ಹೆಣ್ಣು ತಾಯಿಯಾಗುವುದು ದುರ್ಬಲತೆಯೇ? 30 ಲಕ್ಷ ರೂ. ಸಂಬಳದ ಉದ್ಯೋಗ ನಿರಾಕರಿಸಿದ ಬೆಂಗಳೂರಿನ ಮಹಿಳೆ
ಬೆಂಗಳೂರು ಮೂಲದ ಕೋಮಲ್ ಎಂಬ ಮಹಿಳೆ, ತಾಯ್ತನದ ಕಾರಣಕ್ಕೆ ಬ್ಯಾಂಕ್‌ನಿಂದ ಸಿಕ್ಕಿದ್ದ 30 ಲಕ್ಷ ರೂ. ಸಂಬಳದ ಉದ್ಯೋಗವನ್ನು ನಿರಾಕರಿಸಿದ್ದಾರೆ. ಹೆರಿಗೆ ನಂತರ ಕೆಲಸಕ್ಕೆ ಮರಳುವ ಮಹಿಳೆಯರ ಬಗ್ಗೆ ಕಂಪನಿಗಳ ತಾರತಮ್ಯ ಧೋರಣೆಯನ್ನು ಇದು ಎತ್ತಿ ತೋರಿಸುತ್ತದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಾತೃತ್ವವು ದುರ್ಬಲತೆಯಲ್ಲ ಎಂದು ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಇದು ಕಾರ್ಪೊರೇಟ್ ಜಗತ್ತಿನಲ್ಲಿ ಮಹಿಳೆಯರ ಸ್ಥಿತಿಯ ಕುರಿತು ಚರ್ಚೆಗೆ ನಾಂದಿ ಹಾಡಿದೆ.

ಬೆಂಗಳೂರು, ಜ.7: ಬೆಂಗಳೂರು ಮೂಲದ ಮಹಿಳೆಯೊಬ್ಬರು 30 ಲಕ್ಷ ಸಂಬಳ ಸಿಗುವ ಬ್ಯಾಂಕ್ (Motherhood Discrimination) ಉದ್ಯೋಗವನ್ನು ನಿರಾಕರಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಬಾರಿ ತಾಯಿ ಆಗಿರುವ ಬಗ್ಗೆ ಹಾಗೂ ಆ ತಾಯಿತನದ ಸುಖದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಕೋಮಲ್ ಎಂಬ ಮಹಿಳೆ ಈ ಬಗ್ಗೆ ಹೇಳಿಕೊಂಡಿದ್ದಾರೆ. ತನ್ನ ನಿರ್ಧಾರವು ಹಣದ ಬಗ್ಗೆ ಅಲ್ಲ, ಹೆರಿಗೆಯ ನಂತರ ಕೆಲಸಕ್ಕೆ ಮರಳುವ ಮಹಿಳೆಯರಿಗೆ ಕಚೇರಿಯಲ್ಲಿ ಸಿಗುವ ಬೆಲೆ ಹೇಗಿರುತ್ತದೆ ಎಂಬುದನ್ನು ತಿಳಿಸಿದ್ದಾರೆ. ಮಗು ಪಡೆದ ನಂತರ ಮಹಿಳೆಯರು ದುರ್ಬಲರು ಎಂಬ ಭಾವನೆ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಕೋಮಲ್ ಅವರು ಹೇರಿಗೆ ಕಾರಣಕ್ಕೆ ಹಿಂದಿನ ಕೆಲಸವನ್ನು ಐದನೇ ತಿಂಗಳಲ್ಲಿ ತೊರೆದು ನಂತರ, ತಾಯಿತನದ ಸುಖವನ್ನು ಪಡೆದಿದ್ದಾರೆ ಎಂದು ಈ ಪೋಸ್ಟ್ನಲ್ಲಿ ಹೇಳಿದ್ದಾರೆ. ಕೋಮಲ್ ಅವರ ಗಂಡ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದರು, ಆದರೆ ಕೋಮಲ್ ಮುಂಬೈನಲ್ಲಿ ವಾಸವಾಗಿದ್ದರು. ನಂತರ ಅವರು ಕೂಡ ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ಇಲ್ಲಿನ ಬ್ಯಾಂಕ್ವೊಂದು, ಅವರ ಪ್ರೊಫೈಲ್ ಮತ್ತು ಆದ್ಯತೆಯ ಸ್ಥಳ ಎರಡಕ್ಕೂ ಹೊಂದಿಕೆಯಾಗುವ ಕೆಲಸ ನೀಡಲು ಮುಂದಾಗಿತ್ತು. ಅದಕ್ಕಾಗಿ ಅವರಿಗೆ ಸಂದರ್ಶನವನ್ನು ಕೂಡ ಮಾಡಿತ್ತು. ಸಂದರ್ಶನಕ್ಕಾಗಿ 8 ತಿಂಗಳು ತೆಗೆದುಕೊಂಡಿದೆ.
