AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಈ ಮಾರ್ಗದಲ್ಲಿ ಹೆಚ್ಚುವರಿ ಫೀಡರ್ ಬಸ್ ಆರಂಭಿಸಿದ ಬಿಎಂಟಿಸಿ, ಇಲ್ಲಿದೆ ವೇಳಾಪಟ್ಟಿ

Bengaluru News: ಬೆಂಗಳೂರಿನ ನೇರಳೆ ಮಾರ್ಗದಲ್ಲಿ ಎರಡು ಹೊಸ ಮಾರ್ಗಗಳಲ್ಲಿ ನಮ್ಮ ಮೆಟ್ರೋ ಸೇವೆ ಆರಂಭಿಸಿದೆ. ಅಕ್ಟೋಬರ್ 9ರ ಸೋಮವಾರದಿಂದ ಬೈಯಪ್ಪನಹಳ್ಳಿ-ಕೆಆರ್ ಪುರ ಮತ್ತು ಚಲಘಟ್ಟ-ಕೆಂಗೇರಿ ನಡುವೆ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಿದೆ. ಇದರ ಬೆನ್ನಲ್ಲೇ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಬಿಎಂಟಿಸಿ ಸಹ ಹೊಸ ಮೆಟ್ರೋ ಫೀಡರ್ ಸೇವೆ ಆರಂಭಿಸಿದೆ. ಇನ್ನು ಈ ಬಸ್​ಗಳು ಎಲ್ಲಿಂದ ಎಲ್ಲಿಗೆ ಸಂಚರಿಸಲಿವೆ? ಬಸ್ ವೇಳಾಪಟ್ಟಿ ವಿವರ ಇಲ್ಲಿದೆ.

ಬೆಂಗಳೂರಿನ ಈ ಮಾರ್ಗದಲ್ಲಿ ಹೆಚ್ಚುವರಿ ಫೀಡರ್ ಬಸ್ ಆರಂಭಿಸಿದ ಬಿಎಂಟಿಸಿ, ಇಲ್ಲಿದೆ ವೇಳಾಪಟ್ಟಿ
ಫೀಡರ್ ಬಸ್​ಗೆ ಚಾಲನೆ
TV9 Web
| Edited By: |

Updated on:Oct 11, 2023 | 2:52 PM

Share

ಬೆಂಗಳೂರು, ಅಕ್ಟೋಬರ್ 10; ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಮ್ಮ ಮೆಟ್ರೋ  ನೇರಳೆ ಮಾರ್ಗ(Bengaluru Purple Line Metro) ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿದೆ. ಅಕ್ಟೋಬರ್ 9ರ ಸೋಮವಾರದಿಂದ ಬೈಯಪ್ಪನಹಳ್ಳಿ-ಕೆಆರ್ ಪುರ ಮತ್ತು ಚಲಘಟ್ಟ-ಕೆಂಗೇರಿ ನಡುವೆ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಿದ್ದು, ಈ ಭಾಗದ ಐಟಿ ಉದ್ಯೋಗಿಗಳಿಗೆ ಅನುಕೂಲವಾಗಿದೆ. ಅಲ್ಲದೇ ಟ್ರಾಫಿಕ್​ ಜಂಜಾಟಕ್ಕೆ ಗುಡ್​ಬೈ ಹೇಳಿದ್ದಾರೆ. ಇನ್ನು ಈ ಮೆಟ್ರೋ ನಿಲ್ದಾಣಗಳನ್ನು ಪ್ರಯಾಣಿಕರು ತಲುಪಲು ಬಿಎಂಟಿಸಿ ಫೀಡರ್ ಬಸ್​ (Metro feeder buses) ವ್ಯವಸ್ಥೆ ಮಾಡಿದೆ. ಹೌದು…ಒಟ್ಟು 37 ಫೀಡರ್ ಬಸ್​ಗಳಿಗೆ ಇಂದು (ಅಕ್ಟೋಬರ್ 11) ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.

