Dasara: ಕೇವಲ 1 ರೂ.ಗೆ ಬಸ್ ಟಿಕೆಟ್ ಬುಕ್ ಮಾಡಿ; ಖಾಸಗಿ ಸಂಸ್ಥೆಯಿಂದ ಭರ್ಜರಿ ಆಫರ್
ದಸರಾ ರಜೆಯಿದ್ದು, ರಾಜ್ಯದ ಜನರು ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಉತ್ಸುಕರಾಗಿದ್ದಾರೆ. ಆದರೆ ಪ್ರಯಾಣಿಸಲು ಬಸ್ ಟಿಕೆಟ್ ದುಬಾರಿಯಾದ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಇದೇ ವೇಳೆ ಪ್ರಯಾಣಿಕರಿಗೆ ಖಾಸಗಿ ಸಂಸ್ಥೆಯೊಂದು ಭರ್ಜರಿ ಆಫರ್ ನೀಡಿದೆ.
ಬೆಂಗಳೂರು ಅ.17: ದಸರಾ (Dasara) ರಜೆಯಿದ್ದು, ರಾಜ್ಯದ ಜನರು ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಉತ್ಸುಕರಾಗಿದ್ದಾರೆ. ಆದರೆ ಪ್ರಯಾಣಿಸಲು ಬಸ್ ಟಿಕೆಟ್ (Bus Ticket) ದುಬಾರಿಯಾದ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಇದೇ ವೇಳೆ ಪ್ರಯಾಣಿಕರಿಗೆ ಖಾಸಗಿ ಸಂಸ್ಥೆಯೊಂದು ಭರ್ಜರಿ ಆಫರ್ ನೀಡಿದೆ. ಖಾಸಗಿ ಸಂಸ್ಥೆ Abhi Bus ಕೇವಲ 1 ರೂ.ಗೆ ಬಸ್ ಟಿಕೆಟ್ ಬುಕ್ಕಿಂಗ್ಗೆ ಅವಕಾಶ ನೀಡಿದೆ. ಅತ್ಯಂತ ಜನಪ್ರಿಯ ಬಸ್ ಬುಕಿಂಗ್ ಅಪ್ಲಿಕೇಶನ್ AbhiBus ಅಕ್ಟೋಬರ್ 19 ರಿಂದ ಅಕ್ಟೋಬರ್ 25ರ ವರೆಗಿನ ನಡುವಿನ ಪ್ರಯಾಣಕ್ಕೆ ಮಾತ್ರ ಈ ಆಫರ್ ನೀಡಿದೆ. ಈ ಆಫರ್ ಪಡೆಯಲು ಪ್ರಯಾಣಿಕರು “LUCKY1” ರಿಯಾಯಿತಿ ಕೋಡ್ಅನ್ನು ಬಳಸಬೇಕು ಎಂದು ಹೇಳಿದೆ. ಮತ್ತೆ ದೀಪಾವಳಿಯಲ್ಲಿ ಈ ಆಫರ್ ನೀಡಲಿದೆ.
ಹೊಸದಾಗಿ 30 ವಿಶೇಷ ರೈಲುಗಳನ್ನು ಬಿಟ್ಟ ಇಲಾಖೆ
ಅಕ್ಟೋಬರ್ 15 ರಂದಿ ದಸರಾ ರಜಾದಿನ ಆರಂಭವಾಗಿದೆ. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನವರಾತ್ರಿ ಅಥವಾ ದಸರಾ, ದೀಪಾವಳಿ ಹಬ್ಬಗಳನ್ನು ಆಚರಿಸಲಾಗುತ್ತದೆ. ಈ ಹಬ್ಬಗಳನ್ನು ಆಚರಿಸಲು ಹೆಚ್ಚಿನ ಸಂಖ್ಯೆ ಜನರು ತಮ್ಮ ಊರುಗಳಿಗೆ ಹೋಗುತ್ತಾರೆ. ಈ ವೇಳೆ ರೈಲು ಟಿಕೆಟ್ ಖರೀದಿಸುವುದು ತುಂಬಾ ಕಷ್ಟಕರವಾಗುತ್ತಿದೆ. ಮತ್ತು ರೈಲುಗಳು ರಶ್ ಆಗಿರುತ್ತವೆ.
ಇದನ್ನೂ ಓದಿ: Mysore Dasara 2023: ಮೈಸೂರು ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ KSRTCಯಿಂದ ವಿಶೇಷ ಪ್ಯಾಕೇಜ್; ಇಲ್ಲಿ ಡೀಟೈಲ್ಸ್
ಹಬ್ಬಳ ಸಮಯದಲ್ಲಿ ಅಧಿಕ ಸಂಖ್ಯೆ ಪ್ರಯಾಣಿಕರು ಪ್ರಯಾಣಿಸುವುದರಿಂದ ಸೆಂಟ್ರಲ್ ರೈಲ್ವೆ ಇಲಾಖೆ 30 ವಿಶೇಷ ರೈಲುಗಳನ್ನು ಬಿಟ್ಟಿದೆ. ರೈಲುಗಳು ಸಿಎಸ್ಎಮ್ಟಿ – ನಾಗ್ಪುರ ದ್ವಿ-ವಾರದ ಸೂಪರ್ಫಾಸ್ಟ್ ವಿಶೇಷ (20) ಮತ್ತು ನಾಗ್ಪುರ-ಪುಣೆ ಸಾಪ್ತಾಹಿಕ ಸೂಪರ್ಫಾಸ್ಟ್ ವಿಶೇಷ (10) ರೈಲುಗಳು ಕಾರ್ಯನಿರ್ವಹಿಸಲಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