ಉದ್ಯೋಗ ಪಡೆಯುವವರಿಗೆ ಬ್ಯಾಂಕ್ ಯಾವುದೇ ಆಂತರಿಕ ನಿಯಮಗಳನ್ನು ಮಾಡಿರಲಿಲ್ಲ. ಆ ಕಾರಣಕ್ಕೆ ಇವರು ತಾಯಿ ಆಗಿರುವ ಬಗ್ಗೆ ಬ್ಯಾಂಕ್ಗೆ ಹೇಳಿಲ್ಲ. ತಾಯೊಯಾದ ಕೇವಲ 14 ದಿನಗಳ ನಂತರ ಸಂದರ್ಶನವನ್ನು ಅಂತಿಮ ಮಾಡಿ, ಅವರಿಗೆ ಕೆಲಸ ಪಕ್ಕಾ ಮಾಡಿತ್ತು. ಆದರೆ ಈ ವೇಳೆ ಕೋಮಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಬ್ಯಾಂಕ್ಗೆ ತಿಳಿಯಿತು. ಅದಕ್ಕೆ ಕೋಮಲ್ ಕೂಡ ನಾನು ಇತ್ತೀಚೆಗೆ ತಾಯಿಯಾಗಿರುವುದು ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಬ್ಯಾಂಕ್ ಇದಕ್ಕೆ ಒಪ್ಪಿಲ್ಲ. ಆದರೆ ಇದರ ಹೊರತಾಗಿಯೂ, ಪ್ರಕ್ರಿಯೆ ಮುಂದುವರೆದಿದೆ ಎಂದು ಕೋಮಲ್ ಹೇಳಿದ್ದಾರೆ. ಮುಖಾಮುಖಿ ಸಂದರ್ಶನದಲ್ಲಿ, ಸಂದರ್ಶಕರು, 3 ತಿಂಗಳ ಮಗು ಇರಬೇಕಾದರೆ ಇಷ್ಟು ಬೇಗ ಯಾಕೆ ಮತ್ತೆ ಕೆಲಸ ಬಂದಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ವೈಯಕ್ತಿಕ ಕಾರಣ ನೀಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
View this post on Instagram
“ಸಂಸ್ಥೆಯು ನನ್ನ ಪ್ರೊಫೈಲ್ ಅನ್ನು ಇಷ್ಟಪಟ್ಟಿದ್ದರೂ, ತಾಯಿ ಎಂದು ತಿಳಿದ ನಂತರ ಆಫರ್ನ್ನು ಕೂಡ ಕಡಿಮೆ ಮಾಡಲಾಗಿತ್ತು. 30 ಲಕ್ಷ ರೂ. ಆಫರ್ ಅನ್ನು ಸ್ವೀಕರಿಸಿ ಅಥವಾ ಆಫರ್ ಹಿಂಪಡೆಯಬಹುದು ಎಂದು ಹೇಳಿದ್ದಾರೆ. ಇಲ್ಲಿ ಹಣದ ಮೌಲ್ಯಕ್ಕಿಂತ, ಕೆಲಸ, ಸಾಮರ್ಥ್ಯ, ಭಾವನೆಗಳಿಗೆ ಬೆಲೆ ಇಲ್ಲ. ಮಗುವಿದೆ ಎಂಬ ಕಾರಣಕ್ಕೆ ನನ್ನನ್ನು ದುರ್ಬಲ ಎಂದು ನಿರ್ಧರಿಸಿದ್ದಾರೆ. ಹಾಗಾಗಿ ನಾನು ಅಲ್ಲಿಂದ ಹೊರನಡೆದೆ, ಅವರ ಈ ಪ್ರಸ್ತಾಪವನ್ನು ತಿರಸ್ಕರಿಸುವುದು ನನ್ನ ಜೀವನದ ಉತ್ತಮ ನಿರ್ಧಾರವಾಗಿತ್ತು. ನಾನು ಈ ಬಗ್ಗೆ ಯಾವುದೇ ವಿಷಾದ ವ್ಯಕ್ತಪಡಿಸುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಹೊಸ ಪ್ಲಾನ್: ಶಾಲಾ ಬಸ್‌ನಲ್ಲಿ ಬಯೋ-ಟಾಯ್ಲೆಟ್ ಸೌಲಭ್ಯ
ಈ ಪೋಸ್ಟ್ಗೆ ಹಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಒಳ್ಳೆಯ ನಿರ್ಧಾರ ಮಾತೃತ್ವ ರಜೆಯ ನಂತರ ಕೆಲಸಕ್ಕೆ ಮರಳುವವರ ದುಃಸ್ಥಿತಿ ಮತ್ತೊಂದು ವೃತ್ತಾಂತ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇದು ಕಂಪನಿಯ ಸಮಸ್ಯೆ ಮಾತ್ರವಲ್ಲ, ಹಲವು ಕಡೆ ಇಂತಹ ಘಟನೆಗಳು ನಡೆದಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ವೇತನ, ಮನ್ನಣೆ ಮತ್ತು ನಿರೀಕ್ಷೆಗಳ ವಿಷಯದಲ್ಲಿ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಮಹಿಳೆಯರ ಕಡೆಗೆ ಪಕ್ಷಪಾತ ಹೊಂದಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
