ಮೊಬೈಲ್​ಗಳನ್ನು ಕದ್ದು ತಮಿಳುನಾಡು, ಕೇರಳಾಗೆ ಸಾಗಿಸುತ್ತಿದ್ದ ಗೋರಿಪಾಳ್ಯ ಗ್ಯಾಂಗ್ ಅರೆಸ್ಟ್, ಖದೀಮರಿಂದ 1037 ಫೋನ್ ವಶ

ಬೆಂಗಳೂರಲ್ಲಿ ಪ್ರತಿನಿತ್ಯ ನೂರಾರು ಫೋನ್​ಗಳು ಕಳ್ಳತನವಾಗುತ್ತವೆ. ಆದರೆ ಅವೆಲ್ಲಾ ಎಲ್ಲಿ ಹೋಗುತ್ತವೆ ಅಂತ ಯಾರಿಗೂ ಗೊತ್ತಿಲ್ಲ. ಅಂತಹ ನಿಗೂಢ ಪ್ರಕರಣ ಭೇದಿಸಿರೋ ಬನ್ನೇರುಘಟ್ಟ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿ ಕೋಟ್ಯಾಂತರ ರೂಪಾಯಿ ಮೌಲ್ಯದ 1037 ಫೋನ್ ಗಳನ್ನ ವಶಪಡಿಸಿಕೊಂಡಿದ್ದಾರೆ.

ಮೊಬೈಲ್​ಗಳನ್ನು ಕದ್ದು ತಮಿಳುನಾಡು, ಕೇರಳಾಗೆ ಸಾಗಿಸುತ್ತಿದ್ದ ಗೋರಿಪಾಳ್ಯ ಗ್ಯಾಂಗ್ ಅರೆಸ್ಟ್, ಖದೀಮರಿಂದ 1037 ಫೋನ್ ವಶ
ಬಂಧನ
Follow us
TV9 Web
| Updated By: ಆಯೇಷಾ ಬಾನು

Updated on: Oct 29, 2023 | 7:06 AM

ಬೆಂಗಳೂರು, ಅ.29: ಬೆಂಗಳೂರು ಸಿಟಿಯಲ್ಲಿ ಪ್ರತಿನಿತ್ಯ ನೂರಾರು ಫೋನ್ ಗಳ ಕಳುವಾಗುತ್ವೆ (Stealing  Mobile Phones).‌ ನಡೆದು ಕೊಂಡು ಹೋಗುತಿದ್ರೆ ಬೈಕ್​ನಲ್ಲಿ ಹಿಂದೆಯಿಂದ ಬಂದು ಮೊಬೈಲ್ ಎಗರಿಸುತ್ತಾರೆ, ಬಸ್ ಗಳಲ್ಲಿ ಅಟೆನ್ಷನ್ ಡೈವರ್ಶನ್ ಮಾಡಿ ಪ್ರಯಾಣಿಕರ ಜೇಬಿನಿಂದ ಮೊಬೈಲ್ ಎಗರಿಸಿ ಎಸ್ಕೇಪ್ ಆಗ್ತಾರೆ. ಅಷ್ಟೇ ಅಲ್ಲದೇ ಕಿಟಕಿ ಪಕ್ಕದಲ್ಲಿದ್ದ ಫೋನ್ ಗಳನ್ನ ಕದಿಯೋದು ಹೀಗೆ ನಾನಾ ರೀತಿಯ ಪ್ರಕರಣಗಳು ಪ್ರತಿ ನಿತ್ಯ ದಾಖಲಾಗ್ತಾನೆ ಇರ್ತಾವೆ.

ಆದರೆ ಹಾಗೇ ಕದ್ದ ಫೋನ್​ಗಳು ಎಲ್ಲಿ ಹೋಗ್ತಾವೆ ಅನ್ನೋದು ಜನ ಸಾಮಾನ್ಯರಿಗೆ ಇಲ್ಲಿಯವರೆಗೂ ಗೊತ್ತಾಗ್ತಿಲ್ಲ. ಅಂತಹ ಪ್ರಕರಣವನ್ನ ಭೇದಿಸಿರೋ ಬನ್ನೇರುಘಟ್ಟ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಗೋರಿಪಾಳ್ಯದ ಮಹಮ್ಮದ್ ಮಮೂದ್ ಪಾಷಾ, ಮಹಮ್ಮದ್ ಉಮರ್, ಮಹಮ್ಮದ್ ಸಲೀಮ್ ಹಾಗೂ ಐಯಾನ್ ಬಂಧಿತ ಆರೋಪಿಗಳು. ಇವರೆಲ್ಲ 40-50 ವರ್ಷದವರು.

