AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಬಿಜೆಪಿ ಶಾಸಕ ಹೆಸರಿನಲ್ಲಿ ಯುವತಿಗೆ ಅಸಭ್ಯ ಮೆಸೇಜ್: ಅಸಲಿಗೆ ಆಗಿದ್ದೇನು?

ಕರ್ನಾಟಕ ಬಿಜೆಪಿ ಶಾಸಕ ಹೆಸರಿನಲ್ಲಿ ಯುವತಿಗೆ ಅಸಭ್ಯ ಮೆಸೇಜ್: ಅಸಲಿಗೆ ಆಗಿದ್ದೇನು?

ರಮೇಶ್ ಬಿ. ಜವಳಗೇರಾ
|

Updated on: Jan 07, 2026 | 3:12 PM

Share

ಫೇಸ್‌ಬುಕ್, ಇನ್ಸ್ಟಾಗ್ರಾಂ (Facebook, Instagram) ನಕಲಿ ಖಾತೆಯಿಂದ ಮಹಿಳೆಯರಿಗೆ ಅಸಭ್ಯ ಸಂದೇಶ ಹಾಗೂ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದ್ದು, ಈ ಸಂಬಂಧ ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿ (CK Ramamurthy) ಸೈಬರ್ ಕ್ರೈಂಗೆ (Cyber Crime) ದೂರು ನೀಡಿದ್ದಾರೆ. ಜಯನಗರ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಫೇಸ್ ಬುಕ್, ಇನ್ಸ್ಟಾ ಖಾತೆ ಸೃಷ್ಟಿಸಿ ಮಾಡಿ ಹಲವರಿಗೆ ಮೆಸೇಜ್ ಕಳುಹಿಸಲಾಗಿದೆ. ಶಾಸಕ ಸಿ.ಕೆ. ರಾಮಮೂರ್ತಿ ಹೆಸರಿನಲ್ಲಿ ಮೆಸೇಜ್ ಹಿನ್ನೆಲೆ ಬೆಂ.ದಕ್ಷಿಣ ಸೈಬರ್ ಪೊಲೀಸ್ ಠಾಣೆಗೆ ಶಾಸಕ ದೂರು ನೀಡಿದ್ದಾರೆ. ಅಲ್ಲದೇ ಮೊಬೈಲ್ ಹ್ಯಾಕ್ ಆಗಿದೆ ಎಂದು ಸಿ.ಕೆ ರಾಮೂರ್ತಿ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು, (ಜನವರಿ 07): ಫೇಸ್‌ಬುಕ್, ಇನ್ಸ್ಟಾಗ್ರಾಂ (Facebook, Instagram) ನಕಲಿ ಖಾತೆಯಿಂದ ಮಹಿಳೆಯರಿಗೆ ಅಸಭ್ಯ ಸಂದೇಶ ಹಾಗೂ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದ್ದು, ಈ ಸಂಬಂಧ ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿ (CK Ramamurthy) ಸೈಬರ್ ಕ್ರೈಂಗೆ (Cyber Crime) ದೂರು ನೀಡಿದ್ದಾರೆ. ಜಯನಗರ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಫೇಸ್ ಬುಕ್, ಇನ್ಸ್ಟಾ ಖಾತೆ ಸೃಷ್ಟಿಸಿ ಮಾಡಿ ಹಲವರಿಗೆ ಮೆಸೇಜ್ ಕಳುಹಿಸಲಾಗಿದೆ. ಶಾಸಕ ಸಿ.ಕೆ. ರಾಮಮೂರ್ತಿ ಹೆಸರಿನಲ್ಲಿ ಮೆಸೇಜ್ ಹಿನ್ನೆಲೆ ಬೆಂ.ದಕ್ಷಿಣ ಸೈಬರ್ ಪೊಲೀಸ್ ಠಾಣೆಗೆ ಶಾಸಕ ದೂರು ನೀಡಿದ್ದಾರೆ. ಅಲ್ಲದೇ ಮೊಬೈಲ್ ಹ್ಯಾಕ್ ಆಗಿದೆ ಎಂದು ಸಿ.ಕೆ ರಾಮೂರ್ತಿ ಸ್ಪಷ್ಟನೆ ನೀಡಿದ್ದಾರೆ.

ಶಾಸಕರ ಅಧಿಕೃತ ಇನ್ಸ್ಟಾ ಪೇಜ್‌ನಿಂದ ಯುವತಿಗೆ ಹಾಯ್, ಹಲೋ ಗುಡ್ ಮಾರ್ನಿಂಗ್, ಗುಡ್ ಈವ್ನಿಂಗ್, ರೀಲ್ಸ್ ಸೂಪರ್ ಅಂತಾ ಸಂದೇಶ ರವಾನಿಸಲಾಗಿದೆ. ಸದ್ಯ ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆ ಶಾಸಕ ಸಿ.ಕೆ ರಾಮಮೂರ್ತಿ ಸೈಬರ್ ಕ್ರೈಂಗೆ ದೂರು ನೀಡಿ ಹ್ಯಾಕರ್ಸ್‌ ಹಾಗೂ ನಕಲಿ ಖಾತೆ ಸೃಷ್ಟಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.

ಕರ್ನಾಟಕ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