ಕೋಲಾರದಲ್ಲಿ ಇಬ್ಬರು ಕಾಂಗ್ರೆಸ್ ಮುಖಂಡರ ಹತ್ಯೆ: ಎರಡು ಠಾಣೆಯ ಒಟ್ಟು 6 ಪೊಲೀಸ್ ಸಿಬ್ಬಂದಿ ಸಸ್ಪೆಂಡ್
ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕೊಲೆ ಕೇಸ್ನಲ್ಲಿ ಕರ್ತವ್ಯ ಲೋಪ ಹಾಗೂ ಕೋಲಾರದಲ್ಲಿ ಸರಣಿ ಕೊಲೆ ಪ್ರಕರಣಗಳ ಸಂಬಂಧ ಮಾಲೂರು ಮತ್ತು ಶ್ರೀನಿವಾಸಪುರ ಠಾಣೆಯ ಪೊಲೀಸರನ್ನು ಅಮಾನತು ಮಾಡಿಲಾಗಿದೆ. ಒಟ್ಟು ಆರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಕೋಲಾರ ಎಸ್ಪಿ ಎಂ.ನಾರಾಯಣ್ ಆದೇಶ ಹೊರಡಿಸಿದ್ದಾರೆ.
ಕೋಲಾರ, (ನವೆಂಬರ್ 05): ಕೋಲಾರದ(Kolar) ಮಾಲೂರು ಗ್ರಾಮ ಪಂಚಾಯಿತಿ ಸದಸ್ಯ ಅನಿಲ್ ಕುಮಾರ್ ಹಾಗೂ ಮತ್ತೋರ್ವ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಒಟ್ಟು 6 ಪೊಲೀಸ್ ಸಿಬ್ಬಂದಿಯನ್ನು ಅಮಾನತ್ತು ಮಾಡಲಾಗಿದೆ. ಅ.21ರಂದು ಅನಿಲ್ ಕುಮಾರ್ ಹತ್ಯೆಯಾಗಿದ್ದರೆ ಅಕ್ಟೋಬರ್ 23 ರಂದು ಶ್ರೀನಿವಾಸ್ ಅವರ ಕೊಲೆಯಾಗಿತ್ತು. ಇದೀ ಈ ಕೇಸ್ಗಳಲ್ಲಿ ಕರ್ತವ್ಯ ಲೋಪ ಆರೋಪ ಮೇಲೆ 6 ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಕೋಲಾರ ಎಸ್ಪಿ ಎಂ.ನಾರಾಯಣ್ ಆದೇಶ ಹೊರಡಿಸಿದ್ದಾರೆ. ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕೊಲೆ ಕೇಸ್ನಲ್ಲಿ ಕರ್ತವ್ಯ ಲೋಪ ಹಾಗೂ ಕೋಲಾರದಲ್ಲಿ ಸರಣಿ ಕೊಲೆ ಪ್ರಕರಣಗಳ ಸಂಬಂಧ ಮಾಲೂರು ಮತ್ತು ಶ್ರೀನಿವಾಸಪುರ ಠಾಣೆಯ ಪೊಲೀಸರನ್ನು ಅಮಾನತು ಮಾಡಿಲಾಗಿದೆ.
ಮಾಲೂರು ಠಾಣೆಯ ASI ಪ್ರಕಾಶ್, ಬೀಟ್ ಕಾನ್ಸ್ಟೇಬಲ್ ಗಳಾದ ರಾಮಪ್ಪ, ಅನಂಥಮೂರ್ತಿ, DAR ಪೇದೆ ಅನಿಲ್ ಕುಮಾರ್ ಎನ್ನುವರನ್ನು ಸಸ್ಪೆಂಡ್ ಮಾಡಲಾಗಿದೆ. ಇನ್ನು ಶ್ರೀನಿವಾಸಪುರ ಠಾಣೆಯ ಸಬ್ ಇನ್ಸ್ಪೆಕ್ಟರ್ ಈಶ್ವರಪ್ಪ, ಮುಖ್ಯ ಪೇದೆ ದೇವರಾಜ್ ರೆಡ್ಡಿ, ಮಂಜುನಾಥ್ ಅವರನ್ನೂ ಸಹ ಅಮಾನತು ಮಾಡಲಾಗಿದೆ.