ಬಳಿಕ ಮಾತನಾಡಿದ ರಾಮಲಿಂಗಾ ರೆಡ್ಡಿ, ಕೆಆರ್‌ ಪುರ ನಿಲ್ದಾಣಕ್ಕೆ 37 ಬಿಎಂಟಿಸಿ ಫೀಡರ್‌ ಬಸ್ ವ್ಯವಸ್ಥೆ ಮಾಡಿದ್ದೇವೆ. ಅಕ್ಟೋಬರ್ 9ರ ಸೋಮವಾರದಿಂದ ಬೈಯಪ್ಪನಹಳ್ಳಿ-ಕೆಆರ್ ಪುರ ಮತ್ತು ಚಲಘಟ್ಟ-ಕೆಂಗೇರಿ ನಡುವೆ ಮೆಟ್ರೋ ರೈಲುಗಳ ಸಂಚಾರವನ್ನು ಆರಂಭವಾಗಿದೆ. ಇದೀಗ ಬಿಎಂಟಿಸಿ ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ ಮೆಟ್ರೋ ಫೀಡರ್ ಬಸ್ ಸೇವೆಯನ್ನು ಹೆಚ್ಚಿಸಿದೆ ಎಂದರು.

ಇದನ್ನೂ ಓದಿ: Namma Metro: ನೇರಳೆ ಮಾರ್ಗದಲ್ಲಿ ಒಂದೇ ದಿನ 3.35ಲಕ್ಷ ಜನ ಸಂಚಾರ; ಜನಸಂದಣಿಯಿಂದ ರೋಸಿಹೋದ ಟೆಕ್ಕಿ

ವಿವಿಧ ಪ್ರದೇಶಗಳಿಂದ 37 ಹೊಸ ಬಿಎಂಟಿಸಿ ಬಸ್‌ಗಳು ಕೆಆರ್ ಪುರ ನಮ್ಮ ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸುತ್ತವೆ, ಸಿಲ್ಕ್ ಬೋರ್ಡ್ ಜಂಕ್ಷನ್ ಸೇರಿದಂತೆ ಇತರೆ ಪ್ರದೇಶಗಳಿಂದ ಕೆಆರ್ ಪುರದ ಮೆಟ್ರೋ ನಿಲ್ದಾಣ ಸಂಪರ್ಕಿಸಲು ಮೆಟ್ರೋ ಫೀಡರ್ ಬಸ್ ಸಂಚರಿಸಲಿವೆ. ಕೆಆರ್ ಪುರ ಮೆಟ್ರೋ ನಿಲ್ದಾಣ-ಸಿಲ್ಕ್ ಬೋರ್ಡ್‌ ಜಂಕ್ಷನ್ ನಡುವೆ 22 ಬಸ್‌ಗಳು ಸಂಚಾರಿಸಲಿವೆ. ವೊಲ್ವೋ ಬಸ್ ಕೆಆರ್ ಪುರ ಮೆಟ್ರೋ ನಿಲ್ದಾಣ-ಸಿಲ್ಕ್ ಬೋರ್ಡ್‌ ಜಂಕ್ಷನ್ ಮಾರ್ಗದಲ್ಲಿ ಹೊರ ವರ್ತುಲ ರಸ್ತೆ, ಮಾರತ್‌ಹಳ್ಳಿ, ಇಬ್ಬಲೂರು ಮೂಲಕ ಈ ಬಸ್ಸುಗಳು ಸಂಚಾರ ಮಾಡಲಿವೆ ಎಂದು ವಿವರಿಸಿದರು.

