ಬೆಂಗಳೂರು: ಶಿಥಿಲಗೊಂಡ ಕಟ್ಟಡಗಳ ತೆರವಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​​ ಗುಪ್ತಾ ಸೂಚನೆ

| Updated By: ganapathi bhat

Updated on: Sep 28, 2021 | 2:55 PM

Bengaluru: ಮೂರು ಅಂತಸ್ತಿನ ಕಟ್ಟಡಗಳು ಕುಸಿತವಾಗಿದ್ದು ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಹಿನ್ನೆಲೆಯಲ್ಲಿ ಗೌರವ್ ಗುಪ್ತಾ ಇದೀಗ ಅಧಿಕಾರಿಗಳಿಗೆ ಹೀಗೆ ಸೂಚನೆ ಕೊಟ್ಟಿದ್ದಾರೆ.

ಬೆಂಗಳೂರು: ಶಿಥಿಲಗೊಂಡ ಕಟ್ಟಡಗಳ ತೆರವಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​​ ಗುಪ್ತಾ ಸೂಚನೆ
ಗೌರವ್ ಗುಪ್ತಾ
Follow us on

ಬೆಂಗಳೂರು: ನಗರದಲ್ಲಿ ಶಿಥಿಲಗೊಂಡ ಕಟ್ಟಡಗಳ ತೆರವಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​​ ಗುಪ್ತಾ ಸೂಚನೆ ನೀಡಿದ್ದಾರೆ. ವಾಸಿಸಲು ಯೋಗ್ಯವಲ್ಲದ ಕಟ್ಟಡ ಬಾಡಿಗೆಗೆ ನೀಡಬಾರದು. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳೀಯ ಅಧಿಕಾರಿಗಳಿಗೆ ಹೇಳಿದ್ದಾರೆ. ಒಂದೊಮ್ಮೆ ಕಟ್ಟಡ ಮಾಲೀಕರ ನಿರ್ಲಕ್ಷ್ಯ ಕಂಡುಬಂದರೆ ಅವರ ವಿರುದ್ಧ ಎಫ್​ಐಆರ್ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಎರಡು ದಿನದ ಅವಧಿಯಲ್ಲಿ ಎರಡು ಕಟ್ಟಡ ಕುಸಿತ ಪ್ರಕರಣ ನಡೆದಿದೆ. ಕಟ್ಟಡ ಶಿಥಿಲಗೊಂಡಿದ್ದರೂ ಅದನ್ನು ಬಳಕೆ ಮಾಡುತ್ತಿದ್ದದ್ದು ಹಾಗೂ ಬಾಡಿಗೆಗೆ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಮೂರು ಅಂತಸ್ತಿನ ಕಟ್ಟಡಗಳು ಕುಸಿತವಾಗಿದ್ದು ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಹಿನ್ನೆಲೆಯಲ್ಲಿ ಗೌರವ್ ಗುಪ್ತಾ ಇದೀಗ ಅಧಿಕಾರಿಗಳಿಗೆ ಹೀಗೆ ಸೂಚನೆ ಕೊಟ್ಟಿದ್ದಾರೆ.

ಬೆಂಗಳೂರಿನ ಬಮೂಲ್ ಕ್ವಾರ್ಟರ್ಸ್‌ನಲ್ಲಿ ಕಟ್ಟಡ ಕುಸಿತ ಘಟನೆಗೆ ಸಂಬಂಧಿಸಿ ಕಟ್ಟಡ ಕುಸಿತ ಸ್ಥಳಕ್ಕೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಭೇಟಿ ನೀಡಿದ್ದಾರೆ. ಕಟ್ಟಡ ಪರಿಶೀಲನೆ ಬಳಿಕ ಕೆಎಂಎಫ್ ಎಂಡಿ ಸತೀಶ್ ಮಾತನಾಡಿದ್ದಾರೆ. 2016 ರಲ್ಲಿ ಕೆಎಂಎಫ್ ಇಂಜಿನಿಯರ್​ಗಳ ತಂಡ ಕಟ್ಟಡ ಪರಿಶೀಲಿಸಿತ್ತು. 10 ವರ್ಷ ವಾಸಿಸಲು ಯೋಗ್ಯ ಎಂದು ಪ್ರಮಾಣಪತ್ರ ನೀಡಿತ್ತು. ಹೀಗಾಗಿ, ನಿವಾಸಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ನಷ್ಟದ ಬಗ್ಗೆ ಪರಿಶೀಲನಾ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು. ಯಾರೂ ಸಹ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಘಟನೆ ಸಂಬಂಧ ಮನೆಯಲ್ಲಿ ಅಥವಾ ಕಟ್ಟಡದಲ್ಲಿ ಇದ್ದ ಎಲ್ಲರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಯಾವುದೇ ರೀತಿಯ ಅವಘಡ ಸಂಭವಿಸಿಲ್ಲ. ದುರದೃಷ್ಟವಶಾತ್ ಕಟ್ಟಡ ಕುಸಿದಿದೆ. ನಿವಾಸಿಗಳಿಗೆ ಎಲ್ಲಾ ರೀತಿಯಿಂದಲೂ ಬೆಂಬಲ ನೀಡುತ್ತೇವೆ. ಅನಾಹುತದಲ್ಲಿ ಆಗಿರುವ ನಷ್ಟ ಬಗ್ಗೆ ಪರಿಶೀಲನೆ ವರದಿ ಬಂದ ಬಳಿಕ ಈ ಬಗ್ಗೆ ಕ್ರಮ ಕೈಗೊಳ್ಳಲಾವುದು. ಕೆಎಂಎಫ್ ನಿಂದ ಬೇಕಾದ ಎಲ್ಲಾ ರೀತಿಯಿಂದಲೂ ಬೆಂಬಲ ನೀಡುತ್ತೇವೆ. ಯಾರೂ ಸಹ ಆತಂಕಪಡುವ ಅಗತ್ಯವಿಲ್ಲ ಎಂದು ಸತೀಶ್ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಮೂರು ಅಂತಸ್ತಿನ ಕಟ್ಟಡ ಕುಸಿತ! ಮಗುವನ್ನು ರಕ್ಷಿಸುವುದಕ್ಕೆ ಕೆಳಗೆ ಎಸೆದ ಪೋಷಕರು

ಇದನ್ನೂ ಓದಿ: ಬೆಂಗಳೂರು: ಲಕ್ಕಸಂದ್ರದಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ; ಕಟ್ಟಡ ಮಾಲೀಕನ ವಿರುದ್ಧ ಎಫ್​ಐಆರ್ ದಾಖಲು

Published On - 2:51 pm, Tue, 28 September 21