ಬೆಂಗಳೂರು, ಜ.11: ನಗರದಲ್ಲಿ ಆಗಾಗ ನಡೆಯುತ್ತಿರುವ ವಿದ್ಯುತ್ ತಂತಿ ಅವಘಡಗಳಿಂದ ಎಚ್ಚೆತ್ತ ಬೆಸ್ಕಾಂ (Bescom) ಇಲಾಖೆ ಸಮೀಕ್ಷೆ ನಡೆಸಿದ್ದು ಆಘಾತಕಾರಿ ಅಂಶ ಬಯಲಾಗಿದೆ. ರಸ್ತೆಯಲ್ಲಿ ಯಮನ ರೂಪದಲ್ಲಿ ಕಾದು ಕುಳಿತಿರುವ ವಿದ್ಯುತ್ ತಂತಿಗಳು ಅನೇಕ ಕಡೆ ಪತ್ತೆಯಾಗಿವೆ. ಕೊಂಚ ಯಾಮಾರಿದ್ರೂ ಯಮಲೋಕ ಫಿಕ್ಸ್. ಇಂತಹದೊಂದು ಆಘಾತಕಾರಿ ಅಂಶವನ್ನ ಖುದ್ದು ಬೆಸ್ಕಾಂ ಅಧಿಕಾರಿಗಳ ಅಂಕಿ ಅಂಶವೇ ಬಯಲು ಮಾಡಿದೆ.
ಕಾಡುಗೋಡಿ ಪೊಲೀಸ್ ಠಾಣಾ ಲಿಮಿಟ್ಸ್ ನಲ್ಲಿ ವಿದ್ಯುತ್ ಸ್ಪರ್ಶಿಸಿ ತಾಯಿ-ಮಗು ಮೃತಪಟ್ಟ ಘೋರ ದುರಂತದ ಬಗ್ಗೆ ನಿಮ್ಗೆಲ್ಲಾ ಗೊತ್ತಿರ್ಬೋದು. ಅಂದು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತಾಯಿ & ಮಗು ಬಲಿಯಾಗಿದ್ರು. ಈ ದುರಂತದ ಬೆನ್ನಲ್ಲೇ ಟಿವಿ9 ಕೂಡ ರಿಯಾಲಿಟಿ ಚೆಕ್ ಮಾಡಿ, ಎಲ್ಲೆಲ್ಲಿ ಅಪಾಯಕಾರಿ ವಿದ್ಯುತ್ ತಂತಿಗಳು ಹಾದು ಹೋಗಿದೆ? ಎಲ್ಲೆಲ್ಲಿ ಟ್ರಾನ್ಸ್ ಫಾರಮ್ ಅಪಾಯದಲ್ಲಿದೆ ಅನ್ನೋದರ ಬಗ್ಗೆ ವರದಿಯನ್ನ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಬೆಸ್ಕಾಂ ಅಧಿಕಾರಿಗಳು ಕೂಡ ಸರ್ವೇ ಮಾಡಿ, ಇಂತಹ ಡೇಂಜರಸ್ ಜಾಗಗಳನ್ನ ಪತ್ತೆ ಮಾಡಿ, ಅವುಗಳನ್ನ ಸರಿಪಡಿಸುವ ಕೆಲಸ ಮಾಡ್ತಿದೆ. ಆದರೆ ವಿಚಾರ ಏನಂದ್ರೆ ಇನ್ನೂ ಕೂಡ ಬೆಸ್ಕಾಂ ವ್ಯಾಪ್ತಿಯಲ್ಲಿ 30,243 ಡೇಂಜರ್ ಜಾಗ ಇದ್ದು, ಅವುಗಳನ್ನ ಸರಿಪಡಿಸುವ ಕೆಲಸ ಆಗಬೇಕಿದೆ. ಬೆಂಗಳೂರಿನಲ್ಲೂ ಇಂತಹ ಡೇಂಜರಸ್ ಜಾಗಗಳ ಪಟ್ಟಿ ಕೂಡ ದೊಡ್ಡದಿದೆ. ಜನವರಿ ಕೊನೆಯೊಳಗೆ ಎಲ್ಲಾ ಡೇಂಜರಸ್ ಸ್ಪಾಟ್ ಗಳನ್ನು ಕ್ಲಿಯರ್ ಮಾಡ್ತಿವಿ ಎಂದು ಬೆಸ್ಕಾಂ ಜನರಲ್ ಮ್ಯಾನೇಜರ್ ಎಸ್.ಟಿ ಶಾಂತಮಲ್ಲಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: ಹೊಲದಲ್ಲಿ ಬಾಲಕನಿಗೆ ವಿದ್ಯುತ್ ಶಾಕ್ ಪ್ರಕರಣ: ಬೆರಳುಗಳು ಮುಂಗೈ ತೆಗೆದ ವೈದ್ಯರು, ಇನ್ನೂ ಜಡ್ಡುಗಟ್ಟಿರುವ ಬೆಸ್ಕಾಂ ಅಧಿಕಾರಿಗಳು
ಎಲ್ಲಿ | ಪತ್ತೆ | ಸರಿಪಡಿಸಿರೋದು | ಬಾಕಿ |
ಉತ್ತರ | 13,046 | 6858 | 6188 |
ಪೂರ್ವ | 9037 | 4755 | 4282 |
ಪಶ್ಚಿಮ | 17429 | 10,342 | 7087 |
ದಕ್ಷಿಣ | 23,847 | 11,161 | 12,686 |
ಒಟ್ಟು | 63,359 | 33,116 | 30,243 |
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬೆಂಗಳೂರು ನಿವಾಸಿ ಮೋಹನ್ ಕುಮಾರ್ ಅಮಾಯಕರ ಪ್ರಾಣ ಹೋಗುವವರೆಗೂ ಬೆಸ್ಕಾಂ ಅಧಿಕಾರಿಗಳು ಸಮಸ್ಯೆ ಬಗಹರಿಸುವುದಿಲ್ಲ ತಮ್ಮ ಹೆಂಡತಿ ಮಕ್ಕಳಿಗೆ ಸಮಸ್ಯೆ ಆದರೆ ಗೊತ್ತಾಗುತ್ತದೆ. ಸರ್ಕಾರದ ಸಂಬಳ ತೆಗೆದುಕೊಂಡು ಆಫೀಸ್ ನಲ್ಲಿ ಸೈಲೆಂಟ್ ಆಗಿದ್ರೆ ಹೇಗೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಒಟ್ಟಿನಲ್ಲಿ ನಗರದಲ್ಲಿರುವ ಈ ಡೆಡ್ಲಿ ಸ್ಪಾಟ್ ಗಳಿಗೆ ಜನವರಿ ಅಂತ್ಯದೊಳಗೆ ಮುಕ್ತಿ ನೀಡಲು ಬೆಸ್ಕಾಂ ಕೂಡ ಪ್ಲಾನ್ ಹಾಕಿಕೊಂಡಿದ್ದು, ಎಷ್ಟರ ಮಟ್ಟಿಗೆ ಅದು ಸಕ್ಸಸ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:57 am, Thu, 11 January 24