ಬೆಂಗಳೂರು, ಡಿಸೆಂಬರ್ 9: ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಂಧ್ರ ಪ್ರದೇಶದ ಕಡಪ ಮೂಲದ ಯುವಕ ಇತ್ತೀಚೆಗೆ ಕ್ರೆಡಿಟ್ ಕಾರ್ಡ್ ಮಾಡಿಸಲು ಬ್ಯಾಂಕ್ವೊಂದಕ್ಕೆ ತೆರಳಿದ್ದ. ಈ ವೇಳೆ ಕಸ್ಟಮರ್ ಕೇರ್ ಆಗಿದ್ದ ಯುವತಿ ಜೊತೆ ಸ್ನೇಹ ಬೆಳೆಸಿದ ಆಸಾಮಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ನಾಪತ್ತೆಯಾಗಿದ್ದಾನೆ.
ಕಸ್ಟಮರ್ ಕೇರ್ ಯುವತಿ ಮೇಲೆ ದೌರ್ಜನ್ಯ ಎಸಗಿದ ಆಸಾಮಿ ಕಡಪ ಮೂಲದ ಲಕ್ಷ್ಮೀ ರೆಡ್ಡಿ ಎಂಬುದು ಗೊತ್ತಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಲಕ್ಷ್ಮೀ ರೆಡ್ಡಿ 2019 ರಲ್ಲಿ ಕ್ರೆಡಿಟ್ ಕಾರ್ಡ್ ಮಾಡಿಸಬೇಕು ಎಂದು ಖಾಸಗಿ ಬ್ಯಾಂಕ್ಗೆ ತೆರಳಿದ್ದ. ಈ ವೇಳೆ ಬ್ಯಾಂಕ್ನಲ್ಲಿ ಕಸ್ಟಮರ್ ಕೇರ್ ಆಗಿದ್ದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದಾನೆ. ನಂತರ ಇಬ್ಬರ ನಡುವೆ ಸ್ನೇಹ ಮೂಡಿದೆ. ಇದಾಗಿ ಕೆಲವು ಸಮಯದ ಬಳಿಕ, ತನ್ನ ಅಕ್ಕನ ಹುಟ್ಟುಹಬ್ಬ ಇದೆ ಎಂದು ಯುವತಿಯನ್ನು ಆರ್ಟಿ ನಗರದ ಹೊಟೇಲ್ವೊಂದಕ್ಕೆ ಕರೆದಿದ್ದನಂತೆ. ಈ ವೇಳೆ ಜ್ಯೂಸ್ನಲ್ಲಿ ಮತ್ತು ಬರುವ ಡ್ರಗ್ಸ್ ಹಾಕಿ ಯುವತಿಗೆ ಮತ್ತು ಬರಿಸಿದ್ದಾನೆ. ಅಲ್ಲದೆ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ವಿಡಿಯೋ ಮಾಡಿಟ್ಟು ಬೆದರಿಕೆ ಹಾಕಲು ಮುಂದಾಗಿದ್ದ ಎಂದು ಆರೋಪಿಸಲಾಗಿದೆ.
ಸದ್ಯ ಸಂತ್ರಸ್ತೆ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಆರೋಪಿ ಲಕ್ಷ್ಮೀ ರೆಡ್ಡಿ ವಿಡಿಯೋ ತೋರಿಸಿ ಆಕೆಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಜಾತಿ ಹೆಸರಿನಲ್ಲಿ ನಿಂದಿಸಿ ಅವಮಾನ ಎಂದೂ ಆರೋಪಿಸಿರುವ ಯುವತಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ನಾದಿನಿ ಮೇಲೆ ಕಣ್ಣಾಕಿ ಹೆಣವಾದ ಬಾವ: ಮಂಡ್ಯದಲ್ಲೊಂದು ಭಯಾನಕ ಕ್ರೈಂ ಸ್ಟೋರಿ
ಸದ್ಯ ಸಂತ್ರಸ್ತೆ ನೀಡಿದ ದೂರಿನ ಮೇಲೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಶೋಷಣೆ, ಬೆದರಿಕೆ, ಜಾತಿ ನಿಂದನೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಪೊಲೀಸರು ಕೇಸ್ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇನ್ನು ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪಿ ಲಕ್ಷ್ಮೀ ರೆಡ್ಡಿ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾನೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