ಬೆಂಗಳೂರು: ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿ ನಾಳೆಗೆ (ಜ.28) ಆರು ತಿಂಗಳು. ವಿಪಕ್ಷ ನಾಯಕರ ಟೀಕೆಗಳ ನಡುವೆ ಮುಖ್ಯಮಂತ್ರಿ ಬೊಮ್ಮಾಯಿ ಆರು ತಿಂಗಳು ಕಳೆದಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ, ನಾನು ಸಿಎಂ ಆಗಿ ನಾಳೆಗೆ 6 ತಿಂಗಳು ಪೂರ್ಣವಾಗುತ್ತಿರುವ ಹಿನ್ನೆಲೆ 6 ತಿಂಗಳ ಆಡಳಿತದ ಪಕ್ಷಿನೋಟ ಪುಸ್ತಕ (Book) ಬಿಡುಗಡೆ ಮಾಡಲಾಗುವುದು. ಆದರೆ ನಾಳೆ ಯಾವುದೇ ಹೊಸ ಘೋಷಣೆ ಮಾಡಲ್ಲ ಅಂತ ತಿಳಿಸಿದರು.
ನಾಳೆ ಯಾವುದೇ ರೀತಿಯ ಸರ್ಪ್ರೈಸ್ ಘೋಷಣೆ ಇಲ್ಲ. ಆರು ತಿಂಗಳಿಗೆಲ್ಲಾ ಸರ್ಪ್ರೈಸ್ ಘೋಷಣೆ ಮಾಡುವುದಿಲ್ಲ ಎಂದು ತಿಳಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಯಾವುದೇ ಸಮಸ್ಯೆ ಬಂದರು ನಮ್ಮ ಸರ್ಕಾರ ಸ್ಪಂದಿಸುತ್ತದೆ. ಜೋಳ ಖರೀದಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಟ್ಟೆ. ಈಗ ರಾಗಿ ಖರೀದಿ ಮುಂದುವರಿಸುವ ಬಗ್ಗೆ ನಿರ್ಧರಿಸುತ್ತೇವೆ. ನಮ್ಮ ಸರ್ಕಾರ ನಿರಂತರವಾಗಿ ಜನರಿಗೆ ಸಹಾಯ ಮಾಡುತ್ತಿದೆ. ನಮ್ಮದು ಸ್ಪಂದನಾಶೀಲ ಸರ್ಕಾರ ಅಂತ ಹೇಳಿದರು.
62ನೇ ವಸಂತಕ್ಕೆ ಕಾಲಿಡುತ್ತಿರುವ ಸಿಎಂ ಬೊಮ್ಮಾಯಿ:
ಸಿಎಂ ಪಟ್ಟಕ್ಕೆ ಏರಿ ಬೊಮ್ಮಾಯಿ ನಾಳೆ ಆರು ತಿಂಗಳು ಪೂರೈಸುತ್ತಾರೆ. ಈ ಸಂಭ್ರಮದ ಜೊತೆ ಅವರು 62ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೊಮ್ಮಾಯಿ ನಾಳೆ ನಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದರು.
ರಾಜ್ಯದಲ್ಲಿ ಕೊವಿಡ್ ಟಫ್ ರೂಲ್ಸ್ ಸಡಿಲಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕ್ಯಾಬಿನೆಟ್ ಅಜೆಂಡಾ ಮೇಲೆ ಈ ವಿಚಾರದ ಬಗ್ಗೆ ಚರ್ಚೆ ಮಾಡುತ್ತೇವೆ. ಅಜೆಂಡಾದಲ್ಲಿ ವಿನಾಯಿತಿ ವಿಚಾರ ಬಂದರೆ ಚರ್ಚಿಸುವೆ. ಕೊವಿಡ್ ನಿರ್ವಹಣೆ ಸಂಬಂಧ ವರದಿಯನ್ನು ಕೇಳಿದ್ದೇನೆ. ತಜ್ಞರಿಂದ ವರದಿ ಕೇಳಿದ್ದೇನೆ ಎಂದು ತಿಳಿಸಿದರು.
ಇಂದು ಸಚಿವ ಸಂಪುಟ ಸಭೆ
ಇಂದು ಮಧ್ಯಾಹ್ನ 12 ಗಂಟೆಗೆ ಸಚಿವ ಸಂಪುಟ ಸಭೆ ನಡೆಯುತ್ತದೆ. ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಹಂಚಿಕೆ ಬಗ್ಗೆ ಅನೌಪಚಾರಿಕ ಚರ್ಚೆ ನಡೆಸಲಾಗುವುದು. ಕೊವಿಡ್ ನಿಯಮ ಸಡಿಲಿಕೆ ಬಗ್ಗೆ ಸಚಿವರು ಪ್ರಸ್ತಾಪಿಸಿದರೆ, ಈ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ. ಬಿಬಿಎಂಪಿ, ಬಿಡಿಎಗೆ ಸಂಬಂಧಿಸಿದ ವಿಚಾರ ಕುರಿತು ಚರ್ಚೆ ನಡೆಸಬಹುದು. ಫೆಬ್ರವರಿಯಲ್ಲಿ ಜಂಟಿ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ
ಈಡೇರದ ಸರ್ಕಾರಿ ಭರವಸೆ: ನೊಂದು ತಾವೇ ವೆಚ್ಚ ಭರಿಸಿ ಗ್ರಂಥಾಲಯ ಉದ್ಘಾಟನೆ ಮಾಡಿ ಕನ್ನಡ ಪ್ರೇಮ ಹೆಚ್ಚಿಸಿದ ಸೈಯದ್ ಇಸಾಕ್
ಕಿಟಕಿ ಬಾಗಿಲು ಮುಚ್ಚಿದ ಪುಟ್ಟ ಕೋಣೆಯಲ್ಲಿ ಏಳೆಂಟು ವರ್ಷದಿಂದ ಜೀವನ; ಮಗಳ ಕರುಣಾಜನಕ ಸ್ಥಿತಿಗೆ ಪೋಷಕರೇ ಕಾರಣ?
Published On - 11:11 am, Thu, 27 January 22