ಪಕ್ಕಾ ಫಿಲ್ಮ್ ಸ್ಟೈಲ್ ನಲ್ಲಿ ಕಹಾನಿ ಹೇಳಿ 75 ಲಕ್ಷ ಮೌಲ್ಯದ 1.25 ಕೆ.ಜಿ ಚಿನ್ನ ಎಗರಿಸಿದ್ದ ಸೇಲ್ಸ್ ಮನ್​​ಗಳಿಬ್ಬರ ಬಂಧನ, ಮತ್ತಿಬ್ಬರಿಗಾಗಿ ಖಾಕಿ ಶೋಧ!

| Updated By: ಸಾಧು ಶ್ರೀನಾಥ್​

Updated on: Oct 11, 2023 | 3:25 PM

ನಿರಂತರ ಶೋಧ ಬಳಿಕ ಲಾಲ್ ಸಿಂಗ್ ನನ್ನ ಪತ್ತೆ ಹಚ್ಚಿ ಮಾಲೀಕರು ಬೆಂಗಳೂರಿಗೆ ಕರೆತಂದಿದ್ದರು. ಮಾಲೀಕನನ್ನ ನಂಬಿಸಿ ಬ್ಲೇಡ್ ನಿಂದ ಕೈಗಳ ಬಳಿ ಕುಯ್ದುಕೊಂಡಿದ್ದ. ಪ್ರಕರಣ ದಾಖಲಾಗಿ ತನಿಖೆ ಆರಂಭಿಸಿದ ಇನ್ ಸ್ಪೆಕ್ಟರ್ ಹನುಮಂತ್ರ ಭಜಂತ್ರಿ, ಚಾಕುವಿನಿಂದ ಕೈಗಳ ಮೇಲೆ ಹಲ್ಲೆ‌ಮಾಡಿರುವುದಾಗಿ ನೀಡಿದ ಹೇಳಿಕೆಗೂ ಕೈ ಮೇಲೆ ಆಗಿರುವ ಗಾಯಕ್ಕೆ ಸಾಮ್ಯತೆ ಬರದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಅಪರಾಧ ಕೃತ್ಯದ ಬಗ್ಗೆ ಸತ್ಯ ಹೇಳಿದ್ದಾನೆ‌.

ಪಕ್ಕಾ ಫಿಲ್ಮ್ ಸ್ಟೈಲ್ ನಲ್ಲಿ ಕಹಾನಿ ಹೇಳಿ 75 ಲಕ್ಷ ಮೌಲ್ಯದ 1.25 ಕೆ.ಜಿ ಚಿನ್ನ ಎಗರಿಸಿದ್ದ ಸೇಲ್ಸ್ ಮನ್​​ಗಳಿಬ್ಬರ ಬಂಧನ, ಮತ್ತಿಬ್ಬರಿಗಾಗಿ ಖಾಕಿ ಶೋಧ!
75 ಲಕ್ಷ ಮೌಲ್ಯದ ಚಿನ್ನ ಎಗರಿಸಿದ್ದ ಸೇಲ್ಸ್ ಮನ್​​ಗಳಿಬ್ಬರ ಬಂಧನ
Follow us on

