ಬೆಂಗಳೂರು: ಐಬಿಎಂ ಕಂಪನಿಯ ನಕಲಿ ಜಾಬ್ ಲೆಟರ್ ನೀಡಿ ವಂಚಿಸುತ್ತಿದ್ದ ಆರೋಪಿ ಅರೆಸ್ಟ್!

ಬೆಂಗಳೂರು: ಐಬಿಎಂ ಕಂಪನಿಯ ನಕಲಿ ಜಾಬ್ ಲೆಟರ್ ನೀಡಿ ವಂಚಿಸುತ್ತಿದ್ದ ಆರೋಪಿ ಅರೆಸ್ಟ್!
ಪ್ರಾತಿನಿಧಿಕ ಚಿತ್ರ

ಆರೋಪಿ ಜಾಬ್ ಆಫರ್ ಬಗ್ಗೆ ಒಎಲ್ಎಕ್ಸ್​ನಲ್ಲಿ ಜಾಹಿರಾತು ನೀಡುತ್ತಿದ್ದ. ಸಂಪರ್ಕ ಮಾಡಿದವರಿಗೆ ಐಬಿಎಂನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದ. ಬಳಿಕ ವಿವಿಧ ಅಕೌಂಟ್​ಗೆ ಹಣ ಹಾಕಿಸಿಕೊಳ್ಳುತ್ತಿದ್ದ.

TV9kannada Web Team

| Edited By: sandhya thejappa

Jan 24, 2022 | 9:21 AM

ಬೆಂಗಳೂರು: ಐಬಿಎಂ ಕಂಪನಿಯ ನಕಲಿ ಜಾಬ್ ಲೆಟರ್ (Job Letter) ನೀಡಿ ವಂಚಿಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಮಹಾರಾಷ್ಟ್ರ (Maharashtra) ಮೂಲದ ಸಂಜೀವ್ ಗಂಗರಾಮ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈತ ಮಾನ್ಯತಾ ಟೆಕ್ ಪಾರ್ಕ್ನಲ್ಲಿರುವ ಐಬಿಎಂ ಕಂಪನಿಯಲ್ಲಿ (IBM Company) ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡುತ್ತಿದ್ದ. ಒಬ್ಬೊಬ್ಬರಿಂದ 15 ರಿಂದ 50 ಸಾವಿರದ ವರೆಗೆ ಹಣ ಪಡೆಯುತ್ತಿದ್ದ. ಇದುವರೆಗೆ ಸುಮಾರು 40 ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಐಬಿಎಂ ಹೆಚ್ಆರ್ ಅಭಿಜಿತ್ ರಾಯ್ ನೀಡಿರುವ ದೂರಿನ ಆಧಾರದ ಮೇಲೆ ಆರೋಪಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಜಾಬ್ ಆಫರ್ ಬಗ್ಗೆ ಒಎಲ್ಎಕ್ಸ್​ನಲ್ಲಿ ಜಾಹಿರಾತು ನೀಡುತ್ತಿದ್ದ. ಸಂಪರ್ಕ ಮಾಡಿದವರಿಗೆ ಐಬಿಎಂನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದ. ಬಳಿಕ ವಿವಿಧ ಅಕೌಂಟ್​ಗೆ ಹಣ ಹಾಕಿಸಿಕೊಳ್ಳುತ್ತಿದ್ದ. ನಂತರ ಐಬಿಎಂ ಹೆಸರು ಹಾಗೂ ಲೋಗೊ ಬಳಸಿಕೊಂಡು ಜಾಬ್ ಆಫರ್ ಲೆಟರ್ ಕಳಿಸುತ್ತಿದ್ದ. ಐಬಿಎಂ ಹೆಚ್ ಆರ್ ಪ್ರದೀಪ್ ಅವರನ್ನು ಭೇಟಿ ಮಾಡುವಂತೆ ತಿಳಿಸಿದ್ದ. ಈತನ ಮಾತು ನಂಬಿ ಐಬಿಎಂ ಕಂಪನಿಗೆ ಹೋದಾಗ ಅಸಲಿಯತ್ತು ಬಯಲಿಗೆ ಬಂದಿದೆ.

ಆರೋಪಿ ಹೇಳುತ್ತಿದ್ದ ಪ್ರದೀಪ್ ಎಂಬ ಹೆಸರಿನ ಹೆಚ್ ಆರ್ ಕಂಪನಿಯಲ್ಲಿ ಇಲ್ಲ. ಹೀಗಾಗಿ ಉದ್ಯೋಗಾಕಾಂಕ್ಷಿಗಳು ಮೋಸ ಹೋಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಸಂಪಿಗೆಹಳ್ಳಿ ಠಾಣೆಯಲ್ಲಿ ಐಬಿಎಂ ಹೆಚ್ ಆರ್ ಅಭಿಜಿತ್ ರಾಯ್ ದೂರು ದಾಖಲಿಸಿದ್ದರು. ದೂರಿನನ್ವಯ ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಬಂಧನ ಕಲಬುರಗಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ನಜೀರ್ ಅಹ್ಮದ್, ರಾಮಲಿಂಗಪ್ಪ ಎಂಬುವವರನ್ನ ಬಂಧಿಸಿದ್ದು, ಬಂಧಿತರಿಂದ 6 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಬಂಧಿತರು ಕಲಬುರಗಿ ನಗರದ ನಿವಾಸಿಗಳು ಎಂದು ತಿಳಿದುಬಂದಿದೆ.

ಇದನ್ನೂ ಓದಿ

ಸುಭಾಷ್​ ಚಂದ್ರ ಬೋಸ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 20 ಲಕ್ಷ ರೂ.ದಂಡ ವಿಧಿಸಿದ ಡಿಜಿಸಿಎ

ಗೋಕರ್ಣದಲ್ಲಿ ಅಡ್ಡಾದಿಡ್ಡಿ ಬೈಕ್ ಓಡಿಸಿ, ಪೊಲೀಸರ ಜೊತೆನೇ ಯುವತಿ, ಯುವಕ ರಂಪಾಟ

Follow us on

Related Stories

Most Read Stories

Click on your DTH Provider to Add TV9 Kannada