Bengaluru News: ನಗರವಾಸಿಗಳಿಗಾಗಿ ಬಿಬಿಎಂಪಿ ಪರಿಚಯಿಸಿದೆ ಕ್ಯೂಆರ್​​ ಕೋಡ್ ಸ್ಕ್ಯಾನರ್‌; ಏನಿದರ ವಿಶೇಷತೆ ಇಲ್ಲಿದೆ ಮಾಹಿತಿ ​

ಸಾರ್ವಜನಿಕನ ಸಂಸ್ಥೆಗಳ ಅಧಿಕಾರಿಗಳನ್ನು ಒಂದೇ ವೇದಿಕೆ ಮೂಲಕ ಸಂಪರ್ಕಿಸುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ದಕ್ಷಿಣ ವಲಯದ ಬೀದಿಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್‌ಗಳನ್ನು ಅಂಟಿಸಲಾಗುತ್ತಿದೆ.

Bengaluru News: ನಗರವಾಸಿಗಳಿಗಾಗಿ ಬಿಬಿಎಂಪಿ ಪರಿಚಯಿಸಿದೆ ಕ್ಯೂಆರ್​​ ಕೋಡ್ ಸ್ಕ್ಯಾನರ್‌; ಏನಿದರ ವಿಶೇಷತೆ ಇಲ್ಲಿದೆ ಮಾಹಿತಿ ​
ಕ್ಯೂಆರ್​​ ಕೋಡ್​​ ಸ್ಕ್ಯಾನ್​​ ಅಂಟಿಸುತ್ತಿರುವುದು
Follow us
ವಿವೇಕ ಬಿರಾದಾರ
|

Updated on: Jul 07, 2023 | 11:18 AM

ಬೆಂಗಳೂರು: ಸಾರ್ವಜನಿಕನ ಸಂಸ್ಥೆಗಳ ಅಧಿಕಾರಿಗಳನ್ನು ಒಂದೇ ವೇದಿಕೆ ಮೂಲಕ ಸಂಪರ್ಕಿಸುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ದಕ್ಷಿಣ ವಲಯದ ಬೀದಿಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್‌ಗಳನ್ನು (QR Code Scaner) ಅಂಟಿಸಲಾಗುತ್ತಿದೆ. ಈ ಮೂಲಕ ನಾಗರಿಕ ಸೇವಾ ಸಂಸ್ಥೆ ಅಧಿಕಾರಿಗಳನ್ನು ತಲುಪಲು ಒಂದು ಉತ್ತಮ ವೇದಿಕೆಯಾಗಿದೆ. ಇದು ಜನರು ಮತ್ತು ಸರ್ಕಾರಿ ಅಧಿಕಾರಿಗಳ ಅಂತರವನ್ನು ದೂರವನ್ನು ಕಡಿಮೆ ಮಾಡುತ್ತದೆ. ತಿಂಗಳ ಹಿಂದೆ ಆರಂಭವಾದ ಈ ಯೋಜನೆಗೆ ಇಲ್ಲಿಯವರೆಗೆ ಸುಮಾರು 15 ಲಕ್ಷ ರೂ ಖರ್ಚಾಗಿದೆ.

ಬಿಬಿಎಂಪಿ ದಕ್ಷಿಣ ವಲಯದ ಆಯುಕ್ತ ಜಯರಾಮ ರಾಯಪುರ ಅವರು ಮಾತನಾಡಿ ವಲಯದಲ್ಲಿ 10,500 ಬೀದಿಗಳಿದ್ದು, ಈಗಾಗಲೇ 7,500 ಕ್ಯೂಆರ್ ಕೋಡ್‌ಗಳನ್ನು ರಸ್ತೆ ಫಲಕಗಳಲ್ಲಿ ಅಂಟಿಸಲಾಗಿದೆ. ದಕ್ಷಿಣ ವಲಯವು ಆರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಅವು ಟಿಎಂ ಲೇಔಟ್, ಜಯನಗರ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ ಮತ್ತು ವಿಜಯನಗರ.

ಏತನ್ಮಧ್ಯೆ, ಬೆಂಗಳೂರಿನ ಎಲ್ಲಾ ಬಿಬಿಎಂಪಿ ವಲಯಗಳ 13,000 ಕಿಮೀ ರಸ್ತೆಗಳಿಗ ಜಾಲವನ್ನು ಕವರ್ ಮಾಡಲು 55,000 ಕ್ಕೂ ಹೆಚ್ಚು ಕ್ಯೂಆರ್ ಕೋಡ್ ಸ್ಕ್ಯಾನರ್‌ಗಳ ಅಗತ್ಯವಿದೆ, ಇದರ ವೆಚ್ಚ 1 ಕೋಟಿ ರೂ. ಇತರ ವಲಯಗಳಲ್ಲಿ ಉಪಕ್ರಮವನ್ನು ಕಾರ್ಯಗತಗೊಳಿಸಲು ಬಿಬಿಎಂಪಿ ಶೀಘ್ರದಲ್ಲೇ ಟೆಂಡರ್‌ಗಳನ್ನು ಕರೆಯಲಿದೆ. ಒಮ್ಮೆ ಸ್ಕ್ಯಾನ್ ಮಾಡಿದ ನಂತರ, ಬಳಕೆದಾರರು BBMP ಎಂಜಿನಿಯರ್‌ಗಳು, ಘನತ್ಯಾಜ್ಯ ನಿರ್ವಹಣಾ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಜೊತೆಗೆ ನಿರ್ದಿಷ್ಟ ರಸ್ತೆಗಳ ಮಾಹಿತಿಯನ್ನು ಒಳಗೊಂಡಿದೆ.

ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ ನೀರಿನ ಕೊರತೆ; ಸಮಸ್ಯೆ ಪರಿಹಾರಕ್ಕೆ 100 ಕೊಳವೆಬಾವಿ ಕೊರೆಯಲು ಪ್ಲ್ಯಾನ್

QR ಕೋಡ್ ಅನ್ನು ಸ್ಕ್ಯಾನ್ ಮಾಡುವುದರಿಂದ ಮರಗಳ ಸಮರುವಿಕೆ, ಚರಂಡಿಗಳ ಹೂಳು ತೆಗೆಯುವಿಕೆ, ರಸ್ತೆಗಳ ನಿರ್ವಹಣೆ ಮತ್ತು ಬೀದಿಯಲ್ಲಿರುವ ಎಲ್ಲಾ ಮನೆಗಳಿಂದ ತ್ಯಾಜ್ಯ ಉತ್ಪಾದನೆಯ ವಿವರಗಳನ್ನು ಒದಗಿಸುತ್ತದೆ; ಬಿಬಿಎಂಪಿ ಆಸ್ತಿ ನಿರ್ವಹಣೆ ಸಮಸ್ಯೆಗಳಿಗೆ ಸಂಪರ್ಕ ವಿವರಗಳು; ಬೀದಿ ಗುಡಿಸುವವರು, ಕಸ ಸಂಗ್ರಹಿಸುವವರು, ಬಿಬಿಎಂಪಿ ವಿದ್ಯುತ್ ಇಲಾಖೆ, ಅರಣ್ಯ ಇಲಾಖೆ, ಬಿಎಸ್​​ಡಬ್ಲೂ ಎಂಜಿನಿಯರಿಂಗ್ ವಿಭಾಗ, ಬಿಬಿಎಂಪಿ ನಿಯಂತ್ರಣ ಕೊಠಡಿ, ಅಗ್ನಿಶಾಮಕ ಇಲಾಖೆ, ಪಶುಸಂಗೋಪನೆ ಮತ್ತು ಆರೋಗ್ಯ ಇಲಾಖೆಗಳ ಸಂಪರ್ಕ ವಿವರಗಳನ್ನು ತಿಳಿಯಬಹುದಾಗಿದೆ.

ಬೀದಿ ದೀಪ ಕೆಲಸ ಮಾಡದಿದ್ದಾಗ ಅಥವಾ ಒಳಚರಂಡಿ ಸಮಸ್ಯೆಗಳು ಎದುರಾದಾಗ ಯಾರನ್ನು ಸಂಪರ್ಕಿಸಬೇಕು ಎಂಬುದು ಸಾಮಾನ್ಯ ನಾಗರಿಕರಿಗೆ ತಿಳಿದಿರುವುದಿಲ್ಲ. ನಾಗರಿಕರು ಈ QR ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ, ಎರಡು-ಮೂರು ಪುಟಗಳು ಪರದೆಯ ಮೇಲೆ ಕಾಣಿಸಿಕೊಳ್ಳುತ್ತವೆ. ನಾಗರಿಕರು ಆಯಾ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.

ಇದಲ್ಲದೆ, ಕ್ಯೂಆರ್ ಕೋಡ್ ಅನ್ನು ಮನೆಯ ಆಸ್ತಿ ತೆರಿಗೆ ವಿವರಗಳೊಂದಿಗೆ ಸಕ್ರಿಯಗೊಳಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ನಾವು ರಸ್ತೆ ಇತಿಹಾಸ ಮತ್ತು ಬೀದಿಯಲ್ಲಿರುವ ಮನೆಗಳ ಆಸ್ತಿ ತೆರಿಗೆಯ ವಿವರಗಳನ್ನು ಪರಿಚಯಿಸುತ್ತೇವೆ. ಅಧಿಕಾರಿಗಳು ಬದಲಾದಾಗ, ನಾವು ಹೊಸ ಸಂಪರ್ಕ ಸಂಖ್ಯೆಗಳೊಂದಿಗೆ ಪುಟವನ್ನು ನವೀಕರಿಸುತ್ತೇವೆ. ಪ್ರಸ್ತುತ, ವೆಬ್‌ಪುಟವು ಪ್ರಾಥಮಿಕ ಶೈಲಿಯನ್ನು ಹೊಂದಿದೆ. ಬ್ಯಾಕೆಂಡ್‌ನಲ್ಲಿ ಮಾಹಿತಿಯನ್ನು ನವೀಕರಿಸಲು ಇನ್‌ಪುಟ್‌ಗಳನ್ನು ಸೇರಿಸುತ್ತಿದ್ದೇವೆ. ಅದನ್ನು ಹೆಚ್ಚು ದೃಢವಾಗಿಸಲು, ನಮಗೆ ಹೆಚ್ಚುವರಿ ಹಣದ ಅಗತ್ಯವಿರುತ್ತದೆ ಎಂದು ಹೇಳಿದರು.

ಪ್ರಾಯೋಗಿಕ ಹಂತದಲ್ಲಿನ ಪರಿಶೀಲನೆಯು ದ್ವಿಭಾಷಾ ಮೋಡ್ ಅನ್ನು ಪರಿಚಯಿಸುವ ಮತ್ತು ವೆಬ್‌ಪುಟದಲ್ಲಿ ಕನ್ನಡವನ್ನು ಸೇರಿಸಲಾಗುವುದು. ಪ್ರಸ್ತುತ, ವೆಬ್‌ಪುಟವು ಮಾಹಿತಿಯನ್ನು ಇಂಗ್ಲಿಷ್‌ನಲ್ಲಿ ಮಾತ್ರ ನೀಡುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