AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಟ್ರಾಫಿಕ್‌ ಸಮಸ್ಯೆಗೆ ಹೊಸ ಪ್ಲಾನ್: ಶಾಲಾ ಬಸ್‌ನಲ್ಲಿ ಬಯೋ-ಟಾಯ್ಲೆಟ್ ಸೌಲಭ್ಯ

ಬೆಂಗಳೂರಿನ ಭಾರಿ ಟ್ರಾಫಿಕ್‌ನಿಂದಾಗಿ ಶಾಲಾ ವಿದ್ಯಾರ್ಥಿಗಳ ಪ್ರಯಾಣ ಕಷ್ಟಕರವಾಗಿದ್ದು, ಇಂಡಸ್ ಇಂಟರ್‌ನ್ಯಾಷನಲ್ ಶಾಲೆ ಮಹತ್ವದ ಹೆಜ್ಜೆಯಿಟ್ಟಿದೆ. ದೂರದ ಮಾರ್ಗಗಳ ಬಸ್‌ಗಳಲ್ಲಿ ತಲಾ 5 ಲಕ್ಷ ರೂ. ವೆಚ್ಚದಲ್ಲಿ ಜೈವಿಕ ಶೌಚಾಲಯಗಳನ್ನು ಅಳವಡಿಸಿದೆ. ಇದು ಮಕ್ಕಳಿಗೆ ದೀರ್ಘ ಪ್ರಯಾಣದಲ್ಲಿ ಎದುರಾಗುವ ಅನಾರೋಗ್ಯ, ಆತಂಕ ತಪ್ಪಿಸಿ, ಆರಾಮದಾಯಕ ಪ್ರಯಾಣಕ್ಕೆ ನೆರವಾಗಲಿದೆ. ದೇಶದಲ್ಲಿ ಶಾಲಾ ಬಸ್‌ಗಳಲ್ಲಿ ಈ ಸೌಲಭ್ಯ ಅಳವಡಿಸಿದ ಮೊದಲ ಶಾಲೆ ಇದಾಗಿದೆ.

ಬೆಂಗಳೂರು ಟ್ರಾಫಿಕ್‌ ಸಮಸ್ಯೆಗೆ ಹೊಸ ಪ್ಲಾನ್: ಶಾಲಾ ಬಸ್‌ನಲ್ಲಿ ಬಯೋ-ಟಾಯ್ಲೆಟ್ ಸೌಲಭ್ಯ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jan 07, 2026 | 2:00 PM

Share

ಬೆಂಗಳೂರು, ಜ.7: ಬೆಂಗಳೂರಿನ ಟ್ರಾಫಿಕ್​ ಇಲ್ಲಿ (Bengaluru traffic solution) ಜನರಿಗೆ ಶಾಪವಾಗಿದೆ. ಬೆಂಗಳೂರಿನಲ್ಲಿ ವಾಸಿಸುವ ಪ್ರತಿಯೊಬ್ಬರು ಹೇಳುವುದು ಟ್ರಾಫಿಕ್​​​​​​​​ ನಿರ್ವಹಣೆ ಬಗ್ಗೆ. ದಿನಕ್ಕೊಂದು ಬೆಂಗಳೂರು ಟ್ರಾಫಿಕ್​​ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ಪೋಸ್ಟ್​ಗಳು ವೈರಲ್​​ ಆಗುತ್ತ ಇರುತ್ತದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಕಿರಿಕಿರಿ ಉಂಟಾಗುತ್ತಿದೆ. ಈ ಸಮಸ್ಯೆಗೆ ಮಕ್ಕಳು ಕೂಡ ಒಳಗಾಗುತ್ತಿದ್ದಾರೆ, ಇದೀಗ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ಸಮಸ್ಯೆಯಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ವೈಯಕ್ತಿಕ ಸಮಸ್ಯೆಗಳನ್ನು ಪರಿಹಾರ ಮಾಡಲು, ಹೊಸ ಯೋಜನೆಯನ್ನು ಶಾಲೆಯೊಂದು ಹಾಕಿಕೊಂಡಿದೆ. ಸರ್ಜಾಪುರ ರಸ್ತೆಯಲ್ಲಿರುವ ಇಂಡಸ್ ಇಂಟರ್ನ್ಯಾಷನಲ್ ಶಾಲೆಯು ಒಂದು ಆಸಕ್ತಿದಾಯಕ ಆಲೋಚನೆಯೊಂದನ್ನು ಮಾಡಿದೆ. ಈ ಬಗ್ಗೆ ಟೈಮ್ಸ್​​​​ ಆಫ್ ಇಂಡಿಯಾ ವರದಿಯನ್ನು ಮಾಡಿದೆ. ಬೆಂಗಳೂರಿನ ದೂರದ ನಗರಗಳಿಗೆ ಸಂಚಾರಿಸುವ ಎರಡು ಶಾಲಾ ಬಸ್​ಗಳಿಗೆ ಬಯೋಟಾಯ್ಲೆಟ್‌ ಅಳವಡಿಸಿದೆ. ಶಾಲೆ ಮತ್ತು ಮನೆಗೆ ಪ್ರಯಾಣಿಸುವಾಗ ಮೂಲಭೂತ ಸೌಲಭ್ಯಗಳಿಲ್ಲದೆ ಮಕ್ಕಳು ದೀರ್ಘ ಗಂಟೆಗಳ ಕಾಲ ಸಂಚಾರ ದಟ್ಟಣೆಯಲ್ಲಿ ಕಳೆಯುವುದರಿಂದ ಈ ಯೋಜನೆಗಳನ್ನು ತರಲಾಗಿದೆ.