ಎರಡು ಹೊಸ ಮಾರ್ಗದಲ್ಲಿ ಬಸ್

  •  ಬಿಎಂಟಿಸಿ ಎರಡು ಹೊಸ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್ ಸೇವೆಯನ್ನು ಆರಂಭಿಸಿದೆ. ಕೆಆರ್ ಪುರ ಮೆಟ್ರೋ ನಿಲ್ದಾಣ- ಸಿಲ್ಕ್ ಬೋರ್ಡ್ ಜಂಕ್ಷನ್, ಕೆಆರ್ ಪುರ ಮೆಟ್ರೋ ನಿಲ್ದಾಣ-ಕೆಆರ್ ಪುರ ಮೆಟ್ರೋ ನಿಲ್ದಾಣ ನಡುವೆ ಬಸ್ ಸಂಚಾರ ನಡೆಸಲಿದೆ.
  • ಕೆಆರ್ ಪುರಂ ಮೆಟ್ರೋ ನಿಲ್ದಾಣದಿಂದ ಎಂಟು ಬಸ್‌ಗಳು, ಕಾಡುಗೋಡಿಯಿಂದ ನಾಲ್ಕು ಮತ್ತು ಕಾಡುಗೋಡಿಯಿಂದ ಬೇರೆ ಮಾರ್ಗದಿಂದ ನಾಲ್ಕು ಬಸ್‌ಗಳು ಕಾರ್ಯನಿರ್ವಹಿಸಲಿವೆ.
  • ಕೆಆರ್ ಪುರಂ ಮೆಟ್ರೋ ನಿಲ್ದಾಣದಿಂದ ಹೊರಟು ಮಹದೇವಪುರ, ಮಾರತ್ತಹಳ್ಳಿ ಸೇತುವೆ, ಕಾಡುಬೀಸನಹಳ್ಳಿ, ಅಗರ ಮೂಲಕ ಸಂಚರಿಸಿ ಸೆಂಟ್ರಲ್ ಸಿಲ್ಕ್ ಬೋರ್ಡ್ ತಲುಪಲಿವೆ.

ಕೆಆರ್​ ಪುರಂ ಮೆಟ್ರೋ ನಿಲ್ದಾಣದಿಂದ ಬಸ್​ಗಳ ವೇಳಾಪಟ್ಟಿ

06:40, 0650, 0700, 0710, 0720, 0730, 0740, 0750, 0800, 0805, 0810, 0815, 0820, 0825, 0830, 0835, 0840, 0845, 0850, 0855, 0900, 0905, 0910, 0915, 0920, 0925, 0930, 0935, 0940, 0950, 1000, 1015, 1025, 1035, 1050, 1100, 1110, 1115, 1120, 1130, 1135, 1140, 1150, 1155, 1200, 1215, 1235, 1300, 1315, 1325, 1345, 1355, 1400, 1405, 1415, 1420, 14:25, 1430, 1435, 1440, 1450, 1455, 1500, 1505, 1510, 1520, 1525, 1535, 1545, 1555, 1605, 1620, 1630, 1640, 1650, 1655, 1705, 1710, 1720, 1725, 1735, 1745, 1755, 1805, 1820, 1830, 1840, 1850, 1900, 1910, 1920, 1930, 1940, 1950, 2000, 2010, 2020, 2030, 2040, 2050, 2100, 2110, 2120, 2130,2140, 2150, 2200.

ಸಿಲ್ಕ್​ ಬೋರ್ಡ್ ಬಸ್​ಗಳ ವೇಳಾಪಟ್ಟಿ

0540, 0550, 0600, 0610, 0620, 0630, 0640, 0650, 0700, 0710, 0720, 0730, 0740, 0745, 0750, 0800, 0805, 0810, 0820, 0825, 0835, 0840, 0855, 0905, 0915, 0925, 0935, 0950, 0955, 1000, 1005, 1010, 1015, 1020, 1025, 1030, 1035, 1040, 1045, 1050, 1055, 1100, 1110, 1120, 1130,1140, 1150, 1200, 1210, 1220, 1230, 1240, 1245, 1250, 1300, 1310, 1315, 1320, 1335, 1350, 1400, 1420, 1425, 1435, 1500, 1510, 1520, 1530, 1540, 1545, 1555, 1600, 1605, 1615, 1625, 1635, 1645, 1650, 1655, 1700, 1705, 1710, 1715, 1720, 1725, 1730, 1735, 1740, 1745, 1750, 1755, 1805, 1815, 1825, 1840, 1855, 1910, 1925, 1935, 1945, 1955, 2005, 2015, 2025, 2035, 2045, 2055.

  • ಬಿಎಂಟಿಸಿ ಮೆಟ್ರೋ ಫೀಡರ್‌ ಬಸ್‌ಗಳು ದಿನಕ್ಕೆ 300 ರಿಂದ 350 ಟ್ರಿಪ್ ಸಂಚಾರ ನಡೆಸಲಿದ್ದು, ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಹಕಾರಿಯಾಗಲಿವೆ. ಬೆಳಗ್ಗೆ 5.40 ರಿಂದ ರಾತ್ರಿ 10.30, 11 ಗಂಟೆಯ ತನಕ ಬಸ್‌ಗಳು ಸಂಚಾರ ನಡೆಸಲಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:50 pm, Wed, 11 October 23

Follow Us