AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಅನಾಮಧೇಯ ಬಾಕ್ಸ್​ ಪತ್ತೆ; ಇಬ್ಬರು ಶಂಕಿತರ ವಿಚಾರಣೆ

ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಅನಾಮಧೇಯ ಬಾಕ್ಸ್​ ಪತ್ತೆ(Boxes Found) ಪ್ರಕರಣಕ್ಕೆ ಸಂಬಂಧಪಟ್ಟಂತೆ 4 ರಿಂದ 5 ಕೋಟಿರೂಪಾಯಿ ವ್ಯವಹಾರ ಇದೆ ಎಂದು ನಿನ್ನೆ(ನ.05) ಶಂಕಿತ ನಸ್ರುಲ್ಲಾನ ಕಾರಿನಲ್ಲೇ ಇಬ್ಬರು ಆರೋಪಿಗಳು ತೆರಳಿದ್ದರಂತೆ. ಸದ್ಯ ತಿಪಟೂರಿನ ನಿಗೂಢ ಸ್ಥಳದಲ್ಲಿ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಬಿಳಿ ಬಣ್ಣದ ಪುಡಿಯಾಕಾರದ ವಸ್ತು ಇದ್ದು, ಸಲ್ಫರ್ ಎಂದು ಅನುಮಾನಿಸಲಾಗುತ್ತಿದೆ.

ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಅನಾಮಧೇಯ ಬಾಕ್ಸ್​ ಪತ್ತೆ; ಇಬ್ಬರು ಶಂಕಿತರ ವಿಚಾರಣೆ
ಪ್ರಾತಿನಿಧಿಕ ಚಿತ್ರ
ಮಹೇಶ್ ಇ, ಭೂಮನಹಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Nov 05, 2023 | 10:36 PM

Share

ತುಮಕೂರು, ನ.05: ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಅನಾಮಧೇಯ ಬಾಕ್ಸ್​ ಪತ್ತೆ(Boxes Found) ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ಇಬ್ಬರು ಶಂಕಿತರ ವಿಚಾರಣೆ ನಡೆಸಲಾಗುತ್ತಿದೆ. ಹೌದು, ಭದ್ರಾವತಿ ಮೂಲದ ನಸ್ರುಲ್ಲಾ ಹಾಗೂ ತಿಪಟೂರಿನ ಜಬ್ಬಿ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹಲವು ದಿನಗಳ ಹಿಂದೆ ತಿಪಟೂರು ಪಟ್ಟಣಕ್ಕೆ ಬಂದಿದ್ದ ಶಂಕಿತ ನಸ್ರುಲ್ಲಾ, ನವೆಂಬರ್​ 3 ರಂದು ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ತೆರಳಿದ್ದ. ಬಳಿಕ ನಸ್ರುಲ್ಲಾ ಹಾಗೂ ಜಬ್ಬಿ ಇಬ್ಬರೂ ಸೇರಿಕೊಂಡು ಬಿಳಿ ಬಣ್ಣದ ವಸ್ತುವನ್ನು ಖರೀದಿಸಿದ್ದರು.

ತಿಪಟೂರಿನ ನಿಗೂಢ ಸ್ಥಳದಲ್ಲಿ ವಿಚಾರ

ಹೌದು,  4 ರಿಂದ 5 ಕೋಟಿರೂಪಾಯಿ ವ್ಯವಹಾರ ಇದೆ ಎಂದು ನಿನ್ನೆ(ನ.05) ನಸ್ರುಲ್ಲಾನ ಕಾರಿನಲ್ಲೇ ಇಬ್ಬರು ತೆರಳಿದ್ದರಂತೆ. ಸದ್ಯ ತಿಪಟೂರಿನ ನಿಗೂಢ ಸ್ಥಳದಲ್ಲಿ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಬಿಳಿ ಬಣ್ಣದ ಪುಡಿಯಾಕಾರದ ವಸ್ತು ಇದ್ದು, ಸಲ್ಫರ್ ಎಂದು ಅನುಮಾನಿಸಲಾಗುತ್ತಿದೆ. ಸಲ್ಫರ್​ನ್ನು ಕ್ರಿಮಿನಾಶಕ, ಕಳೆನಾಶಕ  ಅಥವಾ ಬಾಂಬ್ ತಯಾರಿಕೆಗೆ ಬಳಸಲಾಗುತ್ತದೆ.

ಇದನ್ನೂ ಓದಿ:ಶಿವಮೊಗ್ಗ ರೈಲು ನಿಲ್ದಾಣದಲ್ಲಿ 2 ಅನಾಮಧೇಯ ಬಾಕ್ಸ್ ಪತ್ತೆ: ಮೇಡ್ ಇನ್ ಬಾಂಗ್ಲಾದೇಶ ಎಂಬ ಬಹರ

ಘಟನೆ ವಿವರ

ಇಂದು ಶಿವಮೊಗ್ಗದ ರೈಲು ನಿಲ್ದಾಣದ ಪಾರ್ಕಿಂಗ್ ಲಾಟ್​​ನಲ್ಲಿ 2 ಅನಾಮಧೇಯ ಬಾಕ್ಸ್ ಪತ್ತೆ  ಆಗಿತ್ತು. ಜೊತೆಗೆ ಬಾಕ್ಸ್ ಮೇಲೆ ಮೇಡ್ ಇನ್ ಬಾಂಗ್ಲಾದೇಶ ಮತ್ತು ಫುಡ್​ ಗ್ರೈನ್ಸ್ ಆ್ಯಂಡ​​ ಶುಗರ್ಸ್ ಎಂದು ಬರೆಯಲಾಗಿತ್ತು. ನಿನ್ನೆಯಿಂದಲೂ ಪಾರ್ಕಿಂಗ್ ಲಾಟ್​​ನಲ್ಲೇ ಈ ಬಾಕ್ಸ್​ಗಳಿದ್ದು, ಕೂಡಲೇ ಬಾಂಬ್​ ಸ್ಕ್ವಾಡ್, ಶ್ವಾನದಳ ಸಿಬ್ಬಂದಿಯಿಂದ ಪರಿಶೀಲನೆ ಮಾಡಲಾಗುತ್ತಿದೆ. ಬಾಕ್ಸ್​​ ಬಳಿ ಯಾರೂ ತೆರಳದಂತೆ ಪೊಲೀಸರು ಬ್ಯಾರಿಕೇಡ್​​ ಹಾಕಿದ್ದರು. ಈ ಬಾಕ್ಸ್ ಯಾರದ್ದು? ಯಾಕೆ ಇಲ್ಲಿದೆ ಎಂಬುದು ಇನ್ನು ತಿಳಿದು ಬಂದಿರಲಿಲ್ಲ. ಇದೀಗ ಇಬ್ಬರು ಶಂಕಿತರು ಸಿಕ್ಕಿಬಿದ್ದಿದ್ದು, ವಿಚಾರಣೆ ಬಳಿಕವೇ ಸತ್ಯಾಸತ್ಯತೆ ತಿಳಿಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ
ವ್ಯಾಪಾರ ಅಧಿಕವಾಗಲು ಏನು ಮಾಡಬೇಕು? ವಿಡಿಯೋ ನೋಡಿ
ವ್ಯಾಪಾರ ಅಧಿಕವಾಗಲು ಏನು ಮಾಡಬೇಕು? ವಿಡಿಯೋ ನೋಡಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಾಗಳ ಬಗ್ಗೆ ತಿಳಿಯಿರಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಾಗಳ ಬಗ್ಗೆ ತಿಳಿಯಿರಿ