ಬೆಂಗಳೂರು ಚಿರತೆ ಸಾವು ಪ್ರಕರಣ: ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ, ಪ್ರಶ್ನೆಗಳ ಸುರಿಮಳೆ

ಬೆಂಗಳೂರು ನ.02: ಕಳೆದ ಮೂರು ದಿನಗಳಿಂದ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು (leopard) ಬೊಮ್ಮನಹಳ್ಳಿಯ ಕೈಗಾರಿಕಾ ಪ್ರದೇಶದ ಕೂಡ್ಲುಗೇಟ್​ನ ಕೃಷ್ಣಾರೆಡ್ಡಿಪಾಳ್ಯದ ಪಾಳುಬಿದ್ದ ಕಟ್ಟಡದಲ್ಲಿ ಅರಣ್ಯ ಇಲಾಖೆ (Forest Department) ಸಿಬ್ಬಂದಿ ಸೆರೆ ಹಿಡಿದಿದ್ದರು. ಆದರೆ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಡಬಲ್ ಬ್ಯಾರಲ್ ಗನ್‌ನಿಂದ ಗುಂಡು ಹಾರಿಸಿದ್ದರಿಂದ ಚಿರತೆ ಸ್ಥಳದಲ್ಲೇ ಮೃತಪಟ್ಟಿತ್ತು. ಚಿರತೆ ಸಾವು ಜನರ ಆಕ್ರೋಶ ಕಾರಣವಾಗಿದ್ದು, ಅರಣ್ಯ ಇಲಾಖೆಗೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಇನ್ನು ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸರಿಯಾದ […]

ಬೆಂಗಳೂರು ಚಿರತೆ ಸಾವು ಪ್ರಕರಣ: ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ, ಪ್ರಶ್ನೆಗಳ ಸುರಿಮಳೆ
ಮೃತಪಟ್ಟ ಚಿರತೆ
Follow us
ರಾಮು, ಆನೇಕಲ್​
| Updated By: ವಿವೇಕ ಬಿರಾದಾರ

Updated on: Nov 02, 2023 | 10:21 AM

ಬೆಂಗಳೂರು ನ.02: ಕಳೆದ ಮೂರು ದಿನಗಳಿಂದ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು (leopard) ಬೊಮ್ಮನಹಳ್ಳಿಯ ಕೈಗಾರಿಕಾ ಪ್ರದೇಶದ ಕೂಡ್ಲುಗೇಟ್​ನ ಕೃಷ್ಣಾರೆಡ್ಡಿಪಾಳ್ಯದ ಪಾಳುಬಿದ್ದ ಕಟ್ಟಡದಲ್ಲಿ ಅರಣ್ಯ ಇಲಾಖೆ (Forest Department) ಸಿಬ್ಬಂದಿ ಸೆರೆ ಹಿಡಿದಿದ್ದರು. ಆದರೆ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಡಬಲ್ ಬ್ಯಾರಲ್ ಗನ್‌ನಿಂದ ಗುಂಡು ಹಾರಿಸಿದ್ದರಿಂದ ಚಿರತೆ ಸ್ಥಳದಲ್ಲೇ ಮೃತಪಟ್ಟಿತ್ತು. ಚಿರತೆ ಸಾವು ಜನರ ಆಕ್ರೋಶ ಕಾರಣವಾಗಿದ್ದು, ಅರಣ್ಯ ಇಲಾಖೆಗೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.

ಇನ್ನು ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆಯಾ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಹೌದು ಕಾರ್ಯಾಚರಣೆ ಸಂದರ್ಭದಲ್ಲಿ ಭಯ ಬಿದ್ದ ಚಿರತೆ ಬಲೆಯ ಕಡೆ ಓಡಿ ಬಂದಿತ್ತು. ಚಿರತೆ ಬಲೆಗೆ ಬಂದು ಬಿದ್ದಾಗ ವೈದ್ಯರು ಅರವಳಿಕೆ ನೀಡಬಹುದಿತ್ತು. ಆದರೆ ಬಲೆಗೆ ಬಿದ್ದ ಬಳಿಕ ಚಿರತೆಯ ಬೆನ್ನಿನ ಮೇಲೆ ಫೈರಿಂಗ್​ ಮಾಡಲಾಗಿತ್ತು. ಬೆನ್ನಿಂದ ಹೊಕ್ಕ ಗುಂಡು ಎದೆಗೆ ನುಗ್ಗಿತ್ತು. ಪರಿಣಾಮ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ.

