ಇದು ಮಧ್ಯಮ ವರ್ಗದ ಹುಡುಗರ ಜೀವನ: ಬೆಂಗಳೂರಿನಲ್ಲಿ 17 ಗಂಟೆ ರ‍್ಯಾಪಿಡೋ ಓಡಿಸಿ 1,820 ರೂ. ಗಳಿಸಿದ ವ್ಯಕ್ತಿ

ಬೆಂಗಳೂರಿನಲ್ಲಿ ರ‍್ಯಾಪಿಡೋ ಚಾಲಕರೊಬ್ಬರು ರಾತ್ರಿ ಸಮಯದಲ್ಲಿ ಬೈಕ್-ಟ್ಯಾಕ್ಸಿ ಓಡಿಸಿ ಹೆಚ್ಚುವರಿ ಆದಾಯ ಗಳಿಸುತ್ತಿರುವ ಕುರಿತು ರೆಡ್ಡಿಟ್ ಪೋಸ್ಟ್ ವೈರಲ್ ಆಗಿದೆ. ರಾತ್ರಿ ಬೋನಸ್, ಕಡಿಮೆ ಟ್ರಾಫಿಕ್‌ನಿಂದಾಗಿ ಐಟಿ ಸಂಬಳಕ್ಕಿಂತಲೂ ಹೆಚ್ಚು ಗಳಿಕೆ ಸಾಧ್ಯ. ಆದರೆ, ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳ ಅಪಾಯವಿದೆ ಎಂಬ ಚರ್ಚೆ ಇದೆ. ಬೆಂಗಳೂರಿನ ದುಬಾರಿ ಜೀವನ ವೆಚ್ಚಕ್ಕೆ ಇಂತಹ ಗಿಗ್ ಕೆಲಸ ಅನಿವಾರ್ಯವಾಗಿದೆ.

ಇದು ಮಧ್ಯಮ ವರ್ಗದ ಹುಡುಗರ ಜೀವನ: ಬೆಂಗಳೂರಿನಲ್ಲಿ 17 ಗಂಟೆ ರ‍್ಯಾಪಿಡೋ ಓಡಿಸಿ 1,820 ರೂ. ಗಳಿಸಿದ ವ್ಯಕ್ತಿ
ಸಾಂದರ್ಭಿಕ ಚಿತ್ರ

Updated on: Jan 09, 2026 | 10:17 AM

ಬೆಂಗಳೂರು, ಜ.9: ಬೆಂಗಳೂರು ಎಂಬ ಮಹಾನಗರದಲ್ಲಿ ಜೀವನ ಕಟ್ಟಿಕೊಳ್ಳಲು ತುಂಬಾ ಉತ್ತಮ ಸ್ಥಳ, ಶ್ರಮಕ್ಕೆ ತಕ್ಕ ಇಲ್ಲಿ ಸರಿಯಾದ ಫಲ ಸಿಗುತ್ತದೆ. ಅದೆಷ್ಟೋ ಯುವಕರು ಬೆಂಗಳೂರಿಗೆ ಬಂದು ಕಡಿಮೆ ಆದಾಯ ಗಳಿಸುತ್ತಿದ್ದಾರೆ. ಇದಕ್ಕೆ ರ‍್ಯಾಪಿಡೋ ಬೈಕ್-ಟ್ಯಾಕ್ಸಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ರೆಡ್ಡಿಟ್​​​ನಲ್ಲಿ ವ್ಯಕ್ತಿಯೊಬ್ಬರು ಹಂಚಿಕೊಂಡಿರುವ ಪೋಸ್ಟ್​​ ಭಾರೀ ವೈರಲ್​​ ಆಗುತ್ತಿದೆ. ರ‍್ಯಾಪಿಡೋ (Rapido) ಬೈಕ್-ಟ್ಯಾಕ್ಸಿ ಚಾಲಕರಾಗಿ ನಾಲ್ಕು ದಿನಗಳ ಕಾಲ ನಡೆಸಿದ ಪ್ರಯೋಗದ ಬಗ್ಗೆ ಸೋಶಿಯಲ್ಲ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಅವರು ರಾತ್ರಿ 10ರ ನಂತರ ಈ ಕೆಲಸ ಮಾಡಲು ಶುರು ಮಾಡಿದ್ದಾರೆ. ರ‍್ಯಾಪಿಡೋ ರಾತ್ರಿ ಸಮಯದಲ್ಲಿ ಶೇ. 20ರಷ್ಟು ಹೆಚ್ಚುವರಿ ಹಣವನ್ನು (Night Bonus) ನೀಡುತ್ತದೆ. ಅಲ್ಲದೆ, ರಾತ್ರಿ ಸಂಚಾರ ದಟ್ಟಣೆ ಕಡಿಮೆ ಇರುವುದರಿಂದ ಬೇಗನೆ ಟ್ರಿಪ್‌ಗಳನ್ನು ಮುಗಿಸಬಹುದು.