ಆಯುಧ ಪೂಜೆ ದಿನವೇ ಬರ್ಬರ ಹತ್ಯ
ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಆಪ್ತ ಎಂ ಶ್ರೀನಿವಾಸ್ (M Srinivas) ಎಂಬವರನ್ನು ಅಕ್ಟೋಬರ್ 23ರಂದು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಎಂ ಶ್ರೀನಿವಾಸ್ ಅವರು ಕೋಲಾರ (Kolar) ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಕಾಂಗ್ರೆಸ್ ಮುಖಂಡರಾಗಿದ್ದು, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರೂ ಆಗಿದ್ದರು. ಕೋಲಾರ ಜಿಲ್ಲೆ ಶ್ರೀನಿವಾಸಪುರ ಹೊರವಲಯದ ಹೊಗಳಗೆರೆ ರಸ್ತೆಯಲ್ಲಿ ಶ್ರೀನಿವಾಸ್ ಮೇಲೆ ಹಲ್ಲೆ ನಡೆದಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದರು.
ಕೊಲೆಯಾದ ಬಳಿಕ ವಿಡಿಯೋ ವೈರಲ್
ಕೊಲೆಯಾದ ಶ್ರೀನಿವಾಸ ಮತ್ತು ಆರೋಪಿ ವೇಣುಗೋಪಾಲ್ ನಡುವಣ ಈ ಹಿಂದಿನ ವಿಡಿಯೋ ವೈರಲ್ ಆಗಿತ್ತು. (Viral video). 2018ರಲ್ಲಿ ನಡೆದಿದೆ ಎನ್ನಲಾದ ರಾಜಿ ಪಂಚಾಯ್ತಿಯ ವಿಡಿಯೋ ಅದಾಗಿದೆ. 2018ರಲ್ಲಿ ಕೌನ್ಸಿಲರ್ ಶ್ರೀನಿವಾಸ ಮತ್ತು ವೇಣುಗೋಪಾಲ ಮಧ್ಯೆ ಗಲಾಟೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಶ್ರೀನಿವಾಸಪುರದ ಕಾಂಗ್ರೆಸ್ ಮುಖಂಡ ಕೆ.ಕೆ. ಮಂಜು ಮನೆಯಲ್ಲಿ ರಾಜಿ ಸಂಧಾನ (Mediation) ಏರ್ಪಡಿಸಲಾಗಿತ್ತು. 2018ರಲ್ಲೇ ಶ್ರೀನಿವಾಸನನ್ನು ಕೊಲೆ ಮಾಡಲು ಯತ್ನಿಸಿದ್ದ ವೇಣುಗೋಪಾಲ್. ಆ ವೇಳೆ ತಾನೇ ವಿಡಿಯೋ ರೆಕಾರ್ಡ್ ಮಾಡಿದ್ದಾಗಿ ವೇಣುಗೋಪಾಲ್ ಒಪ್ಪಿಕೊಂಡಿದ್ದ. ನಾನು ನಿನಗೆ ಹೊಡೆಯಬೇಕಿತ್ತು, ಆದರೆ ಆ ಏಟು ಬೇರೆಯವರಿಗೆ ಬಿತ್ತು. ಪರಸ್ಪರ ಚರ್ಚೆ ವೇಳೆ ಶ್ರೀನಿವಾಸ್ಗೆ ನೇರವಾಗಿ ಹೇಳಿದ್ದ ವೇಣುಗೋಪಾಲ್. ಕೊಲೆಯಾದ ಶ್ರೀನಿವಾಸ, ಆರೋಪಿ ವೇಣುಗೋಪಾಲ್ ನಡುವಣ ಆ ವಿಡಿಯೋ ವೈರಲ್ ಆಗಿತ್ತು.