ಇನ್ನು ಕಾರ್ಯಾಚರಣೆ ವೇಳೆ ತಂಡದಲ್ಲಿ ಉತ್ತಮ ತರಬೇತಿ ಪಡೆದಿದ್ದ ವೈದ್ಯರು ಇರಲಿಲ್ಲ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಇಷ್ಟು ದೊಡ್ಡ ಕಾರ್ಯಾಚರಣೆ ಆಗಿದ್ದರು ನುರಿತ ತಂಡವನ್ನ ಕರೆಸಿರಲಿಲ್ಲ. ಅರವಳಿಕೆ ನೀಡಲು ಹಲವಾರು ಜನ ವೈದ್ಯರ ತಂಡವಿತ್ತು. ಕತ್ತು ಅಥವಾ ತೊಡೆ ಭಾಗಕ್ಕೆ ಅರವಳಿಕೆಯನ್ನು ಸಾಮಾನ್ಯವಾಗಿ ಡಾಟ್ ಮಾಡಲಾಗುತ್ತೆ. ಸಾಮಾನ್ಯವಾಗಿ ಮಾಂಸ ಹೆಚ್ಚಾಗಿ ಇರುವ ಕಡೆ ಅರವಳಿಕೆ ನೀಡಲಾಗುತ್ತದೆ. ಅರವಳಿಕೆ ನೀಡಿದ ಬಳಿಕ ಕನಿಷ್ಠ ಹತ್ತು ನಿಮಿಷ ಬೇಕು ಒಂದು ಪ್ರಾಣಿ ಪ್ರಜ್ಞೆ ತಪ್ಪಲು. ಗ್ಯಾಸ್ ಗನ್ ಮೂಲಕ ಹೆಚ್ಚಿನ ಪ್ರೆಶರ್​ನಲ್ಲಿ ಅರವಳಿಕರ ಇಂಜೆಕ್ಟ್ ಮಾಡಬೇಕು.

ಇದನ್ನೂ ಓದಿ: 3 ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ 13 ವರ್ಷದ ಗಂಡು ಚಿರತೆ ಗುಂಡೇಟಿಗೆ ಬಲಿ

ಇದು ಸರಿಯಾಗಿ ಆಗದೆ ಇದ್ದರೆ ಚಿರತೆಗಳು ಇನ್ನಷ್ಟು ಕೋಪಗೊಳ್ಳುತ್ತವೆ. ನಿನ್ನೆಯೂ (ನ.01) ಕೂಡ ಇದೇ ರೀತಿ ಆಗಿತ್ತು. ಮೊದಲನೇ ಬಾರಿ ಅರವಳಿಕೆ ನೀಡಿದಾಗ ಸರಿಯಾಗಿ ಇಂಜೆಕ್ಟ್ ಆಗಿರಲಿಲ್ಲ. ಇದರಿಂದ ಚಿರತೆ ಹತ್ತಿರ ಇದ್ದ ವೈದ್ಯರಿಗೆ ಅಟ್ಯಾಕ್ ಮಾಡಿತ್ತು. ಎರಡನೇ ಬಾರಿಯ ಕಾರ್ಯಾಚರಣೆಯಲ್ಲಿ ಅರವಳಿಕೆ ನೀಡಲು ಎಲ್ಲಾ ಅವಕಾಶವಿತ್ತು, ಆದರೆ ಅರವಳಿಕೆ ನೀಡದೆ ಚಿರತೆಯನ್ನು ಕೊಂದಿರುವುದು ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕೊಲ್ಲುವ ಸಲುವಾಗಿ ಇಷ್ಟೊಂದು ಕಾರ್ಯತಂತ್ರ ರೂಪಿಸಿದ್ದು ಯಾಕೆ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಮೊದಲನೇ ಬಾರಿ ಅಟ್ಯಾಕ್ ಮಾಡಿದಾಗ ನುರಿತ ತಜ್ಞರನ್ನು ಕೂಡಲೇ ಸ್ಥಳಕ್ಕೆ ಕರೆಸಬಹುದಿತ್ತು. ಮೊದಲೇ ಫೆಲ್ಯೂರ್ ಆಗಿದ್ದ ತಂಡವನ್ನೇ ಮತ್ತೆ ಅರವಳಿಕೆ ನೀಡಲು ಮುಂದೆ ಬಿಡಲಾಗಿತ್ತು. ಅರಣ್ಯ ಇಲಾಖೆಯ ಚಿರತೆ ಕಾರ್ಯಾಚರಣೆ ವಿರುದ್ಧ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