ಬೆಂಗಳೂರಿನಲ್ಲಿ ರಸ್ತೆ ಅಗೆದವರೇ ದುರಸ್ತಿ ಮಾಡಬೇಕು; ಬಿಬಿಎಂಪಿಯಿಂದ ಆದೇಶ

| Updated By: sandhya thejappa

Updated on: Apr 20, 2022 | 12:11 PM

ಬೆಸ್ಕಾಂ, ಜಲಮಂಡಳಿ, ಕೆಪಿಟಿಸಿಎಲ್ ಸೇರಿದಂತೆ ಹಲವು ಸಂಸ್ಥೆಗಳು ವಿವಿಧ ಕಾರಣಕ್ಕೆ ಗುಂಡಿ ತೆಗೆದು ರಸ್ತೆಗಳನ್ನ ಮುಚ್ಚದೆ ಹಾಗೇ ಬಿಡುತ್ತಿದ್ದವು. ಇದರಿಂದ ಹಲವು ಸಾವು ನೋವುಗಳು ಸಂಭವಿಸಿವೆ.

ಬೆಂಗಳೂರಿನಲ್ಲಿ ರಸ್ತೆ ಅಗೆದವರೇ ದುರಸ್ತಿ ಮಾಡಬೇಕು; ಬಿಬಿಎಂಪಿಯಿಂದ ಆದೇಶ
ಬಿಬಿಎಂಪಿ ಕಛೇರಿ
Follow us on

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳನ್ನ ಮುಚ್ಚದ ಹಿನ್ನೆಲೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಬಿಬಿಎಂಪಿ (BBMP) ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆ ಬಿಬಿಎಂಪಿ ಮತ್ತೊಂದು ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಈ ಹಿಂದೆ ರಸ್ತೆ ಅಗೆದರೆ ಎಫ್ಐಆರ್ (FIR) ದಾಖಲಿಸುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿತ್ತು. ಆದರೆ ಇದೀಗ ರಸ್ತೆ ಅಗೆದವರೇ ದುರಸ್ತಿ ಮಾಡಬೇಕೆಂದು ಆದೇಶ ಹೊರಡಿಸಿದೆ. ರಸ್ತೆ ಅಗೆದು ಕಾಮಗಾರಿ ಮಾಡಿದರೆ ಅನುಮತಿ ಪಡೆಯಬೇಕು. ಅನುಮತಿ ಪಡೆಯುವಾಗ ದುರಸ್ತಿ ಬಗ್ಗೆ ನಕ್ಷೆ ಸಿದ್ಧಪಡಿಸಬೇಕು. ಒಬ್ಬ ಇಂಜಿನಿಯರ್ ನೇಮಕ ಮಾಡಿ ನಕ್ಷೆ ಸಿದ್ಧಪಡಿಸಿರಬೇಕು. ಎಷ್ಟು ರಸ್ತೆ ಅಗೆಯುತ್ತಾರೆಂದು ಕೂಡ ಮಾಹಿತಿ ನೀಡಬೇಕು ಅಂತ ಬಿಬಿಎಂಪಿ ಸೂಚನೆ ನೀಡಿದೆ.

ಬೆಸ್ಕಾಂ, ಜಲಮಂಡಳಿ, ಕೆಪಿಟಿಸಿಎಲ್ ಸೇರಿದಂತೆ ಹಲವು ಸಂಸ್ಥೆಗಳು ವಿವಿಧ ಕಾರಣಕ್ಕೆ ಗುಂಡಿ ತೆಗೆದು ರಸ್ತೆಗಳನ್ನ ಮುಚ್ಚದೆ ಹಾಗೇ ಬಿಡುತ್ತಿದ್ದವು. ಇದರಿಂದ ಹಲವು ಸಾವು ನೋವುಗಳು ಸಂಭವಿಸಿವೆ. ರಸ್ತೆ ಅಗೆಯುವುದಕ್ಕಿಂತ ಮುಂಚೆ ರಸ್ತೆಯ ಅಗಲ, ಉದ್ದದ ಬಗ್ಗೆ ಮಾಹಿತಿಯನ್ನ ನೀಡಿ. ನಂತರ ರಸ್ತೆ ಅಗೆಯಬೇಕು ಅಂತ ಬಿಬಿಎಂಪಿ ಸೂಚಿಸಿದೆ.

ಬಿಬಿಎಂಪಿ ವಾಹನಗಳಿಗೆ ಖಡಕ್ ಎಚ್ಚರಿಕೆ:
ಬಿಬಿಎಂಪಿ ಕಸದ ವಾಹನಗಳ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸಂಚಾರಿ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಬಿಬಿಎಂಪಿ ಕಸದ ವಾಹನಗಳಿಗೆ ಖಡಕ್ ಎಚ್ಚರಿಕೆ ನೀಡುತ್ತಿರುವ ಪೋಲಿಸರು, ಬಿಬಿಎಂಪಿ ಕಸದ ವಾಹನ ಚಾಲಕರ ಡಿಎಲ್ ಪರಿಶೀಲನೆ ಮಾಡಿದರು. ಯೂನಿಫಾರಂನಲ್ಲೆ ಇರಬೇಕು ಎಂದು ತಾಕೀತು ಮಾಡುತ್ತಿದ್ದಾರೆ. ವಾಹನಗಳನ್ನ ಓವರ್ ಸ್ಪೀಡ್​ನಲ್ಲಿ ಓಡಿಸಬಾರದು. ವಾಹನ ಚಾಲನೆ ಮಾಡುವಾಗ ಮದ್ಯಪಾನ ಮಾಡಬಾರದು‌. ಬಿಬಿಎಂಪಿ ನಿಯಮಗಳನ್ನ ಚಾಚು ತಪ್ಪದೇ ಪಾಲಿಸಬೇಕು ಅಂತ ಟ್ರಾಫಿಕ್ ಪೋಲಿಸರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ

CM Bommai Press Meet: ಯಾವುದೇ ಮೌಖಿಕ ಆದೇಶದ ಕಾಮಗಾರಿ ಮಾಡಬಾರದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ

ಹಾವೇರಿ ಥಿಯೇಟರ್​ನಲ್ಲಿ ಕೆಜಿಎಫ್ 2 ಸಿನಿಮಾ ವೀಕ್ಷಣೆ ವೇಳೆ ಯುವಕನ ಮೇಲೆ ಗುಂಡಿನ ದಾಳಿ!

Published On - 12:01 pm, Wed, 20 April 22