ಪ್ರವಾಸಿಗರಿಗೆ ಸಿಹಿ ಸುದ್ದಿ: ವಿಜಯದಶಮಿಯಂದು ಓಪನ್ ಇರಲಿದೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

| Updated By: ಆಯೇಷಾ ಬಾನು

Updated on: Oct 17, 2023 | 1:59 PM

ಸಾಮಾನ್ಯವಾಗಿ ಪ್ರತಿ ಮಂಗಳವಾರ ಉದ್ಯಾನವನವನ್ನು ಮುಚ್ಚಲಾಗುತ್ತದೆ. ಆದರೆ, ಈಬಾರಿ ಮಂಗಳವಾರವೇ ವಿಜಯದಶಮಿ ಇರುವುದರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನ ತೆರೆದಿರಲಿದೆ. ಉದ್ಯಾನದ ಎಲ್ಲಾ ಘಟಕಗಳಾದ ಮೃಗಾಲಯ, ಸಫಾರಿ ಮತ್ತು ಬಟರ್‌ಫ್ಲೈ ಪಾರ್ಕ್‌ಗಳು ಸಾರ್ವಜನಿಕರಿಗೆ ತೆರೆದಿರುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರವಾಸಿಗರಿಗೆ ಸಿಹಿ ಸುದ್ದಿ: ವಿಜಯದಶಮಿಯಂದು ಓಪನ್ ಇರಲಿದೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
Follow us on

ಬೆಂಗಳೂರು, ಅ.17: ಹಲವಾರು ಜಾತಿಯ ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯಗಳಿಗೆ ನೆಲೆಯಾಗಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ(Bannerghatta National Park and Zoo) ವಿಜಯ ದಶಮಿ (Vijayadashami) ಪ್ರಯುಕ್ತ ಪ್ರವಾಸಿಗರಿಗೆ ಸಂತಸದ ಸುದ್ದಿ ನೀಡಿದೆ. ಸಾಮಾನ್ಯವಾಗಿ ಪ್ರತಿ ಮಂಗಳವಾರ ಬನ್ನೇರುಘಟ್ಟ ಜೈವಿಕ ಉದ್ಯಾನವನ ಮುಚ್ಚಿರುತ್ತದೆ. ಆದರೆ ಈ ಬಾರಿ ಅಕ್ಟೋಬರ್ 24ರ ಮಂಗಳವಾರ ವಿಜಯದಶಮಿ ಇದ್ದು ಈ ದಿನ ಬನ್ನೇರುಘಟ್ಟ ಓಪನ್ ಇರಲಿದೆ.

ಈ ಬಾರಿಯ ವಿಜಯ ದಶಮಿಯಂದು (ಅಕ್ಟೋಬರ್ 24) ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನ ತೆರೆದಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ಪ್ರತಿ ಮಂಗಳವಾರ ಉದ್ಯಾನವನವನ್ನು ಮುಚ್ಚಲಾಗುತ್ತದೆ. ಆದರೆ, ಈಬಾರಿ ಮಂಗಳವಾರವೇ ವಿಜಯದಶಮಿ ಇರುವುದರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನ ತೆರೆದಿರಲಿದೆ.

ಉದ್ಯಾನದ ಎಲ್ಲಾ ಘಟಕಗಳಾದ ಮೃಗಾಲಯ, ಸಫಾರಿ ಮತ್ತು ಬಟರ್‌ಫ್ಲೈ ಪಾರ್ಕ್‌ಗಳು ಸಾರ್ವಜನಿಕರಿಗೆ ತೆರೆದಿರುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಮೈಸೂರು ದಸರಾ ಏರ್​ ಶೋ, ಉಚಿತ ಪ್ರವೇಶ: ಈ ಸಮಯಕ್ಕೆ ಬಂದವರಿಗೆ ಮಾತ್ರ ಆದ್ಯತೆ

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಲರ್ ಫುಲ್ ಚಿಟ್ಟೆಗಳ ಲೋಕ

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ ಚಿಟ್ಟೆ ಪಾರ್ಕ್ ವಿವಿಧ ಬಗೆಯ ಪ್ರಭೇದದ ಪಾತರಗಿತ್ತಿಗಳಿಗೆ ಆಶ್ರಯ ತಾಣವಾಗಿದೆ. ಸೆಪ್ಟೆಂಬರ್ ನಿಂದ ಜನವರಿಯವರೆಗೆ ಚಿಟ್ಟೆಗಳ ಸಂತಾನೋತ್ಪತ್ತಿಯ ಕಾಲವಾಗಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ರಾಶಿ ರಾಶಿ ಚಿಟ್ಟೆಗಳು ಸ್ವಚ್ಚಂದವಾಗಿ ಹಾರಾಡುತ್ತಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ ಇಲ್ಲಿಯವರೆಗೆ ಸಾವಿರಾರು ಚಿಟ್ಟೆಗಳನ್ನು ಸಂರಕ್ಷಣಾ ಗೋಪುರದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಬಿಡಲಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹತ್ತಾರು ವಿವಿಧ ಪ್ರಭೇದದ ಚಿಟ್ಟೆಗಳಿವೆ. ಚಿಟ್ಟೆಗಳ ಜೀವನವು ನಾಲ್ಕು ಹಂತದಲ್ಲಿ ತನಗೆ ಆಹಾರ ಸಿಗುವ ಗಿಡದಲ್ಲಿ ಮೊಟ್ಟೆ ಇಟ್ಟು ನಂತರ ಲಾರ್ವಾ ಸ್ಥಿತಿಗೆ ತಲುಪುತ್ತವೆ. ಅವುಗಳು ಎಲೆಗಳನ್ನ ತಿಂದು ಪಿಫಾ ಸ್ಥಿತಿಗೆ ತಲುಪಿ ಬಳಿಕ ರೂಪಾಂತರಿಯಾಗಿ ಬಣ್ಣ ಬಣ್ಣದ ಚಿಟ್ಟೆಗಳಾಗುತ್ತವೆ. ಇದಕ್ಕೆ ತಕ್ಕಂತೆ ಸಸ್ಯ, ಹೂವು ಗಿಡ ಬೆಳೆಸಿ ನಿರ್ವಹಣೆ ಮಾಡಲಾಗುತ್ತಿದೆ. ಬನ್ನೇರುಘಟ್ಟಗೆ ಭೇಟಿ ಕೊಟ್ಟರೆ ಚಿಟ್ಟೆಗಳ ಪಾರ್ಕ್​ಗಳಿಗೆ ಭೇಟಿ ನೀಡುವುದನ್ನು ಮರೆಯಬೇಡಿ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