ಬೆಂಗಳೂರು, ಅಕ್ಟೋಬರ್​ 11: ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ಜುವೆಲ್ಲರಿ ಶಾಪ್ ನಿಂದ ಚಿನ್ನಾಭರಣ ಬ್ಯಾಗ್ ನ್ನ ನೆರೆಯ ಆಂದ್ರ ಪ್ರದೇಶದ ನೆಲ್ಲೂರಿಗೆ ಕೊಂಡ್ಯೂಯ್ಯುವ ಮಾರ್ಗ ಮಧ್ಯೆ ಅಪರಿಚಿತರು ಸುಲಿಗೆ ಮಾಡಿದ್ದಾರೆ ಎಂದು ಕಥೆ ಕಟ್ಟಿ ಜ್ಯೂವೆಲ್ಲರಿ ಶಾಪ್ ಮಾಲೀಕನಿಗೆ ಯಾಮಾರಿಸಿ ಲಕ್ಷಾಂತರ ಮೌಲ್ಯದ ಚಿನ್ನದ ಆಭರಣ ದೋಚಿದ್ದ ಸೇಲ್ಸ್ ಮ್ಯಾನ್ ಇಬ್ಬರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿರುವ ಜುವೆಲ್ಲರಿ ಶಾಪ್ ಮಾಲೀಕ ಅಭಿಷೇಕ್ ಎಂಬುವರು ನೀಡಿದ ದೂರಿನ ಮೇರೆಗೆ ಇದೇ ಅಂಗಡಿಯಲ್ಲಿ‌ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ರಾಜಸ್ತಾನ ಮೂಲದ ಲಾಲ್ ಸಿಂಗ್ ಎಂಬುವನನ್ನ ಬಂಧಿಸಿ 1.262 ಕೆ.ಜಿ. ‌ಮೌಲ್ಯದ ಚಿನ್ನದೊಡವೆಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈತನಿಗೆ ಸಹಕರಿಸಿದ ಮತ್ತೋರ್ವ ಆರೋಪಿ‌ ರಾಜ್ ಪಾಲ್‌ ನನ್ನ ಬಂಧಿಸಲಾಗಿದೆ.

ಕಳೆದ ಏಳು ತಿಂಗಳಿಂದ ಅಭಿಷೇ‌ಕ್ ಅವರ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ‌ ಮಾಡುತ್ತಿದ್ದ. ಮಾಲೀಕರ ವಿಶ್ವಾಸಗಳಿಸಿಕೊಂಡಿದ್ದ ಲಾಲ್ ಸಿಂಗ್, ಕಳೆದ‌ ತಿಂಗಳು 28 ರಂದು ಆಂಧ್ರದ ನಲ್ಲೂರಿನಲ್ಲಿರುವ ಮುಖೇಶ್ ಹಾಗೂ ಶುಭಂ ಗೋಲ್ಡ್ ಜ್ಯೂವೆಲ್ಲರಿ ಶಾಪ್ ಗಳ ಮಾಲೀಕರಿಗೆ 1.262 ಕೆ.ಜಿ. ಚಿನ್ನಾಭರಣ ಕೊಟ್ಟು ಬರುವಂತೆ ಮಾಲೀಕರು ಸೂಚಿಸಿದ್ದರು. ಚಿನ್ನಾಭರಣ ಬ್ಯಾಗ್ ನೀಡುತ್ತಿದ್ದಂತೆ ಆರೋಪಿಯು ದುರಾಸೆಗೆ ಬಿದ್ದು,ಬೆಂಗಳೂರಿನಲ್ಲಿರುವ ಸಹಚರರ ವಿಷಯ ತಿಳಿಸಿ ದೋಚುವ ಬಗ್ಗೆ ಸಂಚು‌ ನಡೆಸಿದ್ದಾನೆ‌‌.‌

ನೆಲ್ಲೂರಿನ ಕಾಳಹಸ್ತಿ ಬಳಿ ತೆರಳಿ ಮಾಲೀಕರಿಗೆ ಪೋನ್‌ ಮಾಡಿ ಯಾರೋ ಅಪರಿಚಿತರು ಗನ್ ಇಟ್ಟು ಕೈಗಳಿಗೆ ಚಾಕುವಿನಿಂದ ಹಲ್ಲೆ ಮಾಡಿ ಚಿನ್ನವಿರುವ ಬ್ಯಾಗ್ ಕಸಿದು ಎಸ್ಕೇಪ್ ಆಗಿದ್ದಾರೆ‌ ಎಂದು ಕಥೆ ಕಟ್ಟಿ ಪೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಎರಡು ದಿನಗಳ ನಿರಂತರವಾಗಿ ಪೋನ್ ಮಾಡಿದರೂ ಸ್ವಿಚ್ ಆಫ್ ಬರುತ್ತಿರುವುದನ್ನ ಕಂಡು ಅನುಮಾನಗೊಂಡ ಮಾಲೀಕ ಅಭಿಷೇಕ್ ತಾನೇ ಕಾಳಹಸ್ತಿಗೆ ತೆರಳಿದ್ದರು‌.‌ ಅಷ್ಟೊತ್ತಿಗಾಗಲೇ ಲಾಲ್‌ಸಿಂಗ್ ಚಿನ್ನಾಭರಣವನ್ನ ಸಹಚರರ ಮೂಲಕ ರಾಜಸ್ತಾನಕ್ಕೆ ಕಳುಹಿಸಿದ್ದ.

