1.31 ಕೋಟಿ ರೂ. ಸಂಬಳಕ್ಕಿಂತ ಬೆಂಗಳೂರಿನ 45 ಲಕ್ಷ ರೂ. ಹೆಚ್ಚು ಲಾಭದಾಯಕ ಎಂದ ಟೆಕ್ಕಿ, ಯಾಕೆ ಗೊತ್ತಾ?
ಬೆಂಗಳೂರು ಮತ್ತು ಲಂಡನ್ ಜೀವನಶೈಲಿ, ಆದಾಯ ಹಾಗೂ ಜೀವನ ಗುಣಮಟ್ಟದ ಹೋಲಿಕೆ ಬಗ್ಗೆ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ವಿವರಿಸಿದ್ದಾರೆ. ಲಂಡನ್‌ನಲ್ಲಿ ಹೆಚ್ಚಿನ ಆದಾಯವಿದ್ದರೂ, ಐಷಾರಾಮಿ ಜೀವನಕ್ಕೆ ಬೆಂಗಳೂರು ಉತ್ತಮ ಎಂದು ಅವರು ಹೇಳಿದ್ದಾರೆ. 45 ಲಕ್ಷ ವಾರ್ಷಿಕ ಪ್ಯಾಕೇಜ್‌ನಲ್ಲಿ ಬೆಂಗಳೂರಿನಲ್ಲಿ ಉತ್ತಮ ಸೌಲಭ್ಯ ಪಡೆಯಬಹುದು. ಹಣಕ್ಕಿಂತ ನೆಮ್ಮದಿ ಮುಖ್ಯವೇ ಅಥವಾ ಜಾಗತಿಕ ಅನುಭವ ಮುಖ್ಯವೇ ಎಂಬುದನ್ನು ಈ ಲೇಖನ ವಿವರಿಸುತ್ತದೆ.

ಬೆಂಗಳೂರು, ಜ.7: ಬೆಂಗಳೂರು ಹೆಚ್ಚು ಆದಾಯ ನೀಡುವ ನಗರ, ಇಲ್ಲಿ ಬದುಕು ಕಟ್ಟಿಕೊಳ್ಳುವುದು ಸುಲಭ, ಎಲ್ಲದಕ್ಕೂ ಅವಕಾಶ ಇದೆ. ಹಾಗಾಗಿ ಬೇರೆ ಊರಿನ ಜನ ಇಲ್ಲಿ ಕೆಲಸಕ್ಕಾಗಿ ಬರುತ್ತಾರೆ. ಇದೀಗ ಇಲ್ಲೊಬ್ಬರು ಬೆಂಗಳೂರಿನಲ್ಲಿ ಕೆಲಸ ಮಾಡಲು ಹಾಗೂ ಜೀವನಶೈಲಿಗೆ ತುಂಬಾ ಬೆಸ್ಟ್ ನಗರ ಎಂದು ಹೇಳಿದ್ದಾರೆ. ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರ ಲಿಂಕ್ಡ್ಇನ್ನಲ್ಲಿ ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ (Bangalore vs London) ನಡುವಿನ ಜೀವನಶೈಲಿ, ಆದಾಯ ವ್ಯತ್ಯಾಸದ ಬಗ್ಗೆ ಹೇಳಿದ್ದಾರೆ. ವೈಭವ್ ಅಗರ್ವಾಲ್ ಎಂಬುವವರು ಈ ಪೋಸ್ಟ್ನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 45 ಲಕ್ಷ ರೂ. ವಾರ್ಷಿಕ ಪ್ಯಾಕೇಜ್ ಅನ್ನು ಲಂಡನ್‌ನ £ 108,000 (1.31 ಕೋಟಿ ರೂ.)ಸಂಬಳಕ್ಕೆ ಹೋಲಿಸಿದ್ದಾರೆ. ಇದು ನಿಜವಾದ ಜೀವನದ ಗುಣಮಟ್ಟವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದ್ದಾರೆ.
45 ಲಕ್ಷ ರೂ. ಅನ್ನು £108 ಹೋಲಿಸಿದ್ದರೆ ಲಂಡನ್ ಪ್ಯಾಕೆಜ್ ಹೆಚ್ಚು, ಆದರೆ ಇದು ಕಾಗದ ಮೌಲ್ಯ, ಆದರೆ ಜೀವನಶೈಲಿಯಲ್ಲಿ ಬೆಂಗಳೂರು ಉತ್ತಮ, ಶ್ರೀಮಂತರ ಬದುಕಬೇಕಾದರೆ ಇದು ಉತ್ತಮ ಎಂದು ಹೇಳಿದ್ದಾರೆ. ಇಲ್ಲಿ ಜೀವನ ಶೈಲಿಯ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದು ಹೇಳಿದ್ದಾರೆ. ಬೆಂಗಳೂರು ಹಾಗೂ ಲಂಡನ್ ಜೀವನಶೈಲಿಯನ್ನು ಅದ್ಭುತವಾಗಿ ವಿವರಿಸಿದ್ದಾರೆ. ಬೆಂಗಳೂರಿನ ಖರ್ಚು ವೆಚ್ಚ ಹೇಗೆ? ಇಲ್ಲಿ ವಾರ್ಷಿಕ ಸಂಬಳ 45 ಲಕ್ಷ ರೂ. ಅದರಲ್ಲಿ ನಿವ್ವಳ ಆದಾಯ: 2.7 ಲಕ್ಷ ರೂ/ತಿಂಗಳು. ವಸತಿ: ಗೇಟೆಡ್ ಸೊಸೈಟಿಯಲ್ಲಿ ಐಷಾರಾಮಿ 2BHK (50 ಸಾವಿರ ರೂ.) ಅಡುಗೆಯವರಿಗೆ ( 5 ಸಾವಿರ ರೂ.), ಮನೆ ಕೆಲಸದವರಿಗೆ (3 ಸಾವಿರ ರೂ.) ಪ್ರಯಾಣಕ್ಕಾಗಿ ಉಬರ್, ದಿನಸಿಗಾಗಿ ಬ್ಲಿಂಕಿಟ್, ಇತರ ಖರ್ಚುಗಳು.
