AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಟ್ಟು ರಟ್ಟು ಮಾಡಿದ ಮೈದುನನ ಸ್ಟೇಟಸ್​: ಸಾವಿಗೆ ಶರಣಾದ ಮಹಿಳೆ!

ಏಳು ವರ್ಷದ ಹಿಂದೆ ಮದುವೆಯಾಗಿದ್ದ ಮಹಿಳೆಗೆ ಎರಡು ಮಕ್ಕಳು ಕೂಡ ಇವೆ. ಮೊನ್ನೆ ಅಕ್ಕನ ಮನೆಗೆ ಹೋಗಿದ್ದ ಮಹಿಳೆ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾರಣ ಕೆದಕಿದ ಪೊಲೀಸರಿಗೆ ಗೊತ್ತಾಗಿದ್ದು ಅದೊಂದು ಸ್ಟೇಟಸ್ ದಿಂದಾಗಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅನ್ನೋದು. ಅಷ್ಟಕ್ಕೂ ಆ ಸ್ಟೇಟಸ್ ನಲ್ಲಿ ಇದ್ದಿದ್ದಾದ್ರೂ ಎನೂ? ಆತ್ಮಹತ್ಯೆ ಮಾಡಿಕೊಂಡಾಕೆಯ ಅಸಲಿ ಕಹಾನಿ ಎನೂ ಅಂತೀರಾ ಈ ಸ್ಟೋರಿ ನೋಡಿ..

ಗುಟ್ಟು ರಟ್ಟು ಮಾಡಿದ ಮೈದುನನ ಸ್ಟೇಟಸ್​: ಸಾವಿಗೆ ಶರಣಾದ ಮಹಿಳೆ!
Sahadev Mane
| Edited By: |

Updated on:Dec 08, 2024 | 3:19 PM

Share

ಬೆಳಗಾವಿ, (ಡಿಸೆಂಬರ್ 08): ಮೈದುನ ಜೊತೆಗಿನ ಗುಪ್ತ ಸಂಬಂಧ  ಬಹಿರಂಗವಾಗಿದ್ದಕ್ಕೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ.ಕಾಗವಾಡ ತಾಲೂಕಿನ ಕುಸನಾಳ ಗ್ರಾಮದ  28 ವರ್ಷದ ಆರತಿಗೆ ಏಳು ವರ್ಷದ ಹಿಂದೆ ಮೊರಬ ಗ್ರಾಮದ ಪ್ರಶಾಂತ್ ಕಾಂಬಳೆ ಜೊತೆಗೆ ಮದುವೆಯಾಗಿದ್ದು, ಎರಡು ಮಕ್ಕಳು ಸಹ ಇವೆ. ಆದ್ರೆ,  ಮೈದುನ (ಗಂಡನ ಸಹೋದರ) ಜೊತೆಗಿನ ಸಂಬಂಧ ಎಲ್ಲರಿಗೂ ಗೊತ್ತಾಗುತ್ತಿದ್ದಂತೆಯೇ ಆರತಿ ತನ್ನ ಅಕ್ಕನ ಮನಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕಾಗವಾಡ ತಾಲೂಕಿನ ಕುಸನಾಳ ಗ್ರಾಮದ ಆರತಿಗೆ ಏಳು ವರ್ಷದ ಹಿಂದೆ ಮೊರಬ ಗ್ರಾಮದ ಪ್ರಶಾಂತ್ ಕಾಂಬಳೆ ಜೊತೆಗೆ ಮದುವೆಯಾಗಿದ್ದು, ಎರಡು ಮಕ್ಕಳು ಸಹ ಇವೆ. ಒಂದು ಗಂಡು ಒಂದು ಹೆಣ್ಣು ಮಗುವಿದ್ದು ಆದ್ರೇ ಅಕ್ಕನ ಮನೆಗೆ ಬಂದಿದ್ದವಳು ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ನಡೆಸಿದಾಗ ಒಂದು ವಾಟ್ಸಪ್​ ಹಾಗೂ ಇನ್ಸ್ಟಾಗ್ರಾಮ್ ಸ್ಟೇಟಸ್​ನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಮದುವೆಯಾಗಿದ್ದರೂ 2 ಗರ್ಲ್ ಫ್ರೆಂಡ್ಸ್​​ಗಾಗಿ ಕಳ್ಳತನಕ್ಕೆ ಇಳಿದಿದ್ದ ಆರೋಪಿ ಬಂಧನ

