ಬೆಂಗಳೂರು ವಿಶ್ವವಿದ್ಯಾಲಯದಿಂದ ಮಹಾ ಯಡವಟ್ಟು! 70 ಅಂಕದ ಪರೀಕ್ಷೆಗೆ 73 ಅಂಕ ನೀಡಿದ ವಿವಿ

| Updated By: sandhya thejappa

Updated on: Jan 24, 2022 | 11:08 AM

2021ರ ಡಿಸೆಂಬರ್​ನಲ್ಲಿ ವಿಶ್ವವಿದ್ಯಾಲಯ ಪರೀಕ್ಷೆ ನಡೆಸಿತ್ತು. 70 ಅಂಕ ಥಿಯರಿ ಮತ್ತು 30 ಅಂಕ ಇಟರ್ನಲ್ಸ್ ಸೇರಿ ಒಟ್ಟು 100 ಅಂಕ ನಿಗದಿ ಮಾಡಲಾಗಿತ್ತು. ಆದರೆ ಥಿಯರಿಯಲ್ಲಿ ಗರಿಷ್ಠ 70 ಅಂಕಕ್ಕೆ 73 ಅಂಕ ನೀಡಿದೆ.

ಬೆಂಗಳೂರು ವಿಶ್ವವಿದ್ಯಾಲಯದಿಂದ ಮಹಾ ಯಡವಟ್ಟು! 70 ಅಂಕದ ಪರೀಕ್ಷೆಗೆ 73 ಅಂಕ ನೀಡಿದ ವಿವಿ
ಬೆಂಗಳೂರು ವಿಶ್ವವಿದ್ಯಾಲಯ, ಪರೀಕ್ಷೆ ಫಲಿತಾಂಶ
Follow us on

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ (Bangalore University) ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೆ ಇರುತ್ತದೆ. ಇದೀಗ ವಿವಿಯಿಂದ ಮಹಾ ಯಡವಟ್ಟು ನಡೆದಿದ್ದು, 70 ಅಂಕದ ಪರೀಕ್ಷೆಗೆ 73 ಅಂಕ (Mark) ನೀಡಿ ಮತ್ತೆ ಸುದ್ದಿಯಾಗಿದೆ. ಗರಿಷ್ಠ ಅಂಕಕ್ಕಿಂತ ಹೆಚ್ಚು ಅಂಕ ನೀಡಿದ ಬೆಂಗಳೂರು ವಿವಿ ವಿದ್ಯಾರ್ಥಿಗಳಿಗೆ (Students) ಬೇಕಾಬಿಟ್ಟಿ ಮಾರ್ಕ್ಸ್​ನ ಕೊಟ್ಟಿದೆ. ಬಿಕಾಂ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಬೇಕಾಬಿಟ್ಟಿ ಅಂಕ ನೀಡಿದೆ ಎಂದು ತಿಳಿದಬಂದಿದೆ. ಟ್ರಾವೆಲ್ ಏಜೆನ್ಸಿ ಆ್ಯಂಡ್ ಟೂರ್ ಆಪರೇಟರ್ ವಿಷಯ ಪರಿಕ್ಷೆಯಲ್ಲಿ ಈ ಎಡವಟ್ಟು ಆಗಿದೆ.

2021ರ ಡಿಸೆಂಬರ್​ನಲ್ಲಿ ವಿಶ್ವವಿದ್ಯಾಲಯ ಪರೀಕ್ಷೆ ನಡೆಸಿತ್ತು. 70 ಅಂಕ ಥಿಯರಿ ಮತ್ತು 30 ಅಂಕ ಇಟರ್ನಲ್ಸ್ ಸೇರಿ ಒಟ್ಟು 100 ಅಂಕ ನಿಗದಿ ಮಾಡಲಾಗಿತ್ತು. ಆದರೆ ಥಿಯರಿಯಲ್ಲಿ ಗರಿಷ್ಠ 70 ಅಂಕಕ್ಕೆ 73 ಅಂಕ ನೀಡಿದೆ. ಈ ಅಂಕಗಳನ್ನ ನೋಡಿ ವಿದ್ಯಾರ್ಥಿಗಳು ತಬ್ಬಿಬ್ಬಾಗಿದ್ದಾರೆ. ಬೆಂಗಳೂರು ವಿವಿ ವ್ಯಾಪ್ತಿಗೆ ಬರುವ ಬಹುತೇಕ ಕಾಲೇಜುಗಳಲ್ಲಿ ಇದೇ ಯಡವಟ್ಟಾಗಿರುವುದು ತಿಳಿದುಬಂದಿದೆ.

ಕುರ್ಚಿಗಾಗಿ ಕುಸ್ತಿ
ಬೆಂಗಳೂರು ವಿವಿಯಲ್ಲಿ ಕುರ್ಚಿಗಾಗಿ ಕುಸ್ತಿ ಶುರುವಾಗಿತ್ತು. ಅಧಿಕಾರ ಸ್ವೀಕಾರಕ್ಕಾಗಿ ಹೈಡ್ರಾಮಾ ನಡೆದಿದೆ. ಬೆಂಗಳೂರು ಕುಲಸಚಿವ ಸ್ಥಾನಕ್ಕೆ ಪ್ರೊ.ಕೊಟ್ರೇಶ್ ನೇಮಕಗೊಂಡಿದ್ದಾರೆ. ನವೆಂಬರ್ 26ರಂದು ರಾಜ್ಯ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿತ್ತು. ಆದರೆ ಹಾಲಿ ಕುಲಸಚಿವೆ ಕೆ.ಜ್ಯೋತಿ ಬೇರೆ ಯಾವುದೇ ಇಲಾಖೆಗೆ ವರ್ಗಾವಣೆ ಆಗಿರಲಿಲ್ಲ. ಇದು ತಿಳಿದಿದ್ದರೂ ಹಾಲಿ ಕುಲಸಚಿವೆ ಇಲ್ಲದ ಸಮಯದಲ್ಲಿ ಪ್ರೊ.ಕೊಟ್ರೇಶ್ ಕಡತಗಳಿಗೆ ಸಹಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಇದನ್ನೂ ಓದಿ

ಮೈಸೂರಿನ ಕೆರೆಗಳಲ್ಲಿ ಅತಿಥಿಗಳ ಕಲರವ; ಚಳಿಗಾಲವೆಂದು ಮಂಗೋಲಿಯ, ರಷ್ಯಾದಿಂದ ಹಾರಿಬಂದ ಹೆಬ್ಬಾತುಗಳು

ಬೆಂಗಳೂರು: ಐಬಿಎಂ ಕಂಪನಿಯ ನಕಲಿ ಜಾಬ್ ಲೆಟರ್ ನೀಡಿ ವಂಚಿಸುತ್ತಿದ್ದ ಆರೋಪಿ ಅರೆಸ್ಟ್!

Published On - 11:06 am, Mon, 24 January 22