ಇಲ್ಲಿದೆ ನೋಡಿ ಪೋಸ್ಟ್:
ಇನ್ನು ಲಂಡನ್‌ನಲ್ಲಿ ಇದಕ್ಕಿಂತ ವಿಭಿನ್ನವಾಗಿದೆ. ನಿವ್ವಳ ಆದಾಯ: £6,100/ತಿಂಗಳು (40% ತೆರಿಗೆ ಎಲ್ಲ ಸೇರಿ 7,40,839 ರೂ.) 1BHK ಮನೆ (ನಗರವಲ್ಲದ ಪ್ರದೇಶದಲ್ಲಿ 2.4 ಲಕ್ಷ ರೂ.), ಇನ್ನು ಸಾರ್ವಜನಿಕ ವಾಹನಗಳನ್ನು ಬಳಸಿಕೊಳ್ಳುವುದು, ಅಡುಗೆ ನಾವೇ ಮಾಡಿಕೊಳ್ಳಬೇಕು. ಶೌಚಾಲಯ, ಪಾತ್ರೆ ಎಲ್ಲವನ್ನು ನಾವೇ ಸ್ವಚ್ಛ ಮಾಡಬೇಕು. ನೀವು ಐಷಾರಾಮಿ ಮತ್ತು ಸೌಕರ್ಯವನ್ನು ಬಯಸಿದರೆ, ಬೆಂಗಳೂರನ್ನು ಆರಿಸಿ. ನೀವು ಜಾಗತಿಕ ಮಾನ್ಯತೆ, ಶುದ್ಧ ಗಾಳಿ ಮತ್ತು ಹೆಚ್ಚು ಆದಾಯ ಗಳಿಸಬೇಕಾದರೆ ಲಂಡನ್ನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಹಣಕ್ಕಿಂತ ನೆಮ್ಮದಿ ಹೆಚ್ಚು ಹಾಗೂ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದರೆ ಬೆಂಗಳೂರು ಉತ್ತಮ ಎಂದು ಹೇಳಿದ್ದಾರೆ.
ಇದನ್ನೂ ಓದಿ: 2025ರಲ್ಲಿ 47 ಲಕ್ಷ ರೂ. ಖರ್ಚು ಮಾಡಿದ ಬೆಂಗಳೂರಿನ ದಂಪತಿ
\ಈ ಲಿಂಕ್ಡ್‌ಇನ್ ಪೋಸ್ಟ್ಗೆ ನೆಟ್ಟಿಗರು ಕೂಡ ಕಮೆಂಟ್ ಮಾಡಿದ್ದಾರೆ. ಆದಾಯ ಹೊಂದಿರುವ ಜನರು ಕೇವಲ ಸಂಬಳದ ಕಾರಣದಿಂದಾಗಿ ಹೋಗುವುದಿಲ್ಲ, ಅವರು ಬಹುಸಂಸ್ಕೃತಿಯ ಮಾನ್ಯತೆ, ಕಲಿಕೆ, ಆತ್ಮವಿಶ್ವಾಸ, ಕಲಿಕೆ, ಜೀವನದ ಗುಣಮಟ್ಟ, ಉತ್ತಮ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ, ಶುದ್ಧ ಗಾಳಿ, ನೀರು, ಕಡಿಮೆ ಅಪರಾಧ, ಹೆಚ್ಚು ಮಾನವೀಯ ಮೌಲ್ಯಗಳನ್ನು ತಿಳಿದುಕೊಳ್ಳ ಉದ್ದೇಶದಿಂದಲ್ಲೂ ಹೋಗುಬಹುದು. ನಮ್ಮದೇ ಆದ ಕೋಣೆಯನ್ನು ಸ್ವಚ್ಛಗೊಳಿಸುವುದು, ನಮ್ಮ ಆಹಾರವನ್ನು ಬೇಯಿಸುವುದು ನಮ್ಮ ವೈಯಕ್ತಿಕ ಆಯ್ಕೆಯಾಗಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ,
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:17 pm, Wed, 7 January 26
