ಕಾದಿದೆ ಬರೆ: ಗ್ಯಾಸ್ ಸಿಲಿಂಡರ್ ಬೆಲೆ ಮುಂದಿನ 3 ತಿಂಗಳಲ್ಲಿ 1000 ರೂ ಗಡಿ ದಾಟುತ್ತದೆ – LPG ಫೆಡರೇಷನ್
ಇನ್ನು 3 ತಿಂಗಳಲ್ಲಿ ಸಿಲಿಂಡರ್ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಆಲ್ ಇಂಡಿಯಾ LPG ಫೆಡರೇಷನ್ ರಾಜ್ಯ ಕಾರ್ಯದರ್ಶಿ ರಮೇಶ್‌ಕುಮಾರ್ ಸುಳಿವು ನೀಡಿದ್ದಾರೆ.
ಬೆಂಗಳೂರು: ಕೊರೊನಾ ಹೊಡೆತದಿಂದ ಜನ ಇನ್ನೂ ಸುಧಾರಿಸಿಕೊಂಡಿಲ್ಲ. ಈಗಾಗಲೇ ಮೂರನೇ ಅಲೆ ಭೀತಿಯನ್ನು ಎದುರಿಸುತ್ತಿದ್ದಾರೆ. ಆದ್ರೆ, ಇದರ ನಡುವೆ ದಿನೇ ದಿನೇ ಅಗತ್ಯವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ನಿನ್ನೆ ಸಿಲಿಂಡರ್ ಬೆಲೆ ಬರೋಬ್ಬರಿ 25 ರೂಪಾಯಿ ಏರಿಕೆಯಾಗಿತ್ತು. ಈಗ LPG ಸಿಲಿಂಡರ್ ದರ ಒಂದು ಸಾವಿರ ರೂ. ಗಡಿ ದಾಟಲಿದೆ.
ಇನ್ನು 3 ತಿಂಗಳಲ್ಲಿ ಸಿಲಿಂಡರ್ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಆಲ್ ಇಂಡಿಯಾ LPG ಫೆಡರೇಷನ್ ರಾಜ್ಯ ಕಾರ್ಯದರ್ಶಿ ರಮೇಶ್‌ಕುಮಾರ್ ಸುಳಿವು ನೀಡಿದ್ದಾರೆ. ಚಳಿಗಾಲದಲ್ಲಿ ಯರೋಪ್ ದೇಶಗಳಲ್ಲಿ ಗ್ಯಾಸ್ ಬೇಡಕೆ ಹೆಚ್ಚಾಗುತ್ತೆ. ಹೀಗಾಗಿ ಅಂತಾರಾಷ್ಟ್ರಿಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗುವ ಹಿನ್ನೆಲೆ ಭಾರತದಲ್ಲಿಯೂ ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಾಗುತ್ತೆ. ಚಳಿಗಾಲದಲ್ಲಿ ಸಿಲಿಂಡರ್ ದರ ಮತ್ತಷ್ಟು ಹೆಚ್ಚಾಗುತ್ತದೆ ಎಂದಿದ್ದಾರೆ.
