ಬೆಂಗಳೂರು ಪಬ್‌ನಲ್ಲಿ ಮಹಿಳೆಯ ಸೊಂಟದ ಕೆಳಗೆ ಹೊಡೆದ ವ್ಯಕ್ತಿ, ಮುಂದೇನಾಯಿತು ನೋಡಿ?
ಬೆಂಗಳೂರಿನ ಪಬ್‌ನಲ್ಲಿ ಮಹಿಳಾ ಪೈರೋ ಟೆಕ್ನಿಷಿಯನ್ ಮೇಲೆ ಲೈಂಗಿಕ ಕಿರುಕುಳ ನಡೆದಿದೆ. ಗ್ರಾಹಕನೊಬ್ಬ ಅನುಚಿತವಾಗಿ ವರ್ತಿಸಿದ ನಂತರ, ಪಬ್ ಸಿಬ್ಬಂದಿ ಮತ್ತು ಪೊಲೀಸರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಆರಂಭದಲ್ಲಿ ದೂರು ದಾಖಲಾದರೂ, ನ್ಯಾಯಾಲಯ ಮತ್ತು ಪೊಲೀಸ್ ಠಾಣೆಗೆ ಅಲೆದಾಡಿ ಬೇಸತ್ತ ಸಂತ್ರಸ್ತರು ಅಂತಿಮವಾಗಿ ದೂರು ಹಿಂಪಡೆದಿದ್ದಾರೆ. ಈ ಘಟನೆ ಪಬ್‌ಗಳಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಕಾನೂನು ನೆರವಿನ ಕೊರತೆಯನ್ನು ಹೇಳುತ್ತದೆ.

ಬೆಂಗಳೂರು, ಜ.7: ಬೆಂಗಳೂರಿನ ಪಬ್‌ನಲ್ಲಿ ಮಹಿಳಾ ಪೈರೋ ಟೆಕ್ನಿಷಿಯನ್ ಮೇಲೆ ಲೈಂಗಿಕ ಕಿರುಕುಳ ನಡೆದಿದೆ (Bengaluru pub harassment). ಹೊಸ ವರ್ಷದ ವೇಳೆ ಈ ಘಟನೆ ನಡೆದಿದೆ. ಇದೀಗ ಈ ಸುದ್ದಿ ಭಾರೀ ತಡವಾಗಿ ಬೆಳಕಿಗೆ ಬಂದಿದೆ. ಮಹಿಳಾ ಪೈರೋ ಟೆಕ್ನಿಷಿಯನ್ ಜತೆಗೆ ಗ್ರಾಹಕನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಪಬ್ಗೆ ಬಂದಿದ್ದ ಗ್ರಾಹಕ ಮಹಿಳೆಯ ಸೊಂಟದ ಕೆಳಗೆ ಹೊಡೆದಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಪಬ್ ಸಿಬ್ಬಂದಿ ಹಾಗೂ ಬೌನ್ಸರ್ಗೆ ಹೇಳಿದ್ರೂ, ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದಾರೆ. ರಾತ್ರಿ 10:15 ರ ಸುಮಾರಿಗೆ ಈ ಘಟನೆ ನಡೆದಿದ್ದು, ವೇದಿಕೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ನಾಗರಾಜು ಎಂಬ ವ್ಯಕ್ತಿ ತನ್ನ ಸೊಂಟದ ಕೆಳಗೆ ಹೊಡೆದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಆ ವ್ಯಕ್ತಿಯ ಅನುಚಿತ ಸ್ಪರ್ಶವನ್ನು ನೋಡಿದ ಆಕೆಯ ಸ್ನೇಹಿತೆಯರು ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ನಂತರ ಆ ಮಹಿಳೆ ಕೂಡ ಹೊಡೆದಿದ್ದಾಳೆ ಎಂದು ಹೇಳಲಾಗಿದೆ. ಆ ವ್ಯಕ್ತಿಯೂ ಅಲ್ಲಿಂದ ಓಡಿ ಹೋಗಲು ಮುಂದಾಗಿದ್ದ, ತಕ್ಷಣ ಮಹಿಳೆ ಜತೆಗಿದ್ದ ಇತರ ಮಹಿಳೆಯರು ಹಿಡಿದು ಥಳಿಸಿದ್ದಾರೆ. ನಂತರ ಬೌನ್ಸರ್ಗಳನ್ನು ಕರೆದಿದ್ದಾರೆ. ಆದರೆ ಅವರು ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ. ಇನ್ನು ಆತನ ಜತೆಗೆ ಬಂದು ಸ್ನೇಹಿತ ಮಹಿಳೆಯರಿಗೆ ಬೆದರಿಕೆ ಹಾಕಿದ್ದಾನೆ. ಪಬ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಮತ್ತು ಬೌನ್ಸರ್‌ಗಳು ಸಹಾಯ ಕೇಳಿದ್ರೂ, ಘಟನಾ ಸ್ಥಳಕ್ಕೆ ತಡವಾಗಿ ಬಂದಿದ್ದಾರೆ.
