BBMP Election: ಬಿಬಿಎಂಪಿ ವಾರ್ಡ್​ ಮರು ವಿಂಗಡಣೆ, ರಾಮಲಿಂಗಾ ರೆಡ್ಡಿ ನೇತೃತ್ವದ ಸಮಿತಿಯ ವರದಿಯಲ್ಲಿ ಏನಿದೆ? ಚುನಾವಣೆ ಯಾವಾಗ? ಇಲ್ಲಿದೆ ವಿವರ

|

Updated on: Jun 09, 2023 | 9:03 AM

ಬಿಬಿಎಂಪಿ ವಾರ್ಡ್​ಗಳ ಸಂಖ್ಯೆಯನ್ನು 250 ಕ್ಕೇರಿಸಲು ಕಾಂಗ್ರೆಸ್ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ. ಈ ಸಂಬಂಧ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದ ಸಮಿತಿ ರಚನೆಯಾಗಿದ್ದು, ನಾಳೆ (ಜೂ.10) ಅಥವಾ ಸೋಮವಾರ ವಾರ್ಡ್ ಮರುವಿಂಗಡಣೆ ವರದಿ ಸಲ್ಲಿಕೆಯಾಗಲಿದೆ.

BBMP Election: ಬಿಬಿಎಂಪಿ ವಾರ್ಡ್​ ಮರು ವಿಂಗಡಣೆ, ರಾಮಲಿಂಗಾ ರೆಡ್ಡಿ ನೇತೃತ್ವದ ಸಮಿತಿಯ ವರದಿಯಲ್ಲಿ ಏನಿದೆ? ಚುನಾವಣೆ ಯಾವಾಗ? ಇಲ್ಲಿದೆ ವಿವರ
ಬಿಬಿಎಂಪಿ
Follow us on

ಬೆಂಗಳೂರು: ಬಿಜೆಪಿ ಆಡಳಿತದಲ್ಲಿದ್ದಾಗ ಬೃಹತ್​​ ಬೆಂಗಳೂರು ಮಹಾನಗರ ಪಾಲಿಕೆಯ (BBMP) ವಾರ್ಡ್​​ಗಳನ್ನು (Ward) ಅನಕ್ಕೂಲಕ್ಕೆ ತಕ್ಕಂತೆ ವಿಗಂಡಿಸಿ, 198 ವಾರ್ಡ್​​​ಗಳನ್ನು 243 ಕ್ಕೆ ಏರಿಸಿತ್ತು. ಈಗ ಕಾಂಗ್ರೆಸ್ (Congress) ಅಧಿಕಾರಕ್ಕೆ ಬರುತ್ತಿದ್ದಂತೆ ಮರುವಿಂಗಡಣೆಗೆ ಯೋಜನೆ ರೂಪಿಸಿದೆ ಎನ್ನಲಾಗಿದೆ. ಬಿಬಿಎಂಪಿ ವಾರ್ಡ್​ಗಳ ಸಂಖ್ಯೆಯನ್ನು 250 ಕ್ಕೇರಿಸಲು ಕಾಂಗ್ರೆಸ್ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ. ಈ ಸಂಬಂಧ ಸಚಿವ ರಾಮಲಿಂಗಾ ರೆಡ್ಡಿ (Ramlinga Reddy) ನೇತೃತ್ವದ ಸಮಿತಿ ರಚನೆಯಾಗಿದ್ದು, ನಾಳೆ (ಜೂ.10) ಅಥವಾ ಸೋಮವಾರ ವಾರ್ಡ್ ಮರುವಿಂಗಡಣೆ ವರದಿ ಸಲ್ಲಿಕೆಯಾಗಲಿದೆ.