ಹೌದು.. ಆರತಿ ಆತ್ಮಹತ್ಯೆ ಮಾಡಿಕೊಂಡಿದ್ದು ಗಂಡ, ಅತ್ತೆ ಮಾವ ಕಿರುಕುಳ ಅಥವಾ ತವರು ಮನೆಯವರ ಕಿರುಕುಳದಿಂದ ಅಲ್ಲ. ಬದಲಿಗೆ ಅದೊಂದು ವಾಟ್ಸಪ್, ಇನ್ಸ್ಟಾಗ್ರಾಂ ಸ್ಟೇಟಟ್​ನಿಂದ  ಎನ್ನುವುದು ಗೊತ್ತಾಗಿದೆ. ಈ ಸಂಬಂಧ ಆರು ಜನರ ವಿರುದ್ಧ ಆಕೆಯ ಗಂಡ ದೂರು ದಾಖಲಾಗಿದೆ.

ಆ ಸ್ಟೇಟಸ್ ನಲ್ಲಿ ಏನಿತ್ತು?

ಆತ್ಮಹತ್ಯೆ ಮಾಡಿಕೊಂಡಿದ್ದ ಆರತಿ ಸಾವಿಗೆ ಕಾರಣ ಮೊಬೈಲ್ ನಲ್ಲಿಟ್ಟಿದ್ದ ಸ್ಟೇಟಸ್. ಆ ಸ್ಟೇಟಸ್ ನಲ್ಲಿ ಇದ್ದಿದಾದ್ರೂ ಏನು ಎನ್ನುವುದನ್ನು ನೋಡಿದಾಗ ಬೆಳಕಿಗೆ ಬಂದಿದ್ದು ಅದೊಂದು ಸಂಬಂಧ. ಇಲ್ಲಿ ಆರತಿ ಹಾಗೂ ಮೈದುನ (ಗಂಡನ ಸಹೋದರ) ಸಾಗರ್ ಕಾಂಬಳೆ ನಡುವೆ ಕೆಲ ದಿನಗಳಿಂದ ಸಂಬಂಧ ಇತ್ತು. ಆ ವೇಳೆ ಇಬ್ಬರು ಫೋಟೋ ಕೂಡ ತೆಗೆದುಕೊಂಡಿದ್ದರು. ಆದ್ರೆ, ಮೊನ್ನೆ ಮೈದುನ, ಆರತಿ ಫೋಟೋ ಜೊತೆಗೆ ತನ್ನ ಫೋಟೋ ಸೇರಿಸಿ ಎಡಿಟ್ ಮಾಡಿ ಅದನ್ನ ವಾಟ್ಸಪ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿದ್ದಾನೆ.

ಇದನ್ನ ನೋಡಿದ ಗ್ರಾಮದ ಕೆಲ ಯುವಕರು ಕೂಡಲೇ ಆರತಿ ಗಂಡ ಪ್ರಶಾಂತ್ ಗೆ ತಿಳಿಸಿದ್ದಾರೆ. ಬಳಿಕ ಪ್ರಶಾಂತ್ ಮನೆಗೆ ಹೋಗಿ ಹೆಂಡತಿ ಆರತಿ ಜೊತೆ ಜಗಳ ಮಾಡಿದ್ದಾನೆ. ನಂತರ ಹಿರಿಯರು ಸೇರಿ ಈಕೆಗೆ ಬುದ್ದಿವಾದ ಹೇಳಿ ಅಕ್ಕನ ಮನೆಗೆ ಕಳುಹಿಸಿದ್ದಾರೆ.  ಗುಪ್ತವಾಗಿದ್ದ ಸಂಬಂಧ ಹೊರಗೆ ಬಿತ್ತು ಎಂದು ಆರತಿ ಅಕ್ಕನ ಮನೆಗೆ ಬಂದಾಗ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈಕೆಯ ಸಾವಿಗೆ ಅವಿವಾಹಿತ ಸಾಗರ್ ಹಾಗೂ ಆತನ ಕುಟುಂಬಸ್ಥರು ಕಾರಣ ಎಂದು ಮಹಿಳೆಯ ಪೋಷಕರು ಆರು ಜನರ ವಿರುದ್ದ ರಾಯಬಾಗ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ಆರತಿ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆಯೇ ಸಾಗರ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.  ಆದ್ರೆ, ಇತ್ತ ಎರಡು ಮಕ್ಕಳು ತಾಯಿ ಇಲ್ಲದ ತಬ್ಬಲಿಗಳಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:00 pm, Sun, 8 December 24

ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