ನಾದಿನಿ ಮೇಲೆ ಕಣ್ಣಾಕಿ ಹೆಣವಾದ ಬಾವ: ಮಂಡ್ಯದಲ್ಲೊಂದು ಭಯಾನಕ ಕ್ರೈಂ ಸ್ಟೋರಿ

ಅವರಿಬ್ಬರೂ ಒಂದೇ ಮನೆಯ ಅಳಿಯಂದಿರು. ಸಂಬಂಧಿಕರಿಗಿಂತಲೂ ಹೆಚ್ಚಾಗಿ ಸ್ನೇಹಿತರ ರೀತಿಯಲ್ಲಿ ಇದ್ದರು. ಆದರೆ ಅವರಿಬ್ಬರ ನಡುವೆ ಒಬ್ಬನಿಗೆ ತನ್ನ ಪತ್ನಿಯ ಅನೈತಿಕ ಸಂಬಂಧದ ವಾಸನೆ ಹೊಡೆದಿತ್ತು. ಹೀಗಾಗಿ ತನ್ನ ಪತ್ನಿಯ ಅಕ್ಕನ ಗಂಡನನ್ನ ಪಕ್ಕ ಪ್ಲ್ಯಾನ್ ಮಾಡಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಈ ಕುರಿತ ಒಂದು ವರದಿ ಇಲ್ಲಿದೆ.

ನಾದಿನಿ ಮೇಲೆ ಕಣ್ಣಾಕಿ ಹೆಣವಾದ ಬಾವ: ಮಂಡ್ಯದಲ್ಲೊಂದು ಭಯಾನಕ ಕ್ರೈಂ ಸ್ಟೋರಿ
ನಾಗೇಶ್( ಎಡಕ್ಕೆ ಕೊಲೆಯಾದ ವ್ಯಕ್ತಿ), ನಾಗೇಶ್( ಬಲಗಡೆ ಆರೋಪಿ)
Follow us
ಪ್ರಶಾಂತ್​ ಬಿ.
| Updated By: ರಮೇಶ್ ಬಿ. ಜವಳಗೇರಾ

Updated on: Dec 08, 2024 | 6:21 PM

ಮಂಡ್ಯ, (ಡಿಸೆಂಬರ್ 08):  ತನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕೆಯ ಮೇಲೆ ಹೆಂಡತಿಯ ಅಕ್ಕನ ಗಂಡನನ್ನೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಕನ್ನಹಟ್ಟಿ ಗ್ರಾಮದ ಬಳಿ‌ ನಡೆದಿದೆ. ಮಂಡ್ಯ ತಾಲೂಕಿನ ಮುದಗಂದೂರು ಗ್ರಾಮದ ನಾಗೇಶ್(45) ಕೊಲೆಯಾದ ದುರ್ದೈವಿ. ಇನ್ನು ಮಂಡ್ಯ ತಾಲೂಕು ಹುಚ್ಚೇಗೌಡನಕೊಪ್ಪಲು ಗ್ರಾಮದ ನಾಗೇಶ್(43)ಕೊಲೆ ಆರೋಪಿ. ಕೊಲೆ ಆರೋಪಿ ನಾಗೇಶ್​ನ ಪತ್ನಿ ಜೊತೆ ಭಾವನೇ ಆದ ಮತ್ತೊಬ್ಬ ನಾಗೇಶ್ (ಹತ್ಯೆಯಾದ ವ್ಯಕ್ತಿ) ಎಂಬಾತ ಅನೈತಿಕ‌ ಸಂಬಂಧ ಹೊಂದಿದ್ದ. ಇದರಿಂದ ಕೆರಳಿದ ಆರೋಪಿ ನಾಗೇಶ್, ಆತನನ್ನು ಮುಗಿಸಲೇಬೇಕು ಎಂದು ಪಕ್ಕ ಪ್ಲ್ಯಾನ್ ಮಾಡಿ ಡಿಸೆಂಬರ್ 3 ರಂದು‌ ಬೆಂಗಳೂರಿನಿಂದ ಕರೆದುಕೊಂಡು ಬಂದು ಕಂಠಪೂರ್ತಿ ಕುಡಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