ಇಂಡಸ್ ಇಂಟರ್ನ್ಯಾಷನಲ್ ಸ್ಕೂಲ್ಸ್, ಬೆಂಗಳೂರಿನ ಒಳಗೆ ಇರುವ ದೂರದ ನಗರಗಳಿಗೆ ಅಥವಾ ಊರುಗಳಿಗೆ ಹೋಗುವ ವಿದ್ಯಾರ್ಥಿಗಳಿಗಾಗಿ ಜೈವಿಕ ಶೌಚಾಲಯಗಳನ್ನು ಅಳವಡಿಸಿದೆ.  ಶಾಲೆಯಿಂದ ರಾಜಾಜಿನಗರ ಮತ್ತು ಯಶವಂತಪುರಕ್ಕೆ ಎರಡು ಗಂಟೆಗಳ ಕಾಲ ಪ್ರಯಾಣವನ್ನು ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಈ ಸೌಲಭ್ಯಗಳನ್ನು ಮಾಡಲಾಗಿದೆ. ಇಂಡಸ್ ಇಂಟರ್‌ನ್ಯಾಷನಲ್‌ನ ನಿರ್ದೇಶಕ (ಆಡಳಿತ) ವಿನೋತ್ ಕುಮಾರ್, ದೂರದ ಪ್ರಯಾಣ ಮಾಡುವಾಗ ವಿದ್ಯಾರ್ಥಿಗಳಿಗೆ ಇದು ಅಗತ್ಯವಾಗಿದೆ. ಅನೇಕ ವಿದ್ಯಾರ್ಥಿಗಳು ದೀರ್ಘಕಾಲದವರೆಗೆ ಬಸ್‌ನಲ್ಲಿಯೇ ಇರುತ್ತಾರೆ. ಈ ಸಮಯದಲ್ಲಿ ಶೌಚಾಲಯ ಇಲ್ಲದಿದ್ದರೆ ಅಸ್ವಸ್ಥತೆ, ಆತಂಕ ಮತ್ತು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ. ಅದಕ್ಕಾಗಿ ಈ ಸಮಸ್ಯೆ ಹೊಗಲಾಡಿಸಲು ವಿದ್ಯಾರ್ಥಿಗಳಿಗಾಗಿ ಜೈವಿಕ ಶೌಚಾಲಯವನ್ನು ಅಳವಡಿಸಲಾಗಿದೆ.

ಇದನ್ನೂ ಓದಿ: 1.31 ಕೋಟಿ ರೂ. ಸಂಬಳಕ್ಕಿಂತ ಬೆಂಗಳೂರಿನ 45 ಲಕ್ಷ ರೂ. ಹೆಚ್ಚು ಲಾಭದಾಯಕ ಎಂದ ಟೆಕ್ಕಿ, ಯಾಕೆ ಗೊತ್ತಾ?

ಬಯೋಟಾಯ್ಲೆಟ್ ಬೆಲೆ ಎಷ್ಟು?

