AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಯನಗರ, ಲಾಲ್‌ಬಾಗ್, ಮಾರ್ಕೆಟ್‌ ಸುತ್ತಮುತ್ತ ಮಳೆರಾಯನ ದಿಢೀರ್ ಎಂಟ್ರಿ, ಅ.26ರವರೆಗೆ ಯೆಲ್ಲೋ ಅಲರ್ಟ್

ಬೆಂಗಳೂರಿನಲ್ಲಿ ಅಕ್ಟೋಬರ್ 22ರಂದು ದಿಢೀರ್ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಯಿತು. ಭಾರತೀಯ ಹವಾಮಾನ ಇಲಾಖೆ (IMD) ಅಕ್ಟೋಬರ್ 26ರವರೆಗೆ ಬೆಂಗಳೂರು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಮುಂದಿನ 7 ದಿನಗಳ ಕಾಲ ರಾಜ್ಯದಲ್ಲಿ ಗುಡುಗು-ಮಿಂಚು ಸಹಿತ ಮಳೆ ಮುಂದುವರಿಯುವ ಸಾಧ್ಯತೆಯಿದೆ, ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡಿದ್ದಾರೆ.

ಜಯನಗರ, ಲಾಲ್‌ಬಾಗ್, ಮಾರ್ಕೆಟ್‌ ಸುತ್ತಮುತ್ತ ಮಳೆರಾಯನ ದಿಢೀರ್ ಎಂಟ್ರಿ, ಅ.26ರವರೆಗೆ ಯೆಲ್ಲೋ ಅಲರ್ಟ್
ಬೆಂಗಳೂರಿನಲ್ಲಿ ಮಳೆ
ಕಿರಣ್​ ಸೂರ್ಯ
| Edited By: |

Updated on: Oct 22, 2026 | 2:15 PM

Share

ಬೆಂಗಳೂರು, ಅ.22: ಬೆಂಗಳೂರಿನಲ್ಲಿ ಬೆಳಿಗ್ಗೆಯಿಂದ ಮಳೆಯ ಆಗಮನ ಆಗಿದೆ. ಮೋಡಕವಿದ ವಾತಾವರಣ ಕೂಡ ಇತ್ತು, ಇದೀಗ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಇಂದು (ಅ.22) ಮಧ್ಯಾಹ್ನದಿಂದಲೇ ದಿಢೀರ್ ಮಳೆ ಆರಂಭವಾಗಿದ್ದು, ನಗರದ ಪ್ರಮುಖ ಪ್ರದೇಶಗಳಲ್ಲಿ ಧೋ ಎಂದು ಸುರಿದ ಮಳೆಯಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಪರದಾಟ ನಡೆಸಿದ್ದಾರೆ. ಸಿಟಿಯ ಹಲವೆಡೆ ಮೋಡಕವಿದ ವಾತಾವರಣ ಮುಂದುವರಿದಿದ್ದು, ಅಕ್ಟೋಬರ್ 26ರವರೆಗೆ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಹವಾಮಾನ ಇಲಾಖೆ (IMD) ಯೆಲ್ಲೋ ಅಲರ್ಟ್ ಘೋಷಿಸಿದೆ.

ಬೆಂಗಳೂರಿನ ಪ್ರಮುಖ ವಾಣಿಜ್ಯ ಹಾಗೂ ಸಾರ್ವಜನಿಕ ಪ್ರದೇಶಗಳಾದ ಜಯನಗರ, ಲಾಲ್‌ಬಾಗ್ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಇದರೊಂದಿಗೆ ಕಾರ್ಪೊರೇಷನ್, ಕೆ.ಆರ್. ಮಾರ್ಕೆಟ್, ಶಾಂತಿನಗರ, ವಿಧಾನಸೌಧ, ರಾಜಾಜಿನಗರ, ಮಲ್ಲೇಶ್ವರಂ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ.

ದಿಢೀರ್ ಸುರಿದ ಮಳೆಯಿಂದಾಗಿ ರಸ್ತೆ ಬದಿ ಸಂಚರಿಸುತ್ತಿದ್ದ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ರಕ್ಷಣೆಗೆ ಪರದಾಡುವಂತಾಯಿತು. ಸವಾರರು ಮಳೆಯಿಂದ ಬಚಾವಾಗಲು ರಸ್ತೆಬದಿಯ ಹೋಟೆಲ್‌ಗಳು ಹಾಗೂ ಮೇಲ್ಸೇತುವೆಗಳ ಕೆಳಗೆ ಆಶ್ರಯ ಪಡೆದರು. ರಸ್ತೆಗಳಲ್ಲಿ ಸಾರ್ವಜನಿಕರು ಛತ್ರಿಗಳನ್ನು ಹಿಡಿದು ಓಡಾಡುತ್ತಿದ್ದ ದೃಶ್ಯಗಳು ಕಂಡುಬಂದವು.

ಭಾರತೀಯ ಹವಾಮಾನ ಇಲಾಖೆ ನೀಡಿರುವ ವರದಿ ಪ್ರಕಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್ 26ರವರೆಗೆ ಕರಾವಳಿ ಹಾಗೂ ದಕ್ಷಿಣ ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಅಭಾವ ಇರಲಿದ್ದು, ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ನಗರದಲ್ಲಿ ಇಂದು ಗರಿಷ್ಠ ತಾಪಮಾನ 27°C ಹಾಗೂ ಕನಿಷ್ಠ ತಾಪಮಾನ 21°C ದಾಖಲಾಗುವ ಸಾಧ್ಯತೆಯಿದೆ. ದಿನಪೂರ್ತಿ ತಂಪಾದ ಹಾಗೂ ಮೋಡಕವಿದ ವಾತಾವರಣ ಇರಲಿದೆ.

