BBMP ಕಸದ ಲಾರಿ ಹರಿದು ಬಾಲಕಿ ಸಾವು ಪ್ರಕರಣ: ಕರ್ತವ್ಯ ನಿರ್ವಹಣೆಯಲ್ಲಿ ವಿಫಲ ಹಿನ್ನೆಲೆ ಎಇಇ ಅಶೋಕ್ ಬಾಗಿ ಬಿಡುಗಡೆ

| Updated By: ganapathi bhat

Updated on: Mar 26, 2022 | 5:11 PM

BBMP ಆದೇಶಕ್ಕೂ ಅಶೋಕ್ ಬಾಗಿ ಡೋಂಟ್​ ಕೇರ್​ ಎಂದು ಕೆಲಸ ಮಾಡಿದ್ದರು. ಮಾರ್ಚ್‌ 21 ರಂದು ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸಾವನ್ನಪ್ಪಿದ್ದರು. ಹೆಬ್ಬಾಳ ಠಾಣೆಯ ಎದುರು ಬಾಲಕಿ ಅಕ್ಷಯಾ ಎಂಬವರು ಮೃತಪಟ್ಟಿದ್ದರು.

BBMP ಕಸದ ಲಾರಿ ಹರಿದು ಬಾಲಕಿ ಸಾವು ಪ್ರಕರಣ: ಕರ್ತವ್ಯ ನಿರ್ವಹಣೆಯಲ್ಲಿ ವಿಫಲ ಹಿನ್ನೆಲೆ ಎಇಇ ಅಶೋಕ್ ಬಾಗಿ ಬಿಡುಗಡೆ
ಹೆಬ್ಬಾಳದಲ್ಲಿ ಮೃತಪಟ್ಟ ಬಾಲಕಿ ಅಕ್ಷಯಾ
Follow us on

ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸಾವು ಪ್ರಕರಣಕ್ಕೆ ಸಂಬಂಧಿಸಿ ಟಿವಿಸಿ ವಿಭಾಗದಿಂದ ಎಇಇ ಅಶೋಕ್ ಬಾಗಿ ಬಿಡುಗಡೆ ಮಾಡಲಾಗಿದೆ. ಬಿಬಿಎಂಪಿ ಟಿವಿಸಿ ವಿಭಾಗದ ಎಇಇ ಅಶೋಕ್ ಬಾಗಿ ಬಿಡುಗಡೆಗೆ ಸೂಚಿಸಿದ್ರೂ ಕೆಲಸ ಮಾಡ್ತಿದ್ದರು. ಬಿಬಿಎಂಪಿ ಆದೇಶ ಮಾಡಿದರೂ ಅದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಪಾದಚಾರಿ ಕೆಳಸೇತುವೆ, ಫ್ಲೈಓವರ್ ನಿರ್ವಹಣೆಯಲ್ಲಿ ವಿಫಲವಾಗಿದ್ದರು. ಕರ್ತವ್ಯ ನಿರ್ವಹಣೆಯಲ್ಲಿ ವಿಫಲ ಹಿನ್ನೆಲೆ ಬಿಡುಗಡೆಗೊಳಿಸಿದ್ದರು. BBMP ಆದೇಶಕ್ಕೂ ಅಶೋಕ್ ಬಾಗಿ ಡೋಂಟ್​ ಕೇರ್​ ಎಂದು ಕೆಲಸ ಮಾಡಿದ್ದರು. ಮಾರ್ಚ್‌ 21 ರಂದು ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸಾವನ್ನಪ್ಪಿದ್ದರು. ಹೆಬ್ಬಾಳ ಠಾಣೆಯ ಎದುರು ಬಾಲಕಿ ಅಕ್ಷಯಾ ಎಂಬವರು ಮೃತಪಟ್ಟಿದ್ದರು. ಪ್ರಕರಣಕ್ಕೆ ಸ್ಥಳೀಯ ಅಧಿಕಾರಿ ಅಶೋಕ ಬಾಗಿ ಬೇಜವಾಬ್ದಾರಿ ಕಾರಣ ಎಂದು ಬಿಬಿಎಂಪಿ ಹೇಳಿದೆ.

ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸಾವನ್ನಪ್ಪಿದ ಹಿನ್ನಲೆಯಲ್ಲಿ ಮೃತ ಅಕ್ಷಯಾ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ಹಣವನ್ನು ಬಿಬಿಎಂಪಿ (BBMP) ಘೋಷಣೆ ಮಾಡಿತ್ತು. ಮೊನ್ನೆ (ಮಾರ್ಚ್​ 21) ಹೆಬ್ಬಾಳದ ಬಳಿ ಬಿಬಿಎಂಪಿ ಕಸದ ಲಾರಿ (Lorry) ಹರಿದು ಬಾಲಕಿ ಅಕ್ಷಯಾ ಸಾವನ್ನಪ್ಪಿದ್ದರು. ಹೀಗಾಗಿ ಅಕ್ಷಯಾ ಕುಟುಂಬಸ್ಥರಿಗೆ ಐದು ಲಕ್ಷ ರೂಪಾಯಿ ಪರಿಹಾರದ ಚೆಕ್‌ (Check) ನೀಡಲು ಬಿಬಿಎಂಪಿ ಅಧಿಕಾರಿಗಳು ಬಂದಿದ್ದರು. ಆದರೆ ಬಿಬಿಎಂಪಿ ಪರಿಹಾರದ ಚೆಕ್​ ಅನ್ನು ಅಕ್ಷಯಾ ಕುಟುಂಬ ತಿರಸ್ಕರಿಸಿದೆ.

ಐದು ಲಕ್ಷ ಪರಿಹಾರ ನೀಡಲು ಬಂದಿದ್ದ ಬಿಬಿಎಂಪಿ ಅಧಿಕಾರಿಗಳಲ್ಲಿ ಪರಿಹಾರದ ಮೊತ್ತ ಏರಿಕೆ ಮಾಡುವಂತೆ ಅಕ್ಷಯಾ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಅಲ್ಲದೇ ಈಗ ಬಿಬಿಎಂಪಿ ಅಧಿಕಾರಿಗಳು ತಂದ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ಪಡೆಯದೇ ಅಕ್ಷಯಾ ಕುಟುಂಬಸ್ಥರು ವಾಪಸ್​ ಕಳುಹಿಸಿದ್ದಾರೆ.

ಹೇಗಾಯಿತು ದುರ್ಘಟನೆ:
ಅಂಡರ್ ಪಾಸ್ ಇದ್ದರೂ ಬಳಸದೇ ರಸ್ತೆ ದಾಟಲು ಓರ್ವ ಮಹಿಳೆ ಮತ್ತು ಬಾಲಕಿ ಸೇರಿ ಮೂವರು ಮುಂದಾಗಿದ್ದರು. ಈ ವೇಳೆ ಮುಂದೆ ಬಂದ ಬೈಕ್ ಮತ್ತು ಕಾರ್ ಗಳನ್ನು ನಿಲ್ಲಿಸಿದ್ದರು. ಆದರೆ ಅದರ ಹಿಂಬದಿಯಲ್ಲಿ ವೇಗವಾಗಿ ಬರುತಿದ್ದ ಬಿಬಿಎಂಪಿ ಲಾರಿ ಡಿಕ್ಕಿ ಹೊಡೆದು ಅನಾಹುತ ಸಂಭವಿಸಿತ್ತು. ಮತ್ತೋರ್ವ ಪಾದಚಾರಿ ಸೌಮ್ಯ (28) ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆದಿದ್ದರು. ಗಾಯಾಳು ಬೈಕ್ ಸವಾರ ವಿಕಾಸ್ (40) ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಅಂಡರ್ ಪಾಸ್​ನಲ್ಲಿ ನೀರು ನಿಂತಿತ್ತು
ಮಳೆ ನೀರಿನಿಂದ ಅಂಡರ್ ಪಾಸ್​ನಲ್ಲಿ ನೀರು ನಿಂತಿತ್ತು. ಹಾಗಾಗಿ ಜನರಿಗೆ ಅಂಡರ್ ಪಾಸ್ ಬಳಸುವುದು ಸಾಧ್ಯವಾಗುತ್ತಿರಲಿಲ್ಲ. ಅನಿವಾರ್ಯವಾಗಿ ಹೆದ್ದಾರಿ ರಸ್ತೆ ಮೇಲೆಯೆ ನಡೆದಾಡುತ್ತಿದ್ದಾರೆ. ಈ ವೇಳೆ ಈ ದಾರುಣ ಘಟನೆ ನಡೆದಿದೆ.

ಇದನ್ನೂ ಓದಿ: BBMP: ಬಿಬಿಎಂಪಿ ಕಾರ್ಯವೈಖರಿ ಬಗ್ಗೆ ಮತ್ತೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

ಇದನ್ನೂ ಓದಿ: ಅಂಡರ್ ಪಾಸ್​ನಲ್ಲಿ ನೀರು ಇರಲಿಲ್ಲ ಅಂದಿದ್ದರೆ ನನ್ನ ಮಗಳು ವಾಪಸ್ ಬರುತ್ತಿದ್ದಳು; ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಮೃತಪಟ್ಟ ಬಾಲಕಿ ತಾಯಿ ಕಣ್ಣೀರು