
ಬೆಂಗಳೂರು, ಡಿಸೆಂಬರ್ 15: ನಗರದಲ್ಲಿ ಟ್ರಾಫಿಕ್ (Bangaluru traffic) ಸಮಸ್ಯೆ ಬಗೆಹರಿಸಲು ಭಾರತೀಯ ವಿಜ್ಞಾನ ಸಂಸ್ಥೆ ಸಂಚಾರಿ ಪೊಲೀಸರೊಂದಿಗೆ ಕೈಜೋಡಿಸಿದೆ. ಸಂಚಾರಿ ಪೊಲೀಸರು ಸಂಗ್ರಹಿಸಿರುವ ದತ್ತಾಂಶ ಬಳಸಿ IISC ಸಂಶೋಧನೆ ನಡೆಸಿ ಸಂಚಾರಿ ಪೊಲೀಸರಿಗೆ ಸಲಹೆ ನೀಡಲಿದೆ. ಮಹತ್ವದ ಯೋಜನೆಯ ಒಪ್ಪಂದಕ್ಕೆ ಸಂಚಾರಿ ಪೊಲೀಸರು ಸಹಿಮಾಡಿದ್ದು, ಇದಕ್ಕಾಗಿ ಸಂಚಾರಿ ವಿಭಾಗದ ಪೊಲೀಸರಿಗೆ ಭಾರತೀಯ ವಿಜ್ಞಾನ ಸಂಸ್ಥೆ ತರಬೇತಿ ನೀಡಲಿದೆ. ಆ ಮೂಲಕ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಮತ್ತು ಆ್ಯಕ್ಸಿಡೆಂಟ್ಗೆ ಮುಕ್ತಿ ಸಿಗುತ್ತಾ ಕಾದುನೋಡಬೇಕಿದೆ.
ಬ್ರ್ಯಾಂಡ್ ಬೆಂಗಳೂರು ಕಾರ್ಯಕ್ರಮ ಯೋಜನೆ ಅಡಿಯಲ್ಲಿ ನಗರದ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಸಾರ್ವಜನಿಕ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿತ್ತು. ಈ ಸಲಹೆಗಳನ್ನು ಒಟ್ಟುಗೂಡಿಸಿ ಪ್ರತ್ಯೇಕ ವರದಿ ಸಿದ್ದಪಡಿಸಿ ಸಲ್ಲಿಸುವಂತೆ ಐಐಎಸ್ಸಿ ಮತ್ತು ಆರ್ಆಯ್ಎಮ್ಗೆ ರಾಜ್ಯ ಸರ್ಕಾರ ಸೂಚಿಸಿತ್ತು.
ಇದನ್ನೂ ಓದಿ: ಬೆಂಗಳೂರು: ಸಂಚಾರ ದಟ್ಟಣೆ ನಿಯಂತ್ರಿಸಲು ವಾಹನ ಸವಾರರಿಂದ ದಟ್ಟಣೆ ಶುಲ್ಕ ವಸೂಲಿಗೆ ಚಿಂತನೆ
ಮುಂಬರುವ ವರ್ಷಗಳಲ್ಲಿ ನಗರದಲ್ಲಿ ಹೆಚ್ಚುತ್ತಿರುವ ವಾಹನ ಹಾಗೂ ಸಂಚಾರ ದಟ್ಟಣೆಯ ಸಮಸ್ಯೆಯನ್ನು ಪರಿಹರಿಸಲು, ಸೂಕ್ತವಾದ ಮಾಸ್ಟರ್ಪ್ಲಾನ್ ಹಾಗೂ ಅನ್ವಯವಾಗುವ ಸಾರಿಗೆ ಯೋಜನೆಯನ್ನು ಅಭಿವೃದ್ಧಿಪಡಿಸಬೇಕಿದೆ. ಹಾಗೇ ಇದನ್ನು ಕಾಲಕಾಲಕ್ಕೆ ನವೀಕರಿಸಬೇಕು. ಸಂಚಾರ ದಟ್ಟಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ಯೋಜನೆಗಳು ಅತ್ಯಗತ್ಯವಿದೆ.
ಟ್ರಾಫಿಕ್ ಸಮಸ್ಯೆಗೆ ಪೆರಿಫೆರಲ್ ರಿಂಗ್ ರಸ್ತೆ ಪರಿಹಾರವಾಗಲಿದೆ ಎಂದು ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಫ್ಲೈಓವರ್, ಸುರಂಗ ರಸ್ತೆ ಮಾಡಿದರೆ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತೆ. ಬೆಂಗಳೂರಿನ ಪ್ರತಿ ವಾರ್ಡ್ಗೆ ಯುವ ಐಎಎಸ್ ಅಧಿಕಾರಿಗಳ ನೇಮಕ ಮಾಡುತ್ತೇವೆ. ಬೆಂಗಳೂರಿಗರ ಆಸ್ತಿ ಮೌಲ್ಯದ ಬಗ್ಗೆ ಇ-ಸ್ವತ್ತು ಮಾಡಿಸುತ್ತೇವೆ. ಪ್ರತಿಯೊಬ್ಬರ ಮನೆ ಬಾಗಿಲಿಗೆ ಇ-ಸ್ವತ್ತು ದಾಖಲೆ ತಲುಪಿಸುತ್ತೇವೆ.
ಇದನ್ನೂ ಓದಿ: ಟಿವಿ9 ವರದಿ ಇಂಪ್ಯಾಕ್ಟ್: ಬಿಎಂಟಿಸಿಗೆ ಬಂತು 100 ಹೊಸ ಎಲೆಕ್ಟ್ರಿಕ್ ಬಸ್, ಇವುಗಳ ವಿಶೇಷತೆ ತಿಳಿಯಿರಿ
ಸರ್ಕಾರಕ್ಕೆ ತೆರಿಗೆ ಕಟ್ಟುವವರಿಗೆ ನಾವು ಸೌಲಭ್ಯ ಕಲ್ಪಿಸಬೇಕಾಗಿದೆ. ಆಸ್ತಿ ಮೌಲ್ಯಮಾಪನ ಮಾಡಿಸಿದರೆ ತೆರಿಗೆ ವಂಚಕರು ಗೊತ್ತಾಗುತ್ತೆ. ಎತ್ತಿನಹೊಳೆ ಯೋಜನೆ ಮೂಲಕ ತಿಪ್ಪಗೊಂಡನಹಳ್ಳಿಗೆ ನೀರು ತರುತ್ತೇವೆ. ತಿಪ್ಪಗೊಂಡನಹಳ್ಳಿ ತಲುಪಿದ ನಂತರ ಮುಂದಿನ ಯೋಜನೆಗೆ ನಿರ್ಧಾರ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.