ಶಿವಮೊಗ್ಗ ರೈಲು ನಿಲ್ದಾಣದಲ್ಲಿ 2 ಅನಾಮಧೇಯ ಬಾಕ್ಸ್ ಪತ್ತೆ: ಮೇಡ್ ಇನ್ ಬಾಂಗ್ಲಾದೇಶ ಎಂಬ ಬಹರ

ಶಿವಮೊಗ್ಗ ರೈಲು ನಿಲ್ದಾಣದ ಪಾರ್ಕಿಂಗ್ ಲಾಟ್​​ನಲ್ಲಿ 2 ಅನಾಮಧೇಯ ಬಾಕ್ಸ್ ಪತ್ತೆ ಆಗಿದೆ. ಬಾಂಬ್​ ಸ್ಕ್ವಾಡ್, ಶ್ವಾನದಳ ಸಿಬ್ಬಂದಿಯಿಂದ ಪರಿಶೀಲನೆ ಮಾಡಲಾಗಿದ್ದು, ಬಾಕ್ಸ್ ಮೇಲೆ ಮೇಡ್ ಇನ್ ಬಾಂಗ್ಲಾದೇಶ ಮತ್ತು ಫುಡ್​ ಗ್ರೈನ್ಸ್ ಆ್ಯಂಡ​​ ಶುಗರ್ಸ್ ಎಂದು ಬರೆಯಲಾಗಿದೆ. ಸದ್ಯ ಅನಾಮಧೇಯ ಬಾಕ್ಸ್​ಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. 

ಶಿವಮೊಗ್ಗ ರೈಲು ನಿಲ್ದಾಣದಲ್ಲಿ 2 ಅನಾಮಧೇಯ ಬಾಕ್ಸ್ ಪತ್ತೆ: ಮೇಡ್ ಇನ್ ಬಾಂಗ್ಲಾದೇಶ ಎಂಬ ಬಹರ
ಅನಾಮಧೇಯ ಬಾಕ್ಸ್ ಪತ್ತೆ
Follow us
Basavaraj Yaraganavi
| Updated By: ಗಂಗಾಧರ​ ಬ. ಸಾಬೋಜಿ

Updated on:Nov 05, 2023 | 2:55 PM

ಶಿವಮೊಗ್ಗ, ನವೆಂಬರ್​ 05: ಶಿವಮೊಗ್ಗ ರೈಲು ನಿಲ್ದಾಣದ ಪಾರ್ಕಿಂಗ್ ಲಾಟ್​​ನಲ್ಲಿ 2 ಅನಾಮಧೇಯ ಬಾಕ್ಸ್ ಪತ್ತೆ (boxes found) ಆಗಿದೆ. ಬಾಂಬ್​ ಸ್ಕ್ವಾಡ್, ಶ್ವಾನದಳ ಸಿಬ್ಬಂದಿಯಿಂದ ಪರಿಶೀಲನೆ ಮಾಡಲಾಗಿದ್ದು, ಬಾಕ್ಸ್ ಮೇಲೆ ಮೇಡ್ ಇನ್ ಬಾಂಗ್ಲಾದೇಶ ಮತ್ತು ಫುಡ್​ ಗ್ರೈನ್ಸ್ ಆ್ಯಂಡ​​ ಶುಗರ್ಸ್ ಎಂದು ಬರೆಯಲಾಗಿದೆ. ನಿನ್ನೆಯಿಂದಲೂ ಪಾರ್ಕಿಂಗ್ ಲಾಟ್​​ನಲ್ಲೇ ಬಾಕ್ಸ್​ಗಳಿದ್ದು, ಬಾಕ್ಸ್​​ ಬಳಿ ಯಾರೂ ತೆರಳದಂತೆ ಪೊಲೀಸರು ಬ್ಯಾರಿಕೇಡ್​​ ಹಾಕಿದ್ದಾರೆ. ಸದ್ಯ ಅನಾಮಧೇಯ ಬಾಕ್ಸ್​ಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಈ ಬಾಕ್ಸ್ ಯಾರದ್ದು, ಯಾಕೆ ಇಲ್ಲಿದೆ ಎಂಬುದು ಇನ್ನು ತಿಳಿದು ಬಂದಿಲ್ಲ. ಕಳೆದ ನಾಲ್ಕೈದು ದಿನಗಳಿಂದ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಪ್ರಯಾಣಿಕರನ್ನು ಚೆಕ್ ಮಾಡಿ ಒಳಗೆ ಬಿಡುತ್ತಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಇಬ್ಬರು ಕಾಂಗ್ರೆಸ್ ಮುಖಂಡರ ಹತ್ಯೆ: ಎರಡು ಠಾಣೆಯ ಒಟ್ಟು 6 ಪೊಲೀಸ್ ಸಿಬ್ಬಂದಿ ಸಸ್ಪೆಂಡ್

