ನಿಮ್ಮ ಬಳಿ ಸೈಟ್ ಇದೆಯಾ? ಅದನ್ನು ಸರಿಯಾಗಿ ನಿರ್ವಹಣೆ ಮಾಡ್ತಿಲ್ವಾ, ಹಾಗಾದ್ರೆ ಬಿಬಿಎಂಪಿಯಿಂದ ದಂಡ ಫಿಕ್ಸ್
ಕಳೆದ ವಾರ ಬೆಂಗಳೂರಿನಲ್ಲಿ ಚಿರತೆ ಪತ್ತೆಯಾಗಿದ್ದ ಹಿನ್ನೆಲೆ ಬಿಬಿಎಂಪಿ ಫುಲ್ ಅಲರ್ಟ್ ಆಗಿದ್ದು, ಖಾಲಿ ಸೈಟ್ ದಾರರಿಗೆ ಶಾಕ್ ಕೊಡುವುದಕ್ಕೆ ಮುಂದಾಗಿದೆ. ಯಾವುದೇ ಖಾಲಿ ಸೈಟುಗಳ ನಿರ್ವಹಣೆ ಮಾಡದೇ ಹಾಗೇ ಬಿಟ್ಟರೆ ದಂಡ ಪಾವತಿಸಬೇಕಾಗುತ್ತೆ. ಸೈಟ್ ನಿರ್ವಾಹಣೆ ಮಾಡದೆ ಪೊದೆಗಳ ಬೆಳೆಯಲು ಬಿಟ್ಟರೆ ಎಂತಹ ಸೈಟ್ ಮಾಲೀಕರಿಗೆ ಬಿಬಿಎಂಪಿ ಬಿಸಿ ಮುಟ್ಟಿಸಲಿದೆ.
ಬೆಂಗಳೂರು, ನ.05: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಸೈಟ್ಗಳನ್ನ (Site) ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಸೈಟ್ ಖರೀದಿ ಮಾಡಿ ಅದನ್ನು ಸರಿಯಾಗಿ ನಿರ್ವಹಣೆ ಮಾಡದೇ ಹಾಗೆಯೇ ಬಿಡುತ್ತಿದ್ದಾರೆ. ಹೀಗಾಗಿ ಗಿಡ- ಗಂಟೆಗಳು ಬೆಳೆದುಕೊಂಡು ಕಾಡಿನಂತೆ ಕಾಣುತ್ತಿವೆ. ಹೀಗಾಗಿ ಹಾವುಗಳು ಸೇರಿಕೊಳ್ಳುತ್ತಿವೆ. ಅಲ್ಲದೇ ಅಕ್ಕಪಕ್ಕ ವಾಸಿಸುವ ಜನರಿಗೂ ಸಮಸ್ಯೆಗಳಾಗುತ್ತಿವೆ. ಇದಲ್ಲದೇ ಮೊನ್ನೆ ಹೆಚ್ಎಸ್ಆರ್ ಲೇಔಟ್ ಚಿರತೆ ಬಂದಾಗ ಅದನ್ನ ಹಿಡಿಯೋದಕ್ಕೆ ಅರಣ್ಯ ಅಧಿಕಾರಿಗಳು ರೋಸಿ ಹೋಗಿದ್ರು. ಮತ್ತೆ ಅಂತಹ ಘಟನೆಗಳು ನಡೆಯಬಾರದು ಎನ್ನುವ ಕಾರಣಕ್ಕೆ ಬಿಬಿಎಂಪಿ (BBMP) ಸೈಟ್ ಗಳ ಮಾಲೀಕರಿಗೆ ಶಾಕ್ ಕೊಡುವುದಕ್ಕೆ ಮುಂದಾಗಿದೆ.
ಹೌದು, ಹೆಚ್ಎಸ್ಆರ್ ಲೇಔಟ್ನ ಖಾಲಿ ಜಾಗದಲ್ಲಿ ಚಿರತೆ ಪತ್ತೆಯಾಗಿತ್ತು. ಆದರೆ ಖಾಲಿ ನಿವೇಷನ ಜಾಗದಲ್ಲಿ ಗಿಡ ಗಂಟಿಗಳು ಬೆಳೆದು ಕೊಂಡಿದ್ದು ಚಿರತೆಯನ್ನ ಹಿಡಿಯುದಕ್ಕೆ ಅರಣ್ಯ ಅಧಿಕಾರಿಗಳು ಹರಸಾಹಸ ಪಡಬೇಕಾಯ್ತು. ಅಲ್ಲದೇ ಇತ್ತೀಚಿಗೆ ಬಫರ್ ವಲಯಗಳಲ್ಲಿನ ಹಲವಾರು ಖಾಲಿ ನಿವೇಶನಗಳಲ್ಲಿ ಅಧಿಕೃತ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಹೀಗಾಗಿ ಇವುಗಳಿಗೆ ಬ್ರೇಕ್ ಹಾಕುವ ಜೊತೆಗೆ ಖಾಲಿ ಜಾಗದಲ್ಲಿ ಪೊದೆ ಬೆಳೆಯಲು ಬಿಟ್ರೆ ಇನ್ಮುಂದೆ ದಂಡ ವಿಧಿಸೋಕೆ ಬಿಬಿಎಂಪಿ ಮುಂದಾಗಿದೆ. ಇನ್ಮುಂದೆ ಯಾವುದೇ ಖಾಲಿ ಸೈಟುಗಳ ನಿರ್ವಹಣೆ ಮಾಡದೇ ಹಾಗೇ ಬಿಟ್ಟರೆ ಬಿಬಿಎಂಪಿ ದಂಡ ವಿಧಿಸಲಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಆತಂಕ; ಮನೆಯ ಬಾಗಿಲು ಬಳಿ ಚಿರತೆ ಕಂಡು ಕಿರುಚಿದ ಬಾಲಕ
ಇನ್ನು, 2019ರಲ್ಲಿ ಖಾಲಿ ಸೈಟ್ ನಿರ್ವಹಣೆ ಮಾಡದೇ ಬಿಡುವ ಮಾಲೀಕರ ಸೈಟ್ ಗಳನ್ನ ಬಿಬಿಎಂಪಿಯೇ ನಿರ್ವಹಣೆ ಮಾಡುತ್ತಿತ್ತು. ಈ ನಿರ್ವಣೆಗೆ ಬಿಬಿಎಂಪಿ ದಂಡವನ್ನ ವಸೂಲಿ ಮಾಡುತ್ತಿತ್ತು. ಆದರೆ ಈ ಕುರಿತಾಗಿ ವಿರೋಧ ವ್ಯಕ್ತವಾಗಿದ್ದು ಇದು ಕೆಎಂಸಿ ಆ್ಯಕ್ಟ್ ನಲ್ಲಿದೇ, ಇಲ್ಲ ಎಂಬ ಬಗ್ಗೆ ಚರ್ಚೆಗಳಾಗುತ್ತಿದ್ದವು. ಇದೀಗಾ ಈ ಆದೇಶವನ್ನ ಮತ್ತೆ ಹೊರಡಿಸುತ್ತಿದ್ದು, ಸೈಟ್ ನಲ್ಲಿನ ಕಸವನ್ನ ಬಿಬಿಎಂಪಿಯೇ ತೆಗೆದು ಶುಕ್ಕ ವಿಧಿಸಲಾಗುತ್ತದೆ. ಈ ಕುರಿತಾಗಿ ನೋಟಿಸ್ ಸಹ ನೀಡಲಾಗುತ್ತಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