ಇದನ್ನೂ ಓದಿ: ಪ್ರಶಾಂತ-ಅಭಿಮನ್ಯು ಆನೆಗಳ ಶ್ರೇಷ್ಠ ಸೇವೆ: ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?

ಮುಂದಿನ 7 ದಿನಗಳ ಕಾಲ ಕರಾವಳಿ ಹಾಗೂ ಒಳನಾಡಿನಲ್ಲಿ ಗುಡುಗು-ಮಿಂಚು ಸಹಿತ ಮಳೆ:

ರಾಜ್ಯದಲ್ಲಿ ಮುಂಗಾರು ಉತ್ತರ ಮಾರುತಗಳ ಆರ್ಭಟ ಹೆಚ್ಚಾಗಿದ್ದು, ಭಾರತೀಯ ಹವಾಮಾನ ಇಲಾಖೆ ಮುಂದಿನ 7 ದಿನಗಳ ಮಳೆ ಮುನ್ಸೂಚನಾ ವರದಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದಾದ್ಯಂತ ಕೆಲವೆಡೆ ಬಿಸಿಲಿನ ವಾತಾವರಣದೊಂದಿಗೆ ಮೋಡ ಕವಿದ ಹವಾಮಾನ ಇರಲಿದ್ದು, ಗುಡುಗು, ಮಿಂಚು ಹಾಗೂ ಜೋರಾದ ಗಾಳಿಯೊಂದಿಗೆ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮುಖ್ಯವಾಗಿ ದಕ್ಷಿಣ ಒಳನಾಡು ಭಾಗಗಳಿಗೆ ಅಕ್ಟೋಬರ್ 22 ರಿಂದ 26 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು ‘ಯೆಲ್ಲೋ ಅಲರ್ಟ್’ ಮಾದರಿಯ ಎಚ್ಚರಿಕೆಯನ್ನು ನೀಡಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಕೊಳಚೆ ನೀರು, ಗುಂಡಿಗಳ ಸಮಸ್ಯೆ
ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಕೊಳಚೆ ನೀರು, ಗುಂಡಿಗಳ ಸಮಸ್ಯೆ
ಆಯುಧ ಪೂಜೆ ದಿನ ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಮುಖಂಡ
ಆಯುಧ ಪೂಜೆ ದಿನ ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಮುಖಂಡ
ಆನೆ ಸೋಮಣ್ಣನ ರಂಪಾಟಕ್ಕೆ ಮುರಿದು ಬಿದ್ದ ದೇವಿಯ ಕೈ
ಆನೆ ಸೋಮಣ್ಣನ ರಂಪಾಟಕ್ಕೆ ಮುರಿದು ಬಿದ್ದ ದೇವಿಯ ಕೈ
ಬೆಂಗಳೂರಿನಲ್ಲಿ ನಿಯಮ ಪಾಲಿಸದ ಪಿಜಿಗಳಿಗೆ ಜಿಬಿಎ ಬಿಗ್ ಶಾಕ್
ಬೆಂಗಳೂರಿನಲ್ಲಿ ನಿಯಮ ಪಾಲಿಸದ ಪಿಜಿಗಳಿಗೆ ಜಿಬಿಎ ಬಿಗ್ ಶಾಕ್
ಬಿಗ್ ಬಾಸ್ ಮನೆಯಲ್ಲಿ ಕಳ್ಳರ ಕೈಚಳಕ; ಸೆಕ್ಯುರಿಟಿ ಕಣ್ಣು ತಪ್ಪಿಸಿ ಕಳ್ಳತನ
ಬಿಗ್ ಬಾಸ್ ಮನೆಯಲ್ಲಿ ಕಳ್ಳರ ಕೈಚಳಕ; ಸೆಕ್ಯುರಿಟಿ ಕಣ್ಣು ತಪ್ಪಿಸಿ ಕಳ್ಳತನ
ಆಂಧ್ರದಲ್ಲಿ ಕಟ್ಟಿಗೆ ಬಡಿದಾಟದ ವೇಳೆ ಕಾಲ್ತುಳಿತ, ಓರ್ವ ಸಾವು
ಆಂಧ್ರದಲ್ಲಿ ಕಟ್ಟಿಗೆ ಬಡಿದಾಟದ ವೇಳೆ ಕಾಲ್ತುಳಿತ, ಓರ್ವ ಸಾವು
ಪೂಜೆಗೆ ತೆರಳುತ್ತಿದ್ದ ಸಚಿವರು, ಶಾಸಕರನ್ನು ಅಡ್ಡಗಟ್ಟಿದ ಎಸ್‌ಪಿ ರಿಷ್ಯಂತ್
ಪೂಜೆಗೆ ತೆರಳುತ್ತಿದ್ದ ಸಚಿವರು, ಶಾಸಕರನ್ನು ಅಡ್ಡಗಟ್ಟಿದ ಎಸ್‌ಪಿ ರಿಷ್ಯಂತ್
ವಿಧಾನಸೌಧ ಬಾಂಬ್ ಸ್ಫೋಟದ ನಕಲಿ ರೀಲ್ಸ್​​​ ಹಾಕಿದ್ದ ಯುವಕ ಅರೆಸ್ಟ್
ವಿಧಾನಸೌಧ ಬಾಂಬ್ ಸ್ಫೋಟದ ನಕಲಿ ರೀಲ್ಸ್​​​ ಹಾಕಿದ್ದ ಯುವಕ ಅರೆಸ್ಟ್