ಬಾಕ್ಸ್‌ಗಳ ಸುತ್ತ 2 ಲೋಡ್‌ ಮರಳಿನ ಚೀಲಗಳನ್ನು ಪೊಲೀಸರು ಜೋಡಿಸಿದ್ದಾರೆ. ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ತಂಡ ಹೊರಟಿದ್ದು, ಸಂಜೆ ವೇಳೆಗೆ ಶಿವಮೊಗ್ಗಕ್ಕೆ ಆಗಮಿಸುವ ನಿರೀಕ್ಷೆ ಇದೆ. ಬಾಂಬ್ ನಿಷ್ಕ್ರಿಯ ತಂಡ ಆಗಮಿಸಿದ ನಂತರ ಬಾಕ್ಸ್​ಗಳನ್ನು ಪೊಲೀಸರು ಓಪನ್ ಮಾಡಲಿದ್ದಾರೆ.

ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಕಾಲೇಜಿನ ಗೋಡೆಗಳ ಮೇಲೆ ಅಶ್ಲೀಲ ಬರಹ

ಕೊಪ್ಪಳ: ಜಿಲ್ಲೆಯ ಕನಕಗಿರಿ ಪಟ್ಟಣದ ‘ಪದವಿ ಪೂರ್ವ ಸರ್ಕಾರಿ ಕಾಲೇಜಿನಲ್ಲಿ ಕಿಡಿಗೇಡಿಗಳ ಕಾಟ ಮತ್ತೆ ಆರಂಭವಾಗಿತ್ತು. ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಕಾಲೇಜಿನ ಗೋಡೆಗಳ ಮೇಲೆ ಅಶ್ಲೀಲವಾಗಿ ಬರೆದಿರುವಂತಹ ಘಟನೆ ಇತ್ತೀಚೆಗೆ ನಡೆದಿತ್ತು. ಈ ಬರಹಗಳನ್ನು ಕಂಡು ವಿದ್ಯಾರ್ಥಿನಿಯರು ಕಣ್ಣೀರು ಹಾಕುತ್ತಿದ್ದರು. ಈ ವಿಕೃತ ಘಟನೆಯಿಂದ ವಿದ್ಯಾರ್ಥಿನಿಯರು ಮಾನಸಿಕ ಖಿನ್ನತೆ ಒಳಗಾಗುವ ಆತಂಕ ಎದುರಾಗಿತ್ತು.

ಇದನ್ನೂ ಓದಿ: ನಿಮ್ಮ ಬಳಿ ಸೈಟ್ ಇದೆಯಾ? ಅದನ್ನು ಸರಿಯಾಗಿ ನಿರ್ವಹಣೆ ಮಾಡ್ತಿಲ್ವಾ, ಹಾಗಾದ್ರೆ ಬಿಬಿಎಂಪಿಯಿಂದ ದಂಡ ಫಿಕ್ಸ್

ಇದರಿಂದ ಕೆಲ ಪಾಲಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಮನೆಯಲ್ಲಿ ಕೂರಿಸಿದ್ದರು. ಈ ಪ್ರಕರಣ ಪೋಷಕರನ್ನು ದಿನೇ ದಿನೇ ಆತಂಕಕ್ಕೆ ದೂಡಿದೆ. ಈ ಘಟನೆ ಇಡೀ ಕನಕಗಿರಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಸಾರ್ವಜನಿಕರಲ್ಲಿ ಬೇಸರ ಮೂಡಿಸಿತ್ತು. ಆದರೆ, ಇದರ ಹಿಂದಿನ ಮುಖ ಪತ್ತೆ ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿತ್ತು.

ಕಳೆದ ಒಂದು ವರ್ಷದಿಂದ ಈ ರೀತಿ ಅಶ್ಲೀಲ‌ ಬರಹದ ಘಟನೆಗಳು ನಡೆಯುತ್ತಲೇ ಇದ್ದವು. ಜುಲೈ 10 ರಂದು ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೋಲೀಸರು ತನಿಖೆ ಆರಂಭಿಸಿದ್ದರು. ಈ ನಡುವೆ ಮತ್ತೆ ಕಿರಾತಕರು ಶನಿವಾರ ಕನಕಗಿರಿ ಜೂನಿಯರ್ ಕಾಲೇಜು ಗೋಡೆ ಮೇಲೆ ಅಶ್ಲೀಲ ಬರಹದ ಮೂಲಕ ವಿಕೃತಿ ಹೊರ ಹಾಕಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:42 pm, Sun, 5 November 23