ಬೆಂಗಳೂರು, ಡಿಸೆಂಬರ್ 06: ನಗರದಲ್ಲಿ ರಸ್ತೆ ಗುಂಡಿ (potholes) ಗಳಿಂದ ಸಾಲು ಸಾಲು ಅಪಘಾತ ಸಂಭವಿಸುತ್ತಿವೆ. ವಾಹನ ಸವಾರರನ್ನ ರಸ್ತೆ ಗುಂಡಿಗಳು ಯಮನಂತೆ ಕಾಡುತ್ತಿವೆ. ಬೆಂಗಳೂರಿನ ಪ್ರಮುಖ ನಗರಗಳ ರಸ್ತೆಗಳು ಗುಂಡಿಗಳಿಂದ ತುಂಬಿವೆ. ಗುಂಡಿಗಳಿಂದ ಜನರ ಪರದಾಡುವಂತಾಗಿದೆ. ನಂದಿನಿ ಲೇಔಟ್ನಿಂದ ಯಶವಂತ ಪುರ, ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದ ಸುತ್ತಮುತ್ತಲು ಮತ್ತು ಸುಕಂದಕಟ್ಟೆ ರಸ್ತೆ ನಿಲಗೀರಿತೋಪು ಸರ್ಕಲ್ನಲ್ಲಿ ಯಮ ಸ್ವರೂಪಿ ಗುಂಡಿಗಳು ಬಾಯಿ ತೆರೆದಿವೆ.
ಬನ್ನೇರುಘಟ್ಟ ಸಂಪರ್ಕ ಕಲ್ಪಿಸುವ ಸುಬ್ಬಣ್ಣ ಗಾರ್ಡನ್ನಲ್ಲಿ ಹತ್ತಾರು ಗುಂಡಿಗಳಿವೆ. ಗುಂಡಿಗಳನ್ನು ತಪ್ಪಿಸಲು ಹೋಗಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಮಳೆ ಬಂದರೆ ರೋಡ್ ಯಾವುದು, ಗುಂಡಿ ಯಾವುದು ಅಂತ ಗೊತ್ತಾಗುವುದಿಲ್ಲ. ಗುಂಡಿ ಇರುವ ಕಾರಣ ಈ ರೋಡ್ನಲ್ಲಿ ಸ್ಲೋ ಮೂವಿಂಗ್ ಟ್ರಾಫಿಕ್ ಇರುವುತ್ತದೆ. ಸಾಕಷ್ಟು ವರ್ಷಗಳಿಂದ ಈ ಗುಂಡಿಗಳನ್ನು ಮುಚ್ಚಲು ಮುಂದಾಗಿಲ್ಲ. ಡಾಂಬರೀನಿಂದ ಗುಂಡಿ ಮುಚ್ಚುವ ಬದಲಿಗೆ ಟೈಲ್ಸ್ ಪುಡಿ ಹಾಕಿ ಗುಂಡಿ ಮುಚ್ಚಲಾಗಿದೆ. ಇದರಿಂದ ಧೂಳು ಎದ್ದೇಳುತ್ತಿದೆ. ವಾಹನ ಸವಾರರ ಗೋಳು ಕೇಳುವವರಿಲ್ಲ.
ಇದನ್ನೂ ಓದಿ: ಆನೇಕಲ್: ದೊಮ್ಮಸಂದ್ರ ಸರ್ಕಲ್ ಬಳಿ ಬೈಕ್ ಪಲ್ಟಿ, ವಿಡಿಯೋ ವೈರಲ್
ಲಗ್ಗೆರೆ ಕ್ರಾಸ್ನಿಂದ ಜಾಲಹಳ್ಳಿ ಕ್ರಾಸ್ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳಿವೆ. ಪೀಣ್ಯ ಇಂಡಸ್ಟ್ರಿಯಲ್ ಏರಿಯಾ ಮೂಲಕ ಹಾದು ಹೋಗುತ್ತದೆ. ಪೀಣ್ಯದ ಸಾವಿರಾರು ಕಂಪನಿಗೆ ಕಾರ್ಮಿಕರು ಈ ರೋಡ್ ಮೂಲಕ ಸಂಚಾರ ಮಾಡುತ್ತಾರೆ. ಈ ರೋಡ್ನಲ್ಲಿ ವಾಹನ ಸವಾರರ ಪ್ರಾಣ ಕೈಯಲ್ಲಿಡಿದು ಓಡಾಡುವ ದುಸ್ಥಿತಿ ಎದುರಾಗಿದೆ. ವಾಹನ ಸವಾರರು ಜೋರಾಗಿ ಏನಾದರೂ ಬಂದರೆ ಜೀವ ಹೋಗೋದು ಗ್ಯಾರಂಟಿ. ಸುಮಾರು ಅರ್ಧದಿಂದ ಒಂದು ಅಡಿಯಷ್ಟು ದೊಡ್ಡದಾದ ಗುಂಡಿಗಳು ಬಿದ್ದಿವೆ. ಗುಂಡಿಗಳನ್ನು ತಪ್ಪಿಸಲು ಹೋದೆರೆ ಹಿಂದಿನಿಂದ ವೇಗವಾಗಿ ಬರುವ ಹೆವಿ ಲೋಡ್ ಲಾರಿಗಳು ಡಿಕ್ಕಿ ಹೊಡಿಯುತ್ತವೆ. ಈ ರೋಡ್ ಸರಿಪಡಿಸಲು ಯಾರು ಮುಂದಾಗುತ್ತಿಲ್ಲ. ಈ ರೋಡ್ನಲ್ಲಿ ಪ್ರತಿದಿನ ಆಟೋ ಓಡಿಸುತ್ತೇವೆ ಆದರೆ ತುಂಬಾ ಕಷ್ಟ ಆಗುತ್ತದೆ ಎನ್ನುತ್ತಾರೆ ಆಟೋ ಚಾಲಕರು.
