ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಬಾಕ್ಸ್​ನ ಅಸಲಿ ಸತ್ಯ ಬಯಲು, ಆರೋಪಿಗಳ ಖತರ್ನಾಕ್ ಪ್ಲ್ಯಾನ್ ಹೇಗಿದೆ ನೋಡಿ

ಪೊಲೀಸರ ವಿಚಾರಣೆಯಲ್ಲಿ ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾದ ಬಾಕ್ಸ್ ಹಿಂದಿನ ಅಕ್ರಮದ ಬಗ್ಗೆ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಬಾಕ್ಸ್​ನಲ್ಲಿ ಕಂತೆ, ಕಂತೆ ಹಣ ಇದೆ. ಆ ಬಾಕ್ಸ್ ನಿಮ್ಮದಾಗಲು 5 ಲಕ್ಷ ಕೊಡಿ ಬಳಿಕ ಬಾಕ್ಸ್ ತೆಗೆದುಕೊಂಡು ಹೋಗಿ ಎಂದು ಉದ್ಯಮಿಯೊಬ್ಬರಿಗೆ ಈ ಖದೀಮರು ಟೋಪಿ ಹಾಕಿದ್ದ ಬಗ್ಗೆ ತನಿಖೆಯಲ್ಲಿ ಬಯಲಾಗಿದೆ.

ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಬಾಕ್ಸ್​ನ ಅಸಲಿ ಸತ್ಯ ಬಯಲು, ಆರೋಪಿಗಳ ಖತರ್ನಾಕ್ ಪ್ಲ್ಯಾನ್ ಹೇಗಿದೆ ನೋಡಿ
ಅನಾಮಧೇಯ ಬಾಕ್ಸ್ ಪತ್ತೆ
Follow us
Basavaraj Yaraganavi
| Updated By: ಆಯೇಷಾ ಬಾನು

Updated on: Nov 07, 2023 | 1:59 PM

ಶಿವಮೊಗ್ಗ, ನ.07: ಶಿವಮೊಗ್ಗದ ರೈಲ್ವೆ ನಿಲ್ದಾಣದ (Shivamogga Railway Station) ಬಳಿ‌ ಪತ್ತೆಯಾದ ಎರಡು ಅನುಮಾನಾಸ್ಪದ ಬಾಕ್ಸ್ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಬೃಹತ್ ಬಾಕ್ಸ್​ಗಳು ಪತ್ತೆಯಾಗುತ್ತಿದ್ದಂತೆ ತನಿಖೆಗೆ ಇಳಿದ ಪೊಲೀಸರು ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ಭದ್ರಾವತಿ ಮೂಲದ ನಸ್ರುಲ್ಲಾ ಹಾಗೂ ತಿಪಟೂರಿನ ಜಬೀವುಲ್ಲಾ ಎಂಬ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಸದ್ಯ ಪೊಲೀಸರ ವಿಚಾರಣೆಯಲ್ಲಿ ಬಾಕ್ಸ್ ಹಿಂದಿನ ಅಕ್ರಮದ ಬಗ್ಗೆ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಬಾಕ್ಸ್​ನಲ್ಲಿ ಕಂತೆ, ಕಂತೆ ಹಣ ಇದೆ. ಆ ಬಾಕ್ಸ್ ನಿಮ್ಮದಾಗಲು 5 ಲಕ್ಷ ಕೊಡಿ ಬಳಿಕ ಬಾಕ್ಸ್ ತೆಗೆದುಕೊಂಡು ಹೋಗಿ ಎಂದು ಉದ್ಯಮಿಯೊಬ್ಬರಿಗೆ ಈ ಖದೀಮರು ಟೋಪಿ ಹಾಕಿದ್ದ ಬಗ್ಗೆ ತನಿಖೆಯಲ್ಲಿ ಬಯಲಾಗಿದೆ.

