ಹಾಸನ: ಬೆಂಗಳೂರಿನ ಯಶವಂತಪುರದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬ ಕುಡಿದು ಕಾರು ಚಲಾಯಿಸಿ ಅಪಘಾತ ಮಾಡಿದ್ದಾನೆ, ಬಳಿಕ ಪುಂಡಾಟ ನಡೆಸಿ, ತನ್ನನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮುತ್ತಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರು ಮೂಲದ ನರೇಂದ್ರ ಬಾಬು ಎಂಬಾತ ಪುಂಡಾಟ ನಡೆಸಿದವ. ಈತ ಮದ್ಯದ ನಶೆಯಲ್ಲಿ ಕಾರು ಅಪಘಾತ ನಡೆಸಿದ್ದು, ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ತಿಮ್ಮೇಗೌಡ ಎಂಬುವವರಿಗೆ ಗಾಯಗಳಾಗಿವೆ. ಜತೆಗಿದ್ದ ಕುಟುಂಬಸ್ಥರು ಸಮಾಧಾನ ಮಾಡಲು ಯತ್ನ ನಡೆಸಿದರೂ ಗಾಯಾಳು ತಿಮ್ಮೇಗೌಡ ಎಂಬಾತನ ಮೇಲೆಯೇ ನರೇಂದ್ರ ಬಾಬು ಹಲ್ಲೆ ನಡೆಸಿದ್ದಾನೆ.
ಇದೇ ವೇಳೆ ನರೇಂದ್ರ ಬಾಬು ಪೊಲೀಸ್ ಜೀಪ್‌ಗೂ ಹೊಡೆದು ರಂಪಾಟ ಮಾಡಿದ್ದಾನೆ. ನರೇಂದ್ರ ಬಾಬು ವಿರುದ್ಧ ಗಾಯಗೊಂಡ ತಿಮ್ಮೇಗೌಡ ಅವರ ಸಹೋದರ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನರೇಂದ್ರ ಬಾಬುನನ್ನು ಬಂಧಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ನಂತರ ಠಾಣೆಯಲ್ಲೂ ನರೇಂದ್ರ ಬಾಬು ರಂಪಾಟ ಮಾಡಿದ್ದಾನೆ. ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಶ್ನಿಸಿದ ಗ್ರಾಮಸ್ಥರ ಮೇಲೆ ನರೇಂದ್ರ ಬಾಬು ಹಲ್ಲೆ ನಡೆಸಿ, ಗಲಾಟೆ ಮಾಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರ ಮೇಲೆಯೂ ದರ್ಪ ತೋರಿ ಗಲಾಟೆ ಮಾಡಿದ್ದಾನೆ, ಭೂಪ. ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಎಂದು ಹೇಳಿಕೊಂಡು ಗಲಾಟೆ ಮಾಡಿದ್ದಾನೆ. ತನ್ನ ಕಾರಿನಲ್ಲಿ ಕುಟುಂಬ ಸಮೇತ ಅರಕಲಗೂಡು ಕಡೆಗೆ ಹೋಗುತ್ತಿದ್ದಾಗ ಆಕ್ಸಿಡೆಂಟ್ ಮಾಡಿದ್ದಾನೆ.
ಇದನ್ನೂ ಓದಿ:
ಅಪಘಾತಕ್ಕೂ ಮುನ್ನ ಜಿಗ್ಜ್ಯಾಗ್ ರೈಡ್: ಪೊಲೀಸರ ಮೇಲೆಯೇ ಕಾರು ಹತ್ತಿಸೋ ಯತ್ನ, ಜೊಮ್ಯಾಟೋ ಹುಡುಗ ಜಸ್ಟ್ ಮಿಸ್
ಕಾದಿದೆ ಬರೆ: ಗ್ಯಾಸ್ ಸಿಲಿಂಡರ್ ಬೆಲೆ ಮುಂದಿನ 3 ತಿಂಗಳಲ್ಲಿ 1000 ರೂ ಗಡಿ ದಾಟುತ್ತದೆ – LPG ಫೆಡರೇಷನ್
(bangalore real estate businessman car accident at arkalgud arrested)
Published On - 11:35 am, Thu, 2 September 21