲಿದೆ.
ರಾಜಾಜಿನಗರ ವ್ಯಾಪ್ತಿಯ ವಿದ್ಯಾಗಿರಿ ಲೇಔಟ್, ಸುವರ್ಣಾ ಲೇಔಟ್, ಸಿದ್ದಗಂಗಾ ಶಾಲೆ, ಗಂಗಗೊಂಡನಹಳ್ಳಿ ಬಿಡಿ ಬಡಾವಣೆ ದುರ್ಗಾಪರಮೇಶ್ವರಿ ದೇವಸ್ಥಾನ, ನಾಗರಭಾವಿ ಸರ್ಕಲ್, ಗಂಗಗೊಂಡನಹಳ್ಳಿ ಪ್ರದೇಶಗಳಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30 ರ ವರೆಗೆ ಪವರ್ ಕಟ್ ಇರಲಿದೆ.
ಇದನ್ನೂ ಓದಿ: ಶಿವಾಜಿನಗರದಲ್ಲಿರುವ 70 ವರ್ಷ ಹಳೆ ಪಾಲಿಕೆ ಹೆರಿಗೆ ಆಸ್ಪತ್ರೆಗೆ ಬೀಗ; ಹೊಸ ಆಸ್ಪತ್ರೆ ನಿರ್ಮಾಣ ಹೆಸರಲ್ಲಿ ಕಾಮಗಾರಿ ವಿಳಂಬ
ಉಳಿದಂತೆ ಕೋರಮಂಗಲದ ತಲಕಾವೇರಿ ಲೇಔಟ್ ಮತ್ತು ವಿನಾಯಕ ನಗರಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಹಾಗೂ ಸೆಸ್ನಾ ಮುಖ್ಯ ರಸ್ತೆ, ಗೇರ್ ಸ್ಕೂಲ್ ರಸ್ತೆ, ಕಾವೇರಪ್ಪ ಲೇಔಟ್ ಕಾಡುಬಿಸನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಪವರ್ ಕಟ್ ಇರಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