Bangalore: ಕೆಆರ್​ ಸರ್ಕಲ್​ ದುರ್ಘಟನೆ ನಂತರ ಬಿಬಿಎಂಪಿ ಅಲರ್ಟ್: ನಗರದ ಅಂಡರ್​ ಪಾಸ್​ಗಳ ಸರ್ವೆ ನಡೆಸಲು ಸೂಚನೆ

ಬೆಂಗಳೂರು ನಗರದ ಕೆಆರ್ ಸರ್ಕಲ್ ಅಂಡರ್​ಪಾಸ್​ನಲ್ಲಿ ಕಾರು ಮುಳುಗಿ ಯುವತಿ ಸಾವನ್ನಪ್ಪಿದ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ, ನಗರದಲ್ಲಿರುವ ಎಲ್ಲಾ ಅಂಡರ್‌ಪಾಸ್‌ಗಳ ಸರ್ವೆಗೆ ಸೂಚನೆ ನೀಡಿದೆ.

Bangalore: ಕೆಆರ್​ ಸರ್ಕಲ್​ ದುರ್ಘಟನೆ ನಂತರ ಬಿಬಿಎಂಪಿ ಅಲರ್ಟ್: ನಗರದ ಅಂಡರ್​ ಪಾಸ್​ಗಳ ಸರ್ವೆ ನಡೆಸಲು ಸೂಚನೆ
ಬೆಂಗಳೂರು ನಗರದ ಅಂಡರ್​ ಪಾಸ್​ಗಳ ಸರ್ವೆ ನಡೆಸಲು ಬಿಬಿಎಂಪಿ ಸೂಚನೆ
Rakesh Nayak Manchi

Updated on: May 21, 2023 | 9:15 PM

ಬೆಂಗಳೂರು: ನಗರದ ಕೆಆರ್ ಸರ್ಕಲ್ (KR Circle) ಅಂಡರ್​ಪಾಸ್​ನಲ್ಲಿ ಕಾರು ಮುಳುಗಿ ಯುವತಿ ಸಾವನ್ನಪ್ಪಿದ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ (BBMP), ನಗರದಲ್ಲಿರುವ ಎಲ್ಲಾ ಅಂಡರ್‌ಪಾಸ್‌ಗಳ ಸರ್ವೆಗೆ (Survey of Underpasses) ಸೂಚನೆ ನೀಡಿದೆ. ನಗರದ 20 ಪ್ರಮುಖ ಅಂಡರ್​ ಪಾಸ್​ಗಳ ಸ್ಥಿತಿಗತಿ ಬಗ್ಗೆ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಾಳೆ ಮಧ್ಯಾಹ್ನದ ಒಳಗಾಗಿ ನಗರದಲ್ಲಿರುವ ಅಂಡರ್​ಪಾಸ್​ಗಳ ಸರ್ವೆ ನಡೆಸಿ ಅದರ ವರದಿಯನ್ನು ಪಾಲಿಕೆ ಮುಖ್ಯ ಇಂಜಿನಿಯರ್ ಪ್ರಹ್ಲಾದ್​​​ ಅವರಿಗೆ ಕೊಡುವಂತೆ ಪಾಲಿಕೆ ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ. ಇದರ ಜೊತೆಗೆ ಅಂಡರ್​ಪಾಸ್ ಡ್ರೈನೇಜ್, ರೋಡ್ ಮೈಂಟೇನೆನ್ಸ್ ವರದಿ ನೀಡುವಂತೆಯೂ ಸೂಚಿಸಲಾಗಿದೆ.

ಇದನ್ನೂ ಓದಿ: Bangalore Rain: ಬೆಂಗಳೂರು ಮಳೆ ದುರಂತ, ಮಾನವೀಯತೆ ಮರೆತ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆ, ಇನ್ಫೋಸಿಸ್ ಉದ್ಯೋಗಿ ಬಲಿ

ಕೆಆರ್​ ಸರ್ಕಲ್​ನಲ್ಲಿ ನಡೆದ ದುರಂತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶೀಲನೆ ನಡೆಸಿದ್ದರು. ನಂತರ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಕರೆ ಮಾಡಿದ ಅವರು ತಮ್ಮ ಸರ್ಕಾರಿ ನಿವಾಸಕ್ಕೆ ಆಹ್ವಾನಿಸಿ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದರು.

ಅನಾಹುತ ತಡೆಯಲು ಫೀಲ್ಡ್​ಗೆ ಇಳಿದ ಬಿಬಿಎಂಪಿ

ಬೆಂಗಳೂರು ಮಹಾನಗರದಲ್ಲಿ ಇನ್ನೂ 4 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ನಗರದಲ್ಲಿ ಅನಾಹುತ ತಡೆಯಲು ಫೀಲ್ಡ್​ಗೆ ಇಳಿದ ಬಿಬಿಎಂಪಿ, ನಗರದಾದ್ಯಂತ 41 ಫಾರೆಸ್ಟ್ ತಂಡ ನಿಯೋಜಿಸಿದೆ. ಈ ತಂಡಗಳು ಮಳೆ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಲಿವೆ.

Published On - 9:09 pm, Sun, 21 May 23

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us