ಈ ವರದಿಯನ್ನು ಸರ್ಕಾರ ಒಪ್ಪಿದರೇ ಮುಂದಿನ ಮೂರು ತಿಂಗಳಲ್ಲಿಯೇ ಪಾಲಿಕೆ ಚುನಾವಣೆ ನಡೆಯುವುದು ಪಕ್ಕಾ ಎನ್ನಲಾಗುತ್ತಿದೆ. ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದ ಪೂರ್ವ ಚುನಾವಣಾ ಸಮಿತಿ ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆ ಕುರಿತು ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಿದೆ. ಸಮಿತಿ ಬೆಂಗಳೂರಿನ ಸಚಿವರು, ಶಾಸಕರು, ಕಾಂಗ್ರೆಸ್ ಮಾಜಿ ಮೇಯರ್​​ ಹಾಗೂ ಸದಸ್ಯರಿಂದ ಅಭಿಪ್ರಾಯ ಸಂಗ್ರಹಿಸಿ ಸರ್ಕಾರ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ವರದಿ ಸಲ್ಲಿಸಲಾಗುತ್ತದೆ.

ಇದನ್ನೂ ಓದಿ: ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಠಕ್ಕರ್ ನೀಡಲು ಕಾಂಗ್ರೆಸ್ ಹೊಸ ತಂತ್ರ; ಏನದು?

ವರದಿಯಲ್ಲಿ ಏನಿದೆ..?

ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆಗೆ ಮತ್ತೆ ಕೈಹಾಕದಿರುವ ನಿರ್ಧಾರ ಸಾಧ್ಯತೆ ಇದ್ದು, 243 ವಾರ್ಡ್‌ಗಳಿಗೆ ಚುನಾವಣೆ ನಡೆಸಲು ಚಿಂತನೆ ನಡೆಸಲಾಗಿದೆ. ಅಲ್ಲದೇ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಲು ಬಿಬಿಎಂಪಿ ಮಾಜಿ ಸದಸ್ಯರು ಮನವಿ ಮಾಡಿದ್ದಾರೆ. ಆದರೆ ಕಾಯ್ದೆ ತಿದ್ದುಪಡಿ ಮಾಡಿ 243 ವಾರ್ಡ್‌ಗಳ ಅಧಿಸೂಚನೆ ಹೊರಡಿಸುವುದು ಕಷ್ಟವಾಗಿದೆ. ಕಾನೂನಾತ್ಮಕ ಹೋರಾಟಕ್ಕೆ ಮುಂದಾದರೇ ಚುನಾವಣೆಗೆ ತುಂಬಾ ಸಮಯ ಹಿಡಯುತ್ತೆ ಹೀಗಾಗಿ 243 ವಾರ್ಡ್​​​ಗಳಿಗೆಯೇ ಚುನಾವಣೆ ನಡೆಸುವ ಸಾಧ್ಯತೆ ಇದೆ.

ವಾರ್ಡ್ ವಿಗಂಡನೆಯಲ್ಲಿನ ಸಮಸ್ಯೆಯನ್ನು ಮೀಸಲಾತಿಯಲ್ಲಿ ಸರಿಪಡಿಸಿಕೊಳ್ಳುವ ತಂತ್ರ ರೂಪಿಸಲಾಗಿದೆ. ಈ ವರ್ಷದ ಅಂತ್ಯಕ್ಕೆ ಚುನಾವಣೆ ಪ್ರಕ್ರಿಯೆ ಮುಗಿಸುವಂತೆ ಸಲಹೆ ನೀಡಲಾಗಿದೆ. ಮುಂದಿನ ಮೂರು ತಿಂಗಳದೊಳಗೆ ಬಿಬಿಎಂಪಿ ಚುನಾವಣೆ ನಡೆಸಲು ಮನವಿ ಮಾಡಲಾಗಿದೆ. ಕಾಂಗ್ರೆಸ್‌ ಪರ ಅಲೆ ಇದೆ ಕೂಡಲೇ ಚುನಾವಣೆ ನಡಿಸಿದರೇ ಅಧಿಕಾರ ಪಡೆಯಬಹುದು ಅಂತ ಸದಸ್ಯರು ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