ಈ ಇದರಲ್ಲಿ ಯಾವುದೇ ಕಮಿಷನ್ ಕಡಿತವಾಗುವುದಿಲ್ಲ. ಈ ವ್ಯಕ್ತಿ ದಿನಕ್ಕೆ ಒಟ್ಟು 16 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ (8 ಗಂಟೆ ಆಫೀಸ್ + 8 ಗಂಟೆ ರ‍್ಯಾಪಿಡೋ). ಇದು ಆರ್ಥಿಕವಾಗಿ ಲಾಭದಾಯಕವಾಗಿ ಕಂಡರೂ, ದೀರ್ಘಕಾಲದ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ.ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ರ‍್ಯಾಪಿಡೋಗೆ ಇರುವ ಬೇಡಿಕೆ ಮತ್ತು ಸಿಗುವ ಬೋನಸ್, ಸಾಮಾನ್ಯ ಸಂಬಳಕ್ಕಿಂತ ಹೆಚ್ಚಿನ ಆದಾಯ ತಂದುಕೊಡುತ್ತಿದೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಜೀವನ ವೆಚ್ಚ ಹೆಚ್ಚಿರುವುದರಿಂದ, ಕೇವಲ ಒಂದು ಸಂಬಳದಿಂದ ಜೀವನ ನಿರ್ವಹಣೆ ಕಷ್ಟ ಎಂದು ಈ ವೃತ್ತಿಯನ್ನು ಕೂಡ ಮಾಡುತ್ತಾರೆ.

ಈ ದುಡಿಮೆಯಲ್ಲಿ ವ್ಯತ್ಯಾಸಗಳು ಕಂಡು ಬರುತ್ತದೆ. ಮೊದಲ ದಿನ, ಐದು ಗಂಟೆಗಳ ಕಾಲ ಸಂಜೆ ಮತ್ತು ತಡರಾತ್ರಿಯವರೆಗೆ ರೈಡ್​​ ಮಾಡಿದ್ರೆ 630 ರೂ. ಗಳಿಸಬಹುದು. ಎರಡನೇ ದಿನವೂ ಇದೇ ಅವಧಿಯಲ್ಲಿ 750 ಗಳಿಸಿದೆ. ಕೊನೆಯ ಎರಡು ದಿನಗಳಲ್ಲಿ, ಪ್ರತಿ ರಾತ್ರಿ ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾಲ ಸವಾರಿ ಮಾಡಿ 420 ಗಳಿಸಿದ್ದಾರೆ. ಪ್ರತಿದಿನ ಒಂದೇ ರೀತಿಯ ದುಡಿಮೆ ಇದರಲ್ಲಿ ಇರುವುದಿಲ್ಲ ಎಂದು ಹೇಳಿದ್ದಾರೆ. ಈ ನಾಲ್ಕು ದಿನ ಕೆಲಸ ಮಾಡಿದ ನಂತರ ಒಟ್ಟು ಆದಾಯ 2,220 ರೂ. ಆಗಿತ್ತು. ಪೆಟ್ರೋಲ್​​​ಗೆ 400 ಹೋದ್ರೆ ಉಳಿಯುವುದು 1,820 ರೂ.

ಇದನ್ನೂ ಓದಿ: ಹೆಣ್ಣು ತಾಯಿಯಾಗುವುದು ದುರ್ಬಲತೆಯೇ? 30 ಲಕ್ಷ ರೂ. ಸಂಬಳದ ಉದ್ಯೋಗ ನಿರಾಕರಿಸಿದ ಬೆಂಗಳೂರಿನ ಮಹಿಳೆ

“ಪದವೀಧರರಿಗೆ ಸಿಗುವ ಆರಂಭಿಕ ಸಂಬಳಕ್ಕಿಂತಲೂ ರಸ್ತೆಯಲ್ಲಿ ಕಷ್ಟಪಟ್ಟು ಮಾಡುವ ಕೆಲಸಕ್ಕೆ ಹೆಚ್ಚು ಹಣ ಸಿಗುತ್ತಿದೆ. ಈ ಕೆಲಸ ನನಗೆ ಅನಿವಾರ್ಯ ಅಲ್ಲದೆ ಇರುಬಹುದು. ಇದು ದೊಡ್ಡ ಸಂಪಾದನೆಯೂ ಅಲ್ಲ, ಆದರೆ ಇದು ನನ್ನ ಚಿಕ್ಕಪುಟ್ಟ ಖರ್ಚಿಗೆ ಸಹಾಯವಾಗುತ್ತದೆ” ಎಂದು ಹೇಳಿದ್ದಾರೆ. ಇನ್ನು ಈ ಪೋಸ್ಟ್​​ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ನೆಟ್ಟಿಗರು ಕೂಡ ಕಮೆಂಟ್​​ ಮಾಡಿದ್ದಾರೆ. ನನ್ನ ರೂಮ್‌ಮೇಟ್ ಕೂಡ ಅದೇ ರೀತಿ ಮಾಡುತ್ತಾನೆ. ಮಧ್ಯಾಹ್ನ 2-10 ಕಚೇರಿ ಕೆಲಸ. ಬೆಳಿಗ್ಗೆ 10-6 ರವರೆಗೆ ಕೆಲಸ ಮಾಡುತ್ತಾನೆ. ದಿನಕ್ಕೆ 1000 ರೂ. ದುಡಿಯುತ್ತಾನೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ಇನ್ನೊಬ್ಬರು ನಿಜವಾದ ಐಟಿ ಕೆಲಸಕ್ಕಿಂತ ಗಿಗ್ ಕೆಲಸದಿಂದ ಹೆಚ್ಚು ಹಣ ಸಂಪಾದಿಸುತ್ತಿದ್ದಾನೆ ಎಂದು ಕಮೆಂಟ್​​ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