ಬೆಂಗಳೂರು: 2.5 ಮಿಲಿಯನ್ ಡಾಲರ್ ಪತ್ತೆ​ ಕೇಸ್​​ಗೆ ಟ್ವಿಸ್ಟ್: ಆರ್​ಬಿಐಗೆ ಪತ್ರ, ದೆಹಲಿಗೆ ತೆರಳಿದ ಹೆಬ್ಬಾಳ ಪೊಲೀಸ್​

| Updated By: ಗಂಗಾಧರ​ ಬ. ಸಾಬೋಜಿ

Updated on: Nov 09, 2023 | 8:46 AM

ನಾಗವಾರ ರೈಲು ಹಳಿ ಪಕ್ಕದ ಪೊದೆಯಲ್ಲಿ ಚಿಂದಿ ಆಯುವ ವ್ಯಕ್ತಿಯೊಬ್ಬರಿಗೆ 2.5 ಮಿಲಿಯನ್ ಡಾಲರ್​​ ಕರೆನ್ಸಿಯ ಕಟ್ಟು ಸಿಕ್ಕಿತ್ತು. ಸದ್ಯ ಈ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು, ಖುದ್ದು ಕಮಿಷನರ್ ಮಾಹಿತಿ ನೀಡಿದ ಬೆನ್ನಲ್ಲೆ ಪ್ರಶ್ನೆಗೆ ಉತ್ತರ ಹುಡುಕುತ ಹೆಬ್ಬಾಳ ಪೊಲೀಸರು ದೆಹಲಿಗೆ ತೆರಳಿದ್ದಾರೆ. ಮತ್ತೊಂದೆಡೆ ಸಿಕ್ಕ ಅಮೇರಿಕನ್ ಡಾಲರ್​ಗಳು ನಕಲಿನಾ ಎಂಬ ಶಂಕೆ ಮೂಡಿಸಿದೆ.

ಬೆಂಗಳೂರು: 2.5 ಮಿಲಿಯನ್ ಡಾಲರ್ ಪತ್ತೆ​ ಕೇಸ್​​ಗೆ ಟ್ವಿಸ್ಟ್: ಆರ್​ಬಿಐಗೆ ಪತ್ರ, ದೆಹಲಿಗೆ ತೆರಳಿದ ಹೆಬ್ಬಾಳ ಪೊಲೀಸ್​
ಮಿಲಿಯನ್ ಡಾಲರ್
Follow us on

ಬೆಂಗಳೂರು, ನವೆಂಬರ್​​​​ 9: ನಾಗವಾರ ರೈಲು ಹಳಿ ಪಕ್ಕದ ಪೊದೆಯಲ್ಲಿ ಚಿಂದಿ ಆಯುವ ವ್ಯಕ್ತಿಯೊಬ್ಬರಿಗೆ 2.5 ಮಿಲಿಯನ್ ಡಾಲರ್​​ (dollars) ಕರೆನ್ಸಿಯ ಕಟ್ಟು ಸಿಕ್ಕಿತ್ತು. ಸದ್ಯ ಈ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು, ಖುದ್ದು ಕಮಿಷನರ್ ಮಾಹಿತಿ ನೀಡಿದ ಬೆನ್ನಲ್ಲೆ ಪ್ರಶ್ನೆಗೆ ಉತ್ತರ ಹುಡುಕುತ ಹೆಬ್ಬಾಳ ಪೊಲೀಸರು ದೆಹಲಿಗೆ ತೆರಳಿದ್ದಾರೆ. ಆರ್​ಬಿಐಗೆ ಪತ್ರ ಬರೆಯುವ ಮೂಲಕ ಸತ್ಯ ಹುಡುಕಲು ಹೊರಟಿದ್ದಾರೆ. ಆದರೆ ಈಗ ಆರ್​ಬಿಐ ಕೊಟ್ಟ ಮಾಹಿತಿ ಮೇರೆಗೆ ದೆಹಲಿಯ ಮತ್ತೊಂದು ಕಚೇರಿಗೆ ಎಂಟ್ರಿ ನೀಡಿದ್ದಾರೆ. ಮತ್ತೊಂದೆಡೆ ಸಿಕ್ಕ ಅಮೇರಿಕನ್ ಡಾಲರ್​ಗಳು ನಕಲಿನಾ ಎಂಬ ಶಂಕೆ ಮೂಡಿಸಿದೆ.