ಆರೋಪಿ ನಸ್ರುಲ್ಲಾ ಮತ್ತು ಜಬೀವುಲ್ಲಾ ಎಂಬ ಇಬ್ಬರು ಬೇಗ ಹಣ ಮಾಡಬೇಕು ಎಂಬ ದುರುದ್ದೇಶದಿಂದ ತಿಪಟೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಎಂಬುವವರನ್ನು ಸಂಪರ್ಕಿಸಿ, ನಮಗೆ ಹಣ ತುಂಬಿದ ಬಾಕ್ಸ್​ಗಳು ಸಿಕ್ಕಿವೆ. ಹಣ ಬೇಕಾ ಎಂದು ಹಣದ ಆಸೆ ತೋರಿಸಿದ್ದರು. ಬಳಿಕ ಹಣ ಬೇಕಾದರೆ ಮೊದಲು ಎರಡೂವರೆ ಲಕ್ಷ ಹಣವನ್ನು ನಮ್ಮ ಖಾತೆಗೆ ಹಾಕು ಎಂದು ಹೇಳಿದ್ದಾರೆ. ಇದನ್ನು ನಂಬಿದ ರಮೇಶ್ ಹಣ ಕಳಿಸಿದ್ದಾರೆ. ನಂತರ ಹಣ ಪಡೆದು ಒಂದು ವಾರ ಕಳೆದರೂ ಹಣದ ಬಾಕ್ಸ್​ಗಳನ್ನು ತೋರಿಸದ ಕಾರಣ ರಮೇಶ್​, ಆರೋಪಿಗಳಿಗೆ ಕರೆ ಮಾಡಿ ತಾನು ಕೊಟ್ಟ ಹಣವನ್ನು ವಾಪಾಸ್ ಕೊಡುವಂತೆ ಮನವಿ ಮಾಡಿದ್ದಾರೆ. ಆಗ ಆರೋಪಿಗಳು ಹಣ ಬೇಕಾದರೆ ಮತ್ತೆ ಎರಡೂವರೆ ಲಕ್ಷ ಹಣ ಹಾಕುವಂತೆ ತಿಳಿಸಿದ್ದಾರೆ. ಹೀಗೆ ಒಟ್ಟು ಐದು ಲಕ್ಷ ಹಣ ಪಡೆದಿದ್ದಾರೆ. ಬಳಿಕ ಹಣ ಬೇಕಾದರೆ ಶಿವಮೊಗ್ಗಕ್ಕೆ ಬಾ ಎಂದು ಕರೆಸಿಕೊಂಡು ರೈಲ್ವೆ ನಿಲ್ದಾಣದ ಬಳಿ ಹಣದ ಪೆಟ್ಟಿಗೆ ಇದೆ ಎಂದು ಬಾಕ್ಸ್ ತೋರಿಸಿದ್ದಾರೆ. ಬಾಕ್ಸ್ ನೋಡುತ್ತಿದ್ದಂತೆ ಅನುಮಾನಗೊಂಡ ರಮೇಶ್ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಆರೋಪಿಗಳು ಬಾಕ್ಸ್​ನಲ್ಲಿ ಉಪ್ಪಿನ ಚೀಲ ತುಂಬಿ ಪ್ಯಾಕ್ ಮಾಡಿಟ್ಟಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಇದನ್ನೂ ಓದಿ: ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಅನಾಮಧೇಯ ಬಾಕ್ಸ್​ ಪತ್ತೆ; ಇಬ್ಬರು ಶಂಕಿತರ ವಿಚಾರಣೆ

ನವೆಂಬರ್ 05ರಂದು ಶಿವಮೊಗ್ಗದ ರೈಲು ನಿಲ್ದಾಣದ ಪಾರ್ಕಿಂಗ್ ಲಾಟ್​​ನಲ್ಲಿ 2 ಅನಾಮಧೇಯ ಬಾಕ್ಸ್ ಪತ್ತೆ  ಆಗಿತ್ತು. ಜೊತೆಗೆ ಬಾಕ್ಸ್ ಮೇಲೆ ಮೇಡ್ ಇನ್ ಬಾಂಗ್ಲಾದೇಶ ಮತ್ತು ಫುಡ್​ ಗ್ರೈನ್ಸ್ ಆ್ಯಂಡ​​ ಶುಗರ್ಸ್ ಎಂದು ಬರೆಯಲಾಗಿತ್ತು. ಬಾಕ್ಸ್​ಗಳ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕೂಡಲೇ ಬಾಂಬ್​ ಸ್ಕ್ವಾಡ್, ಶ್ವಾನದಳ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಬಾಕ್ಸ್​​ ಬಳಿ ಯಾರೂ ತೆರಳದಂತೆ ಬ್ಯಾರಿಕೇಡ್​​ ಹಾಕಲಾಗಿತ್ತು. ಬಳಿಕ ತುಮಕೂರಿನಲ್ಲಿ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು ಹಣ ಗಳಿಕೆಗಾಗಿ ಬಾಕ್ಸ್​ಗಳಲ್ಲಿ ಉಪ್ಪು ತುಂಬಿ ಹಣ ಇದೆ ಎಂದು ನಂಬಿಸಿ ವಂಚನೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