ಇದನ್ನೂ ಓದಿ: ಟಿನ್ ಫ್ಯಾಕ್ಟರಿ ಬಳಿ ಟ್ರಾಫಿಕ್ ಸಮಸ್ಯೆ: ಸಂಚಾರಿ ಪೊಲೀಸರ ಹೊಸ ಮಾರ್ಗದಿಂದ ಟ್ರಾಫಿಕ್ ನಿವಾರಣೆ
ಔಟರ್ ರಿಂಗ್ನ ಲಗ್ಗೆರೆಯ ಬಳಿ ಹತ್ತಾರು ಗುಂಡಿಗಳು ಬಿದ್ದಿದೆ. ಪ್ರತಿನಿತ್ಯ ಈ ಔಟರ್ರಿಂಗ್ ರೋಡ್ ಮೂಲಕ ಲಕ್ಷಾಂತರ ವಾಹನ ಸಂಚಾರ ಮಾಡುತ್ತವೆ. ಆದರೆ ಬಿಬಿಎಂಪಿ ಮತ್ತು ಬಿಡಿಎ ಈ ಗುಂಡಿಗಳನ್ನು ಮುಚ್ಚುತ್ತಿಲ್ಲ. ರಿಂಗ್ ರೋಡ್ ಚೆನ್ನಾಗಿ ಇರುತ್ತದೆ ಎಂದು ವೇಗವಾಗಿ ಬರುವ ಬೈಕ್ ಸವಾರರು ಈ ಗುಂಡಿಗಳಿಂದ ಪಲ್ಟಿಯಾಗುವುದು ಮಾತ್ರ ಪಕ್ಕ. ಗುಂಡಿ ಇದೆ ಎಂದು ಬೈಕ್ ಸವಾರರು ದಿಢೀರ್ ಅಂತ ಬ್ರೇಕ್ ಹಾಕುತ್ತಾರೆ. ಇದರಿಂದ ಹಿಂದಿನಿಂದ ಬರುವ ಲಾರಿ ಬಸ್ಸುಗಳು ಡಿಕ್ಕಿ ಹೊಡೆದು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಔಟರ್ ರಿಂಗ್ ಅನ್ನು ಸಂಪೂರ್ಣ ಕಾಂಕ್ರೀಟ್ನಿಂದ ಮಾಡಲಾಗಿದೆ. ಆದರೆ ಲಗ್ಗೆರೆ ಅಂಡರ್ ಪಾಸ್ ಬಳಿ ಮಾತ್ರ ಡಾಂಬರ್ ಹಾಕಲಾಗಿದೆ. ಆ ಡಾಂಬರ್ ರೋಡ್ನಲ್ಲಿ ಹತ್ತಾರು ಗುಂಡಿಗಳು ಬಿದ್ದಿವೆ.
ಎಸ್ ಪಿ ರಸ್ತೆ ಜಂಕ್ಷನ್, ಚಾಮರಾಜಪೇಟೆಯ ಹೊಸ ತರಗಪೇಟೆ 2 ನೇ ಮುಖ್ಯರಸ್ತೆಯಲ್ಲಿ ಮತ್ತು 8 ನೇ ಮೈಲಿಯಿಂದ ಆಂಧ್ರಹಳ್ಳಿಯ ಮುಖ್ಯರಸ್ತೆಯ ಲಿಂಗದೇರನಹಳ್ಳಿ, ಯಶವಂತಪುರದ ಎಇಎಸ್ ರಸ್ತೆಯಲ್ಲಿ ಪಾಥ್ ಹೋಲ್ಗಳು ಕೆರೆಯಂತಾಗಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.