ಬೆಲೆ ಏರಿಕೆ ಬಗ್ಗೆ ನನ್ನ ಪ್ರತಿಕ್ರಿಯೆ ಕೇಳಬೇಡಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಬಗ್ಗೆ ನನ್ನ ಪ್ರತಿಕ್ರಿಯೆ ಕೇಳಬೇಡಿ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಒಟ್ಟಾರೆಯಾಗಿ ಹಣದುಬ್ಬರ ಸರ್ಕಾರದ ನಿಯಂತ್ರಣದಲ್ಲಿದೆ. ಬೆಲೆ ಏರಿಕೆ ಬಗ್ಗೆ ನೀವು ಅರ್ಥಶಾಸ್ತ್ರಜ್ಞರ ಬಳಿ ಕೇಳಿಕೊಳ್ಳಿ. ಬೆಲೆ ಏರಿಕೆ ಬಗ್ಗೆ ಆರ್ಬಿಐ ಗವರ್ನರ್ ಮಾತಾಡುತ್ತಾರೆ ಎಂದು ಬೆಲೆ ಏರಿಕೆ ವಿಚಾರವನ್ನು ಅರುಣ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದು ಸಿಲೆಂಡರ್ ಗ್ಯಾಸ್ ಹಾಗೂ ತೈಲ ಬೆಲೆ ಏರಿಕೆ ಅಂತರಾಷ್ಟ್ರೀಯ ಮಾರುಕಟ್ಟೆ ಮೇಲೆ ನಿರ್ಧಾರವಾಗುತ್ತೆ. ಕಾಂಗ್ರೆಸ್ ನವರಿಗೆ ಗೊತ್ತಿದೆ ಹಿಂದೆ ಏನ್ ಮಾಡಿದ್ದಾರೆ ಅಂತ. ಆಯಿಲ್ ಬಾಂಡ್ ವಿಚಾರ ಏನಾಗಿತ್ತು. ಅದೇನೆ ಇರಲಿ ಸೆ.5 ರಂದು ಕೇಂದ್ರ ಹಣಕಾಸು ಸಚಿವರು ಬರ್ತಾರೆ. ಅವರ ಜೊತೆ ತೈಲ ಬೆಲೆ ಏರಿಕೆ ಬಗ್ಗೆ ಚರ್ಚೆ ಮಾಡ್ತೇನೆ ಎಂದರು.
ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿದ್ಯಾಕೆ? ಕೋಟಿ ಕೋಟಿ ಕುಟುಂಬಗಳು ಬಳಸೋ LPG ಸಿಲಿಂಡರ್ ಬೆಲೆಯೂ ತಾರಕಕ್ಕೇರ್ತಿದೆ. ಅದಕ್ಕೆ ತಜ್ಞರು ಕೊಡೋ ಕಾರಣ ಏನು ಅಂತಾ ನೋಡೋದಾದ್ರೆ..
ಎಲ್ಪಿಜಿ ಬೆಲೆ ಏರಿಕೆ ಕಾರಣ ತೈಲ ಬೆಲೆ ಹೆಚ್ಚಾದಾಗ LPG ಬೆಲೆಯೂ ಹೆಚ್ಚಳವಾಗುತ್ತೆ. ಇನ್ನು LPGಯಲ್ಲಿ ಶೇಕಡಾ 60ರಷ್ಟು ಬೂತೇನ್ ಮಿಕ್ಸ್ ಮಾಡಲಾಗುತ್ತೆ. ಶೇಕಡಾ 4ರಷ್ಟು ಪ್ರೊಪೇನ್ ಎಲ್ಪಿಜಿಯಲ್ಲಿ ಬಳಸಲಾಗುತ್ತೆ. ಇವರೆಡನ್ನೂ ಭಾರತ ವಿದೇಶದಿಂದ ಆಮದು ಮಾಡುತ್ತೆ. ಈಗ ಬೂತೇನ್ ಮತ್ತು ಪ್ರೊಪೇನ್ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಳವಾಗಿದೆ. ಸಾಲದ್ದಕ್ಕೆ ಸುಂಕ ಕಡಿಮೆಗೊಳಿಸೋಕು ಸರ್ಕಾರ ಹಿಂದೇಟು ಹಾಕ್ತಿದೆ. ಹೀಗಾಗಿ ಎಲ್ಪಿಜಿ ಬೆಲೆ ಹೆಚ್ಚಾಗಿದೆ ಅಂತಾ ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ: LPG Cylinder Price: ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ 25 ರೂಪಾಯಿ ಏರಿಕೆ; ಗ್ಯಾಸ್ ಬಲುಭಾರ
Published On - 11:01 am, Thu, 2 September 21