ಈ ಶಾಲೆಯೂ ಹೊಸ ಸೌಲಭ್ಯಕ್ಕಾಗಿ ಎರಡು ಬಸ್‌ಗೆ ಸುಮಾರು 5 ಲಕ್ಷ ರೂ.ಗಳನ್ನು ಖರ್ಚು ಮಾಡಿದೆ. ಇದಲ್ಲದೆ, ಇದು ಪ್ರಯೋಗ ಯಶಸ್ವಿಯಾದರೆ ಇತರ ಬಸ್‌ಗಳಿಗೂ ಈ ಸೌಲಭ್ಯವನ್ನು ತರುವ ಪ್ಲಾನ್​​ ಇದೆ ಎಂದು ಹೇಳಲಾಗಿದೆ. ಈ ಸೌಲಭ್ಯಗಳು ಭಾರತೀಯ ರೈಲ್ವೆಯಲ್ಲಿ ಮಾತ್ರ ಇದೆ. ಇದೀಗ ಇಂತಹ ಸೌಲಭ್ಯಗಳನ್ನು ಶಾಲೆ ಬಸ್​​​​​​​​ಗಳಲ್ಲಿ ಮಾಡಿರುವುದು ಇದೇ ಮೊದಲು ಎಂದು ಹೇಳಲಾಗಿದೆ. ಇನ್ನು ಈ ಪ್ರಯತ್ನಕ್ಕೆ ಮಕ್ಕಳ ಪೋಷಕರು ಕೂಡ ಶ್ಲಾಘಿಸಿದ್ದಾರೆ. ಇದೊಂದು ಒಳ್ಳೆಯ ಚಿಂತನೆ ಎಂದು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ರುದ್ರಾಭಿಷೇಕಂ’ ಸಿನಿಮಾ ಬಗ್ಗೆ ನಟಿ ಪ್ರಿಯಾಂಕಾ ತಿಮ್ಮೇಶ್ ಮಾತು
‘ರುದ್ರಾಭಿಷೇಕಂ’ ಸಿನಿಮಾ ಬಗ್ಗೆ ನಟಿ ಪ್ರಿಯಾಂಕಾ ತಿಮ್ಮೇಶ್ ಮಾತು
ಮೋದಿ ಸಂಚರಿಸುವ ರಸ್ತೆ ಬಳಿ ಜಿಲೆಟಿನ್ ಕಡ್ಡಿ ಪತ್ತೆ: DIG ಹೇಳಿದ್ದಿಷ್ಟು
ಮೋದಿ ಸಂಚರಿಸುವ ರಸ್ತೆ ಬಳಿ ಜಿಲೆಟಿನ್ ಕಡ್ಡಿ ಪತ್ತೆ: DIG ಹೇಳಿದ್ದಿಷ್ಟು
ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ವಿಜಯ್​​
ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ವಿಜಯ್​​
ರವಿಶಂಕರ್ ಗುರೂಜಿ ಮಾತಿಗೆ ಪ್ರಧಾನಿ ಮೋದಿಗೂ ನಗು!
ರವಿಶಂಕರ್ ಗುರೂಜಿ ಮಾತಿಗೆ ಪ್ರಧಾನಿ ಮೋದಿಗೂ ನಗು!
ರವಿಶಂಕರ್ ಗುರೂಜಿಯ 100ನೇ ಹುಟ್ಟುಹಬ್ಬಕ್ಕೂ ಬರುತ್ತೇನೆ ಎಂದ ಪ್ರಧಾನಿ ಮೋದಿ
ರವಿಶಂಕರ್ ಗುರೂಜಿಯ 100ನೇ ಹುಟ್ಟುಹಬ್ಬಕ್ಕೂ ಬರುತ್ತೇನೆ ಎಂದ ಪ್ರಧಾನಿ ಮೋದಿ
ಮೋದಿ ಸಂಚರಿಸೋ ರಸ್ತೇಲಿ ಜಿಲೆಟಿನ್ ಕಡ್ಡಿಗಳು ಪತ್ತೆ: ಶಂಕಿತ ಪೊಲೀಸ್ ವಶಕ್ಕೆ
ಮೋದಿ ಸಂಚರಿಸೋ ರಸ್ತೇಲಿ ಜಿಲೆಟಿನ್ ಕಡ್ಡಿಗಳು ಪತ್ತೆ: ಶಂಕಿತ ಪೊಲೀಸ್ ವಶಕ್ಕೆ
ಮೋದಿಗೆ ಆರ್ಟ್​ ಆಫ್ ಲಿವಿಂಗ್ ಫೋಟೊ ಕೊಟ್ಟು ಸನ್ಮಾನಿಸಿದ ಗುರೂಜಿ
ಮೋದಿಗೆ ಆರ್ಟ್​ ಆಫ್ ಲಿವಿಂಗ್ ಫೋಟೊ ಕೊಟ್ಟು ಸನ್ಮಾನಿಸಿದ ಗುರೂಜಿ
ವಿಜಯ್ ಪ್ರಮಾಣವಚನ ಮುಗಿಸಿ ಹೊರಟ ತ್ರಿಶಾ ನೋಡಲು ಮುಗಿಬಿದ್ದ ಅಭಿಮಾನಿಗಳು
ವಿಜಯ್ ಪ್ರಮಾಣವಚನ ಮುಗಿಸಿ ಹೊರಟ ತ್ರಿಶಾ ನೋಡಲು ಮುಗಿಬಿದ್ದ ಅಭಿಮಾನಿಗಳು
ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ವಿಜಯ್​ ದಿಟ್ಟ ಮಾತುಗಳು!
ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ವಿಜಯ್​ ದಿಟ್ಟ ಮಾತುಗಳು!
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾದ ವಿಜಯ್​​ಗೆ ಶುಭ ಕೋರಿದ ಪ್ರಧಾನಿ ಮೋದಿ
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾದ ವಿಜಯ್​​ಗೆ ಶುಭ ಕೋರಿದ ಪ್ರಧಾನಿ ಮೋದಿ