AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ವಿದೇಶಿ ಸಿಗರೇಟ್​ ಅಕ್ರಮ ದಾಸ್ತಾನು ಗೋಡೌನ್​ ಮೇಲೆ ಸಿಸಿಬಿ ಪೊಲೀಸ್​ ದಾಳಿ; ಆರೋಪಿ ಬಂಧನ

ಸಿಟಿ ಮಾರ್ಕೆಟ್ ಬಳಿಯ ಗೋಡೌನ್​ನಲ್ಲಿ ದಾಸ್ತಾನು ಮಾಡಲಾಗಿದ್ದ ಬರೊಬ್ಬರಿ 22 ಲಕ್ಷದ ವಿದೇಶಿ ಸಿಗರೇಟ್​ಗಳನ್ನು ಇದೀಗ ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ. ಜೊತೆಗೆ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರು: ವಿದೇಶಿ ಸಿಗರೇಟ್​ ಅಕ್ರಮ ದಾಸ್ತಾನು ಗೋಡೌನ್​ ಮೇಲೆ ಸಿಸಿಬಿ ಪೊಲೀಸ್​ ದಾಳಿ; ಆರೋಪಿ ಬಂಧನ
ಆರೋಪಿ
Shivaprasad B
| Updated By: ಕಿರಣ್ ಹನುಮಂತ್​ ಮಾದಾರ್|

Updated on: Oct 17, 2023 | 4:54 PM

Share

ಬೆಂಗಳೂರು, ಅ.17: ವಿದೇಶಿ ಸಿಗರೇಟ್(Cigarette)​ ಅಕ್ರಮ ದಾಸ್ತಾನು ಮಾಡಿದ್ದ ಗೋಡೌನ್ ಮೇಲೆ ಸಿಸಿಬಿ ಪೊಲೀಸರು​ ದಾಳಿ ಮಾಡಿದ ಘಟನೆ ಸಿಟಿ ಮಾರ್ಕೆಟ್ ಬಳಿ ನಡೆದಿದೆ. ಈ ವೇಳೆ ಗೋಡೌನ್​ನಲ್ಲಿ ದಾಸ್ತಾನು ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದ್ದು, ಸುಮಾರು 22 ಲಕ್ಷ ರೂ. ಮೌಲ್ಯದ 1500 ಬಾಕ್ಸ್ ವಿವಿಧ ಮಾದರಿಯ ವಿದೇಶಿ ಸಿಗರೇಟ್ ಜಪ್ತಿ ಮಾಡಲಾಗಿದೆ. ಇನ್ನು ಇತ ಇದನ್ನು ದೆಹಲಿಯಿಂದ ಕೊರಿಯರ್ ಮೂಲಕ ತರಿಸಿದ್ದನಂತೆ. ಈ ಕುರಿತು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮಂಗಳೂರಿನಲ್ಲಿ ಜಪ್ತಿಯಾಗಿತ್ತು  2.70 ಲಕ್ಷ ಮೌಲ್ಯದ ಇ-ಸಿಗರೇಟ್​​ಗಳು

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಲಾಲ್​ಬಾಗ್ ಬಳಿಯ ಕಾಂಪ್ಲೆಕ್ಸ್ ಅಂಗಡಿಗಳ ಮೇಲೆ ಬರ್ಕೆ ಠಾಣೆ ಪೊಲೀಸರು ಆಗಸ್ಟ್​.22 ರಂದು ದಾಳಿ ಮಾಡಿದ್ದರು. ಈ ವೇಳೆ 2.70 ಲಕ್ಷ ರೂ. ಮೌಲ್ಯದ ವಿದೇಶಿ ಸಿಗರೇಟ್ ಮತ್ತು ಇ-ಸಿಗರೇಟ್​ಗಳು  ಪತ್ತೆಯಾಗಿತ್ತು. ಈ ವೇಳೆ ಆರೋಪಿಗಳಾದ ಮಂಗಳೂರಿನ ಮಣ್ಣಗುಡ್ಡೆಯ ಸ್ವಾತಿ(26), ಶಿವಕುಮಾರ್(34), ಕುತ್ತಾರು ಪದವಿನ ಹಸನ್ ಶರೀಫ್(50) ಹಾಗೂ ರೆಹಮತುಲ್ಲಾ(45) ಸೇರಿ ನಾಲ್ವರನ್ನು ಬಂಧಿಸಲಾಗಿತ್ತು. ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಇದೀಗ ವಿದೇಶಿ ಸಿಗರೇಟ್​ ಪತ್ತೆಯಾಗಿದೆ.

ಇದನ್ನೂ ಓದಿ:ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಪ್ರಯಾಣಿಕನ ಬ್ಯಾಗ್​ನಲ್ಲಿ ಸಿಕ್ತು 1ಕೋಟಿಗೂ ಅಧಿಕ ವಿದೇಶಿ ಹಣ

ಚಿಕಿತ್ಸೆಗೆ ಬಂದ ರೋಗಿ‌ ಸಾವು; ವೈದ್ಯರ ನಿರ್ಲಕ್ಷ್ಯದ ಆರೋಪ

ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಾ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ ರೋಗಿ ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಮೃತನ ಸಂಬಂಧಿಕರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ. ಜಗಳೂರು ತಾಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದ ಕರಿಯಪ್ಪ (60) ಮೃತ ರ್ದುದೈವಿ. ಇನ್ನು ಅನಾರೋಗ್ಯದಿಂದ ಬಳಲುತ್ತಿದ್ದ ಕರಿಯಪ್ಪ ಅವರನ್ನು ತಾಲೂಕಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರೋಗಿಯ ಗಂಭೀರ ಸ್ಥಿತಿ ನೋಡಿದ ನರ್ಸ್ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದರು. ಆದರೆ, ಚುಚ್ಚು‌ ಮದ್ದು ‌ನೀಡಿ ಹೋದ ವೈದ್ಯರು ನಾಪತ್ತೆಯಾಗಿದ್ದು, ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಿದ ಹಿನ್ನೆಲೆ ವೃದ್ಧ ಕೊನೆಯುಸಿರೆಳೆದಿದ್ದಾನೆ ಎಂದು ಸಬಂಧಿಕರು ಆರೋಪಿಸಿದ್ದಾರೆ. ಕೆಲ ಹೊತ್ತು ಆಸ್ಪತ್ರೆ ಮುಂದೆ ಪ್ರತಿಭಟನೆ ಕೂಡ ನಡೆಸಿದ್ದು, ಪೊಲೀಸರು ಹಾಗೂ ರೋಗಿಯ ಸಂಬಂಧಿಕರ ನಡುವೆ ಮಾತಿನ ಚಕಮಕಿ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