ಆರ್​​ಬಿಐಗೆ ಪತ್ರ ಬರೆದ ಹೆಬ್ಬಾಳ ಪೊಲೀಸ್​​

ಜೆರಾಕ್ಸ್​​ಗಳನ್ನು ಬಿಸಾಕಿ ಹೊಗಿರುವ ಬಗ್ಗೆ ಪೊಲೀಸರಿಗೆ ಅನುಮಾನ ಶುರುವಾಗಿದ್ದು, ಪೊದೆಯಲ್ಲಿ ಸಿಕ್ಕ 25 ಲಕ್ಷ ಅಮೆರಿಕನ್ ಡಾಲರ್ ಹಣದ ಮೂಲ ಯಾವುದು? ಈ ಕುರಿತಾಗಿ ಆರ್​​ಬಿಐಗೆ ಪತ್ರ ಬರೆದ ಹೆಬ್ಬಾಳ ಪೊಲೀಸರಿಗೆ ಮಿಲಿಯನ್ ಡಾಲರ್​ನದ್ದೇ ಪ್ರಶ್ನೆ ಆಗಿದೆ.

ಇದನ್ನೂ ಓದಿ: ಬೆಂಗಳೂರು: ಚಿಂದಿ ಆಯುವ ವ್ಯಕ್ತಿಗೆ ರೈಲು ಹಳಿಯಲ್ಲಿ ಸಿಕ್ತು 30 ಲಕ್ಷ ಡಾಲರ್! ಅಸಲಿಯತ್ತೇನು?

ಚಿಂದಿ ಆಯುವಾಗ ಡಾಲರ್ಸ್ ಕಂಡು ಚಿಂದಿ ಆಯುತಿದ್ದವನಿಂದ ಮಾಲೀಕನಿಗೆ ಮಾಹಿತಿ ನೀಡಲಾಗಿದೆ. ಈ ನಡುವೆ ವಿಚಾರ ತಿಳಿದ ಮತ್ತೊರ್ವ ವ್ಯಕ್ತಿಯಿಂದ ಕಮಿಷನರ್​ಗೆ ಮಾಹಿತಿ ನೀಡಲಾಗಿದೆ. ಮಾಹಿತಿ ಬಂದ ಕೂಡಲೇ ಹೆಬ್ಬಾಳ ಠಾಣೆಗೆ ಸಂಗತಿ ರವಾನೆ ಮಾಡಲಾಗಿದೆ. ಹೆಬ್ಬಾಳ ಪೊಲೀಸರಿಂದ ಸಿಕ್ಕ ಅಷ್ಟು ಮಿಲಿಯನ್ ಡಾಲರ್ಸ್​​ನ್ನು ವಶಕ್ಕೆ ಪಡೆಯಲಾಗಿದೆ.

