ಸಂವಿಧಾನದಲ್ಲಿ ಇರುವ ವಿಚಾರಗಳೇ ಬೈಬಲ್, ಕುರಾನ್, ಭಗವದ್ಗೀತೆಯಲ್ಲಿ ಇದೆ: ಡಿಕೆ ಶಿವಕುಮಾರ್
ಸಂವಿಧಾನದಲ್ಲಿ ಇರುವ ವಿಚಾರಗಳೇ ಬೈಬಲ್, ಕುರಾನ್, ಭಗವದ್ಗೀತೆಯಲ್ಲಿ ಇದೆ. ಸಂವಿಧಾನದಲ್ಲಿನ ವಿಚಾರಗಳಿಗೆ ಕಾಂಗ್ರೆಸ್ ಬೆಲೆ ಕೊಡುತ್ತದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಹಿಜಾಬ್ ವಿಚಾರದಲ್ಲಿ ಮಕ್ಕಳಿಗೆ ಮನವರಿಕೆ ಮಾಡಬೇಕು. ತಂದೆ ತಾಯಿ, ಗುರುಗಳು ಮಕ್ಕಳ ಮನವೊಲಿಸಬೇಕು ಅಷ್ಟೇ. ಕೋರ್ಟ್(Court) ತೀರ್ಪನ್ನು ಕೆಲವರು ಒಪ್ಪುತ್ತಾರೆ. ಕೆಲವರು ಒಪ್ಪಲ್ಲ. ನ್ಯಾಯಾಲಯದ ತೀರ್ಪು ಸರಿಯಿಲ್ಲ ಎಂದು ಹೇಳುವುದಿಲ್ಲ. ಈ ಕೋರ್ಟ್ ತೀರ್ಪಿನ ಮೇಲೆ ಸುಪ್ರೀಂ ಕೋರ್ಟ್ಗೂ ಹೋಗಲು ಅವಕಾಶವಿದೆ. ಇನ್ನೂ ಸಂವಿಧಾನದಲ್ಲಿ (Constitution) ಇರುವ ವಿಚಾರಗಳೇ ಬೈಬಲ್, ಕುರಾನ್, ಭಗವದ್ಗೀತೆಯಲ್ಲಿ ಇದೆ. ಸಂವಿಧಾನದಲ್ಲಿನ ವಿಚಾರಗಳಿಗೆ ಕಾಂಗ್ರೆಸ್ ಬೆಲೆ ಕೊಡುತ್ತದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಹೇಳಿಕೆ ನೀಡಿದ್ದಾರೆ.
ಸ್ವಾಮೀಜಿಗಳ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರ
ಆ ವಿಷಯದ ಬಗ್ಗೆ ಅವರೇ ಉತ್ತರ ಕೊಡುತ್ತಾರೆ. ಈಗಾಗಲೇ ಅವರು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಅವರಿಗೆ ಎಲ್ಲ ಧರ್ಮ, ಸ್ವಾಮೀಜಿಗಳ ಮೇಲೆ ಗೌರವ ಇದೆ. ಅವರು ಸಿಎಂ ಆಗಿದ್ದಾಗ ಎಲ್ಲ ಧರ್ಮಗಳಿಗೂ ಬೇಕಾದಷ್ಟು ಸಹಾಯ ಮಾಡಿದ್ದಾರೆ. ಅವರು ಏನು ಮಾತಾಡಿದ್ದಾರೋ ಅದಕ್ಕೆ ಅವರೇ ಉತ್ತರ ಕೊಡುತ್ತಾರೆ ಎಂದು ಹಿಜಾಬ್ ಬಗ್ಗೆ ಸಿದ್ದರಾಮಯ್ಯ ಮಾತಾಡಿದ ಹೇಳಿಕೆ ಬಗ್ಗೆ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ಹಿಜಾಬ್ ಕುರಿತಾದ ಸಿದ್ದರಾಮಯ್ಯ ಹೇಳಿಕೆಯನ್ನು ಬಿಜೆಪಿ ಸ್ನೇಹಿತರು ರಾಜಕೀಯ ಮಾಡುತ್ತಿದ್ದಾರೆ. ಈಶ್ವರಪ್ಪ ಹೇಳಿಕೆಯನ್ನ ನಾನು ಗಮನಿಸಿದ್ದೇನೆ. ಅವರೇ ಕ್ಷಮೆ ಕೇಳಿಲ್ಲ. ನಿನ್ನೆ ಅವರೇ ಸ್ಷಷ್ಟವಾಗಿ ಹೇಳಿದ್ದಾರೆ. ಸ್ವಾಮೀಜಿಗಳಿಗೆ ಅಗೌರವ ಕೊಟ್ಟಿಲ್ಲ ಎಂದು. ಸ್ವಾಮೀಜಿಗಳ ಬಗ್ಗೆ ನಮಗೆ ಅಪಾರವಾದ ಗೌರವ ಇದೆ. ನಾವು ಯಾರ ಮನಸ್ಸಿಗೆ ನೋವಿಸುವುದಿಲ್ಲ. ಸಿದ್ದರಾಯಮಯ್ಯ ಸಹ ಯಾರ ಮನಸ್ಸಿಗೆ ನೋವಿಸುವ ಉದ್ದೇಶ ವಿಲ್ಲ. ಬಿಜೆಪಿಯವರು ಒಂದಕ್ಕೆ ಎರಡು ಸೇರಿಸಿ ಬಣ್ಣ ಹಚ್ಚುತ್ತಿದ್ದಾರೆ. ಕಾಶ್ಮೀರ ಫೈಲ್ ಮಾಡಿಕೊಳ್ಳಿ, ಹಿಜಾಬ್ ಇಶ್ಯು ಆದರೂ ಮಾಡಿಕೊಳ್ಳಿ. ಚುನಾವಣೆ ಬರ್ತಿದೆ ಅಂತ ಬಿಜೆಪಿ ಅಂಜೆಂಡಾ ಇಟ್ಟಿಕೊಂಡು ಬರ್ತಿದೆ. ದೇಶ ಇಬ್ಘಾಗ ಮಾಡಲು ಎಲ್ಲಾವನ್ನ ಹುಟ್ಟುಹಾಕುತ್ತಿದೆ. ನಮ್ಮದು ಸಂವಿಧಾನ, ರಾಷ್ಟ್ರಧ್ವಜನೇ ನಮ್ಮ ಧರ್ಮ. ಸಂವಿಧಾನಾನೇ ನಮ್ಮಗೆ ಭಗವದ್ಗೀತೆ, ಕುರಾನ್, ಬೈಬಲ್ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸ್ವಾಮೀಜಿಗಳ ಬಟ್ಟೆ ಹಿಜಾಬ್ಗೆ ಹೋಲಿಸಿ ಹೇಳಿಕೆ ವಿಚಾರ: ಟ್ವೀಟ್ ಮಾಡಿ, ಅಪಪ್ರಚಾರವೆಂದ ವಿಪಕ್ಷ ನಾಯಕ ಸಿದ್ದರಾಮಯ್ಯ!
ಸ್ವಾಮೀಜಿಗಳು ತಲೆಯ ಮೇಲೆ ಬಟ್ಟೆ ಹಾಕುವುದನ್ನು ಪ್ರಶ್ನಿಸಿದ್ದ ಸಿದ್ದರಾಮಯ್ಯರನ್ನ ಸಮರ್ಥಿಸಿಕೊಂಡ ಪುತ್ರ ಡಾ. ಯತೀಂದ್ರ
Published On - 3:37 pm, Sat, 26 March 22