ಮೊದಲಿಗೆ ಅಕ್ಟೋಬರ್ 21 ರಂದು ಬನ್ನೇರುಘಟ್ಟ ರಸ್ತೆಯ ಎಎಂಸಿ ಇಂಜಿನಿಯರಿಂಗ್ ಕಾಲೇಜು ಬಳಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಮಮೂದ್ ಪಾಷಾ ಮತ್ತು ಉಮರ್​ನನ್ನು ಪೊಲೀಸರು ಬಂಧಿಸಿದ್ದರು. ಇವರಿಬ್ಬರು ಒಂದು ರಟ್ಟಿನ ಬಾಕ್ಸ್ನಲ್ಲಿ ಸುಮಾರು 100 ಮೊಬೈಲ್ ಫೋನ್‌ಗಳನ್ನು ಸಾಗಿಸುತ್ತಿದ್ದರು. ಈ ವೇಳೆ ದಾಳಿ ನಡೆಸಿ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು. ಇನ್ನು ಅಕ್ಟೋಬರ್ 26 ರಂದು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಯಿತು. ಒಬ್ಬನಿಂದ 82 ಮತ್ತು ಮತ್ತೊಬ್ಬ ಆರೋಪಿಯಿಂದ 185 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡರು. ಹೆಗ್ಡೆನಗರದ ಬಾಡಿಗೆ ಮನೆಯೊಂದರಲ್ಲಿ 770 ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ.

ಇದನ್ನೂ ಓದಿ: ದೇವನಹಳ್ಳಿ: ಒಂಟಿ ವೃದ್ದೆಯ ಮೇಲೆ ಹಲ್ಲೆ ನಡೆಸಿ ಚೈನ್ ಎಗರಿಸಿದ್ದ ಸಾಪ್ಟ್ ವೇರ್ ಉದ್ಯೋಗಿ ಅರೆಸ್ಟ್​

ಈ ಆರೋಪಿಗಳು, ಪಾದಚಾರಿಗಳಿಂದ ಮೊಬೈಲ್ ಸ್ಯಾಚಿಂಗ್ ಮಾಡೋದು, ಕಿಟಕಿಯಲ್ಲಿ ಫೋನ್ ಇಟ್ಟು ನಿದ್ದೆ ಮಾಡೋರ ಬಳಿ ಹಾಗೂ ಬಸ್ ಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಸಾವಿರಾರು ರೂಪಾಯಿ ಬೆಲೆಯ ಮೊಬೈಲ್ ಗಳನ್ನ ಕಳವು ಮಾಡ್ತಿದ್ರು. ಬಳಿಕ ಅದನ್ನ ಗೋರಿಪಾಳ್ಯದ ರೂಂನಲ್ಲಿ ಸಂಗ್ರಹ ಮಾಡಿ ಸಣ್ಣ ಪುಟ್ಟ ರಿಪೇರಿ ಮಾಡಿ ಬಳಿಕ‌ ಕಾಟನ್ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಚೆನ್ನೈ ಹಾಗೂ ಕೇರಳಕ್ಕೆ ಶಿಫ್ಟ್ ಮಾಡ್ತಿದ್ರಂತೆ

ಇನ್ನು ಮೊಬೈಲ್ ಗಳ ಮಾರಾಟದಿಂದ ಬಂದ ಹಣವನ್ನ ಎರಡು ಬ್ಯಾಂಕ್ ಖಾತೆಗಳಲ್ಲಿ ನಿರ್ವಹಣೆ ಮಾಡುತ್ತಿದ್ದು, ಹಣ ಯಾವ ಉದ್ದೇಶಕ್ಕಾಗಿ ಬಳಕೆ‌ಮಾಡ್ತಿದ್ರು ಅನ್ನೋ‌ ಶಂಕೆ ವ್ಯಕ್ತವಾಗಿದೆ . ಸದ್ಯ ಆರೋಪಿಗಳಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ ವಿವಿಧ ಬ್ರ್ಯಾಂಡ್ ನ 1037 ಫೋನ್ ಗಳನ್ನ ವಶಪಡಿಸಿಕೊಂಡಿರುವ ಬನ್ನೇರುಘಟ್ಟ ಪೊಲೀಸರು ಮೊಬೈಲ್ ಕಳವು ಪ್ರಕರಣಗಳ ಹಿಂದೆ ಇನ್ಯಾರ್ಯಾರು ಇದ್ದಾರೆ ಅನ್ನೋದನ್ನ ಪತ್ತೆಹಚ್ಚಲು ತನಿಖೆ ಮುಂದುವರೆಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