ಮೇಲ್ನೋಟಕ್ಕೆ ನಕಲಿ ಡಾಲರ್ಸ್ ಶಂಕೆ

ಹೀಗೆ ವಶಕ್ಕೆ ಪಡೆದ ಡಾಲರ್ಸ್​​ಗಳ ಜೊತೆ ವಿಶ್ವ ಸಂಸ್ಥೆಯ ಲೆಟರ್​ ಹೆಡ್​ನಲ್ಲಿರು ಪತ್ರ ಕೂಡ ಪತ್ತೆ ಆಗಿದೆ. ಯುಎನ್​ನಿಂದ ಅಭಿವೃದ್ಧಿಗಾಗಿ ಹಣ ಕಳುಹಿಸಲಾಗಿದೆ. ಈ ಮಿಲಿಯನ್ಸ್ ಆಫ್ ಡಾಲರ್ಸ್ ಬಗ್ಗೆ ಗೌಪ್ಯತೆ ಕಾಪಾಡಿ ಎಂದು ಲೆಟರ್​ನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಡಾಲರ್ಸ್​ಗಳ ನೋಟಿನ ಸಿರಿಯಲ್​ಗಳನ್ನು ಸಹ ಉಲ್ಲೇಖ ಮಾಡಿದ್ದು, ಮೇಲ್ನೋಟಕ್ಕೆ ನಕಲಿ ಡಾಲರ್ಸ್ ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಬಾಕ್ಸ್​ನ ಅಸಲಿ ಸತ್ಯ ಬಯಲು, ಆರೋಪಿಗಳ ಖತರ್ನಾಕ್ ಪ್ಲ್ಯಾನ್ ಹೇಗಿದೆ ನೋಡಿ

ಮತ್ತೊಂದೆಡೆ ಈ ಯುಎಸ್ ಕರೆನ್ಸಿ ಅಸಲಿಯತ್ತು ಎಂದು ಆರ್​ಬಿಐ ಧೃಡಿಕರಿಸಿಲ್ಲ. ದೆಹಲಿಯ ಕಚೇರಿಯೊಂದರ ಬಗ್ಗೆ ಮಾಹಿತಿ ನೀಡಿದ್ದು, ಹಾಗಾಗಿ ಸದ್ಯ ಹೆಬ್ಬಾಳ ಪೊಲೀಸರಿಗೆ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ದೆಹಲಿಗೆ ತೆರಳಿದ್ದಾರೆ.

ಪತ್ರದಲ್ಲಿ ಏನಿದೆ?

‘ಆರ್ಥಿಕ ಮತ್ತು ಹಣಕಾಸು ಸಮಿತಿಯು ದಕ್ಷಿಣ ಸುಡಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಿಗೆ ಸಹಾಯ ಮಾಡಲು ಭದ್ರತಾ ಮಂಡಳಿಯ ಸದಸ್ಯರು ಮತ ಚಲಾಯಿಸಿದ ವಿಶೇಷ ನಿಧಿಯನ್ನು ಇರಿಸುತ್ತದೆ. ಈ ಪ್ರದೇಶಗಳಲ್ಲಿನ ಭಯೋತ್ಪಾದಕರು ಮತ್ತು ಸರ್ವಾಧಿಕಾರಿಗಳಂತಹ ಅನಧಿಕೃತ ವ್ಯಕ್ತಿಗಳು ಬ್ಯಾಂಕಿಂಗ್ ಕಾರ್ಯಾಚರಣೆಗಳು ಮತ್ತು ಅಂತಹ ಕರೆನ್ಸಿಯನ್ನು ಹೈಜಾಕ್ ಮಾಡುವುದರಿಂದ, ವಿಶ್ವಸಂಸ್ಥೆಯು ನೋಟುಗಳನ್ನು ಸುರಕ್ಷಿತವಾಗಿರಿಸಲು, ಸುರಕ್ಷಿತವಾಗಿ ಗಮ್ಯಸ್ಥಾನವನ್ನು ತಲುಪಲು ನೋಟುಗಳ ಮೇಲೆ ಲೇಸರ್ ಸ್ಟ್ಯಾಂಪ್ ಲಗತ್ತಿಸಲು ಹಣಕಾಸು ಸಮಿತಿಗೆ ಅಧಿಕಾರ ನೀಡಿತು’ ಎಂದು ಕರೆನ್ಸಿಯೊಂದಿಗೆ ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾದ ವಿಶ್ವಸಂಸ್ಥೆ ಮುದ್ರೆಯನ್ನು ಹೊಂದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ’.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.