ಅನಂತರ ನಿರಂತರ ಶೋಧ ಬಳಿಕ ಲಾಲ್ ಸಿಂಗ್ ನನ್ನ ಪತ್ತೆ ಹಚ್ಚಿ ಮಾಲೀಕರು ಬೆಂಗಳೂರಿಗೆ ಕರೆತಂದಿದ್ದರು. ಮಾಲೀಕನನ್ನ ನಂಬಿಸಿ ಬ್ಲೇಡ್ ನಿಂದ ಕೈಗಳ ಬಳಿ ಕುಯ್ದುಕೊಂಡಿದ್ದ. ಪ್ರಕರಣ ದಾಖಲಾಗಿ ತನಿಖೆ ಆರಂಭಿಸಿದ ಇನ್ ಸ್ಪೆಕ್ಟರ್ ಹನುಮಂತ್ರ ಭಜಂತ್ರಿ, ಚಾಕುವಿನಿಂದ ಕೈಗಳ ಮೇಲೆ ಹಲ್ಲೆ‌ಮಾಡಿರುವುದಾಗಿ ನೀಡಿದ ಹೇಳಿಕೆಗೂ ಕೈ ಮೇಲೆ ಆಗಿರುವ ಗಾಯಕ್ಕೆ ಸಾಮ್ಯತೆ ಬರದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಅಪರಾಧ ಕೃತ್ಯದ ಬಗ್ಗೆ ಸತ್ಯ ಕಕ್ಕಿದ್ದಾನೆ‌.

10 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದು‌ ಕೂಲಂಕುಷ ವಿಚಾರಣೆ ನಡೆಸಿದಾಗ ಕದ್ದ ಮಾಲನ್ನ ರಾಜಸ್ತಾನಕ್ಕೆ ಸಹಚರರ ಮೂಲಕ ಕಳುಹಿಸಿರುವುದಾಗಿ ಒಪ್ಪಿಕೊಂಡಿದ್ದ. ಈ ಸಂಬಂಧ ಸಹಚರ ರಾಜ್ ಆಲಿಯಾಸ್ ರಾಜಪಾಲ್ ನನ್ನ ವಶಕ್ಕೆ ಪಡೆದು 75 ಲಕ್ಷ ಮೌಲ್ಯದ 1.262 ಕೆ‌.ಜಿ.ಚಿನ್ನವನ್ನ ವಶಕ್ಕೆ‌ ಪಡೆದುಕೊಳ್ಳಲಾಗಿದೆ. ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಆರೋಪಿಗಳು, ಹಣದಾಸೆಗೆ ಕೃತ್ಯ ಎಸಗಿದ್ದು,ಲಾಲ್ ಸಿಂಗ್ ಅಲಿಯಾಸ್ ಸಂಜಯ್ ರಾವ್ ವಿರುದ್ದ ರಾಜಾಸ್ಥಾನದಲ್ಲಿ ಕೊಲೆಯತ್ನ ಮತ್ತು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಹಿನ್ನಲೆ ಇದ್ದವ ಎಂಬ ಮಾಹಿತಿ ಲಭ್ಯವಾಗಿದೆ.

ಹೀಗಾಗಿ ಲಾಲ್ ಸಿಂಗ್ ಅಲಿಯಾಸ್ ಸಂಜಯ್ ಅಪರಾಧ ಹಿನ್ನಲೆ ಇರೋದ್ರಿಂದ ಕೃತ್ಯವೆಸಗಿಸಿದ್ದರೆ, ನಾವೆಲ್ಲರೂ ನಿನಗೆ ಸಹಕರಿಸಿ, ಸಿಕ್ಕಿಬಿದ್ದರೂ ಜಾಮೀನು ಕೊಡಿಸಿ ಜೈಲಿನಿಂದ ಕರೆತರೋದಾಗಿ ಪುಸಲಾಯಿಸಿದ್ದರಂತೆ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳನ್ನ ಪತ್ತೆಗೆ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