ಅಂದಹಾಗೆ ಕೊಲೆಯಾದ ನಾಗೇಶ್ ಹಾಗೂ ಆರೋಪಿ ನಾಗೇಶ್ ನ ಎರಡು ಕುಟುಂಬಗಳು ಬೆಂಗಳೂರಿನ ನಾಗಸಂದ್ರದಲ್ಲಿ ವಾಸವಾಗಿದ್ದರು. ಒಂದೇ ಏರಿಯಾದಲ್ಲಿ ಮನೆ ಮಾಡಿಕೊಂಡು ಇದ್ದರು. ಕೊಲೆಯಾದ ನಾಗೇಶ್ ಆಟೋ ಚಾಲಕನಾಗಿದ್ದರೇ, ಆರೋಪಿ ನಾಗೇಶ್ ಪ್ಯಾಕರ್ಸ್ ಅಂಡ್ ಮೂವರ್ಸ್ ಕೆಲಸ ಮಾಡುತ್ತಿದ್ದ. ಒಂದೇ ಮನೆಯ ಅಳಿಯಂದಿರೂ ಆಗಿದ್ದರು ಸಾಕಷ್ಟು ಸ್ನೇಹಿತರ ತರ ಇದ್ದರು. ಕಳೆದ ಹಲವು ದಿನಗಳಿಂದಲೂ ಒಟ್ಟಿಗೆ ಪಾರ್ಟಿ ಕೂಡ ಮಾಡುತ್ತಿದ್ದರು.

ಇದನ್ನೂ ಓದಿ: ಗುಟ್ಟು ರಟ್ಟು ಮಾಡಿದ ಮೈದುನನ ಸ್ಟೇಟಸ್​: ಸಾವಿಗೆ ಶರಣಾದ ಮಹಿಳೆ!

ವಾರದ ಹಿಂದೆ ಸಹ ಒಟ್ಟಿಗೆ ಮಲೆ ಮಹದೇಶ್ವರ ಸ್ವಾಮಿ ಬೆಟ್ಟಕ್ಕೂ ಹೋಗಿ ಬಂದಿದ್ದರು. ಆದರೆ ಆರೋಪಿ ನಾಗೇಶ್ ಗೆ ಪತ್ನಿಯ ಶೀಲದ ಮೇಲೆ ಶಂಕೆ. ಸ್ವತಃ ಬಾವನೇ ನಾದಿನಿ ಜೊತೆ ಆಕ್ರಮ ಸಂಬಂಧವೊಂದಿದ್ದಾನೆ ಎಂಬ ಶಂಕೆ‌ ಇತ್ತು. ಹೀಗಾಗಿ ಡಿಸೆಂಬರ್ 3 ರಂದು ಬೆಂಗಳೂರಿನಿಂದ ಕರೆದುಕೊಂಡು ಬಂದು ಕಂಠಪೂರ್ತಿ ‌ಗ್ರಾಮದ ಸಮೀಪವೇ ಕರೆದುಕೊಂಡು ಬಂದಿದ್ದಾನೆ.

ಬಳಿಕ ರಸ್ತೆ ಬದಿಯ ನಿರ್ಜನ ಪ್ರದೇಶದಲ್ಲಿ ರಾತ್ರಿ 10.30 ಸುಮಾರಿಗೆ ನಾಗೇಶ್ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ. ಮಾರನೇ ದಿನ ಮೃತದೇಹವನ್ನ ಸ್ಥಳೀಯರು ನೋಡಿ ಪೊಲೀಸರ ಮಾಹಿತಿ ನೀಡಿದ್ದರು. ಹತ್ಯೆ ಮಾಡಿ ಪರಾರಿಯಾಗಿದ್ದ ನಾಗೇಶ್​ನನ್ನು ಶಿವಳ್ಳಿ ಠಾಣೆ ಪೊಲೀಸರು ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