ಇದನ್ನೂ ಓದಿ: ಹೆಣ್ಣು ತಾಯಿಯಾಗುವುದು ದುರ್ಬಲತೆಯೇ? 30 ಲಕ್ಷ ರೂ. ಸಂಬಳದ ಉದ್ಯೋಗ ನಿರಾಕರಿಸಿದ ಬೆಂಗಳೂರಿನ ಮಹಿಳೆ
ಈ ಬಗ್ಗೆ ಪಬ್ ಆಡಳಿತ ಮಂಡಳಿಗೆ ಹೇಳಿದ್ದಾರೆ “ನಮಗೆ ನ್ಯಾಯ ನೀಡಬೇಕು ಎಂದು ಕೇಳಿಕೊಂಡೆವು, ಆದರೆ ಅವರು ಆ ವ್ಯಕ್ತಿಯಿಂದ ಕ್ಷಮೆ ಕೇಳಿಸಿ, ಸಮಸ್ಯೆಯನ್ನು ಇತ್ಯರ್ಥಪಡಿಸಲು ಪ್ರಯತ್ನಿಸಿದ್ದಾರೆ. ಆಡಳಿತ ಮಂಡಳಿಯ ಪ್ರತಿಕ್ರಿಯೆ ತುಂಬಾ ಭಯಾನಕವಾಗಿತ್ತು ಎಂದು ಹೇಳಿದ್ದಾರೆ. ನಂತರ ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಶಂಕಿತನನ್ನು ಜೀವನ್ ಭೀಮಾ ನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಈ ವೇಳೆ ಪೊಲೀಸ್ ಠಾಣೆಗೆ ನಾವು ಪಬ್‌ನಲ್ಲಿ ಧರಿಸಿದ ಬಟ್ಟೆಯಲ್ಲೇ ಹೋಗಿದ್ದೇವು, ಜಾಕೆಟ್ ಹಾಕಿಕೊಳ್ಳುವಂತೆ ಪೊಲೀಸರು ಹೇಳುತ್ತಿದ್ದರು, ಆದರೆ ನಮ್ಮ ಬಳಿ ಜಾಕೆಟ್ ಇರಲಿಲ್ಲ. ನಂತರ ಸ್ಥಳೀಯ ಭಾಷೆಯಲ್ಲಿ ದೂರು ಬರೆದುಕೊಂಡುವಂತೆ ಹೇಳಿದ್ರು, ಆದರೆ ಬರೆಯಲು ಗೊತ್ತಿಲ್ಲ ಎಂದು ಹೇಳಿದೆ. ನಂತರ ಅವರೇ ಬರೆದುಕೊಟ್ಟರು. ಈ ವೇಳೆ ಆ ವ್ಯಕ್ತಿ ಕೂಡ ತನ್ನ ವಕೀಲರನ್ನು ಕರೆಸಿ, ನಮ್ಮ ಮೇಲೆ ದೂರು ನೀಡಿದ್ದಾನೆ. ನಂತರ ನಿರಂತರ ಕೋಟ್, ಪೊಲೀಸ್ ಠಾಣೆ ಎಂದು ಹೋಗುತ್ತಿದ್ದೇವೆ. ಕೊನೆಗೆ ನಾವು ಕರ್ನಾಟಕದವರಲ್ಲ ಎಂದು ಕೇಸ್ ವಾಪಸ್ಸು ಪಡೆದ್ದೇವು ಎಂದು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:26 pm, Wed, 7 January 26
