ಬೆಂಗಳೂರಿನಲ್ಲಿ ಮತ್ತೆ ಚಿರತೆ ಆತಂಕ; ಮನೆಯ ಬಾಗಿಲು ಬಳಿ ಚಿರತೆ ಕಂಡು ಕಿರುಚಿದ ಬಾಲಕ

ಶನಿವಾರ ಮಳೆ ಬಂದ ಹಿನ್ನೆಲೆಯಲ್ಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚಿಕ್ಕತೋಗೂರು ಸುತ್ತಮುತ್ತ ನೈಸ್ ರಸ್ತೆ ಜಾಗದಲ್ಲಿ ಆಗಾಗ ಚಿರತೆ ಓಡಾಟ ಕಂಡುಬರುತ್ತದೆ.

ಬೆಂಗಳೂರಿನಲ್ಲಿ ಮತ್ತೆ ಚಿರತೆ ಆತಂಕ; ಮನೆಯ ಬಾಗಿಲು ಬಳಿ ಚಿರತೆ ಕಂಡು ಕಿರುಚಿದ ಬಾಲಕ
ಸಾಂದರ್ಭಿಕ ಚಿತ್ರ
Follow us
| Updated By: ವಿವೇಕ ಬಿರಾದಾರ

Updated on:Nov 05, 2023 | 10:17 AM

ಆನೇಕಲ್ ನ.05: ಬೆಂಗಳೂರು ನಗರ ನಿವಾಸಿಗಳಿಗೆ ಮತ್ತೆ ಚಿರತೆ (Leopard) ಆತಂಕ ಶುರುವಾಗಿದೆ. ನೈಸ್ ರಸ್ತೆ ಸಮೀಪದ ಚಿಕ್ಕತೋಗೂರು (Chikkathoguru) ಬಳಿ ಚಿರತೆ ಪ್ರತ್ಯಕ್ಷ ನಿನ್ನೆ (ನ.04) ರ ಸಂಜೆ 7.40ರ ಸಮಯದಲ್ಲಿ ಚಿರತೆ ಕಾಣಿಸಿಕೊಂಡಿದೆ. ಶನಿವಾರ ಸಂಜೆ ಚಿರತೆ ಮನೆ ಕಂಪೌಂಡ್​​ ಒಳಗೆ ನುಗ್ಗಿದ್ದು, ಬಾಗಿಲು ಬಳಿ ಬಂದ ಚಿರತೆ ಕಂಡು ಬಾಲಕ ಕಿರುಚಾಡಿದ್ದಾನೆ. ಬಾಲಕ ಕಿರುಚಾಟಕ್ಕೆ ಚಿರತೆ ಓಡಿ ಹೋಗಿದೆ.

ಕೆ.ಆರ್.ಪುರಂ ಅರಣ್ಯ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪರಿಶೀಲನೆ ನಡೆಸಿ ಅರಣ್ಯ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಶನಿವಾರ ಮಳೆ ಬಂದ ಹಿನ್ನೆಲೆಯಲ್ಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಚಿಕ್ಕತೋಗೂರು ಸುತ್ತಮುತ್ತ ನೈಸ್ ರಸ್ತೆ ಜಾಗದಲ್ಲಿ ಆಗಾಗ ಚಿರತೆ ಓಡಾಟ ಕಂಡುಬರುತ್ತದೆ.

ಇದನ್ನೂ ಓದಿ: ಬೆಂಗಳೂರು ಚಿರತೆ ಸಾವು ಪ್ರಕರಣ: ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ, ಪ್ರಶ್ನೆಗಳ ಸುರಿಮಳೆ

ಬೊಮ್ಮನಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷ; ಗುಂಡೇಟಿಗೆ ಸಾವು

ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನ ಹೊಸೂರು ರಸ್ತೆಯ ಕೂಡ್ಲುಗೇಟ್‌ ಸುತ್ತ ಮುತ್ತ ಚಿರತೆ ಓಡಾಡುತ್ತಿತ್ತು. ಇಲ್ಲಿನ ಪ್ರತಿಷ್ಠಿತ cadenza ಅಪಾರ್ಟ್ ಮೆಂಟ್‌ನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಬೆಳಗ್ಗೆ ಹೊತ್ತಿನಲ್ಲಿ ಕಾಣಿಸಿಕೊಳ್ಳದ ಚಿರತೆ ರಾತ್ರಿ ರಾಜಾರೋಷವಾಗಿ ಓಡಾಡುತ್ತಿತ್ತು. ಇದರಿಂದ ಸ್ಥಳೀಯರು ಭಯಭೀತರಾಗಿದ್ದರು.

ಬೊಮ್ಮನಹಳ್ಳಿಯ ಸಿಂಗಸಂದ್ರ, ಹೊಸಪಾಳ್ಯ, ಕೂಡ್ಲು ಭಾಗದ ನಾಗರಿಕರು ಭಯದಲ್ಲಿಯೇ ದಿನದೂಡುತ್ತಿದ್ದರು. ಚಿರತೆಗೆ ಹೆದರಿ ಕತ್ತಲಾಗುತ್ತಿದ್ದಂತೆ ಈ ಪ್ರದೇಶದ ಜನರು ಮನೆ ಸೇರುತ್ತಿದ್ದರು. ಆತಂಕ ಸೃಷ್ಟಿಸಿರುವ ಚಿರತೆಯನ್ನು ಕೂಡಲೇ ಹಿಡಿಯಬೇಕೆಂದು ಸ್ಥಳೀಯರು ಆಗ್ರಹಿಸಿದ್ದರು. ಅದರಂತೆ ಅರಣ್ಯ ಇಲಾಖೆ ಸಿಬ್ಬಂದಿ ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಬೊಮ್ಮನಹಳ್ಳಿಯ ಕೈಗಾರಿಕಾ ಪ್ರದೇಶದ ಕೂಡ್ಲುಗೇಟ್​ನ ಕೃಷ್ಣಾರೆಡ್ಡಿಪಾಳ್ಯದ ಪಾಳುಬಿದ್ದ ಕಟ್ಟಡದಲ್ಲಿ ಸೆರೆ ಹಿಡಿದಿದ್ದರು. ಆದರೆ ಅರಣ್ಯ ಸಿಬ್ಬಂದಿ ಗುಂಡೇಟಿಗೆ ಚಿರತೆ ಮೃತಪಟ್ಟಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:03 am, Sun, 5 November 23