ಅಂಡರ್ ಪಾಸ್ನಲ್ಲಿ ನೀರು ಇರಲಿಲ್ಲ ಅಂದಿದ್ದರೆ ನನ್ನ ಮಗಳು ವಾಪಸ್ ಬರುತ್ತಿದ್ದಳು; ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಮೃತಪಟ್ಟ ಬಾಲಕಿ ತಾಯಿ ಕಣ್ಣೀರು
ತುಂಬಾ ಚೆನ್ನಾಗಿ ಓದುತ್ತಿದ್ದಳು. ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದಳು. ತಾಯಿ ಬಳಿ ಚೆನ್ನಾಗಿ ಓದಿ ರ್ಯಾಂಕ್ ಬರ್ತಿನಿ. ಯಾವ ಟ್ಯೂಷನ್ ಬೇಡ, ಬುಕ್ಸ್ಗಳನ್ನ ಕೊಡಿಸಿ ಅಂತಾ ಹೇಳಿದ್ದಳು. ಆದರೆ ಬಿಬಿಎಂಪಿ ಮಾಡಿದ ಎಡವಟ್ಟಿಗೆ ಬಾಲಕಿ ಅಕ್ಷಯಾ ಬಲಿಯಾಗಿದ್ದಾಳೆ.
ತುಮಕೂರು: ಬಿಬಿಎಂಪಿ (BBMP) ಕಸದ ಲಾರಿ ಡಿಕ್ಕಿಯಾಗಿ ಮೃತಪಟ್ಟ ಬಾಲಕಿ ಅಕ್ಷಯಾ ಅಂತ್ಯಕ್ರಿಯೆ ಇಂದು ತುಮಕೂರು (Tumkur) ಜಿಲ್ಲೆ ಮಧುಗಿರಿ ತಾಲೂಕಿನ ಚಿಕ್ಕದಾಳವಟ್ಟದಲ್ಲಿ ನಡೆಯಲಿದೆ. ಮಗಳ ಮೃತದೇಹದ ಮುಂದೆ ತಂದೆ, ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಬಾಲಕಿ ಮೃತದೇಹ ತಡರಾತ್ರಿ ಸ್ಚಗ್ರಾಮಕ್ಕೆ ಆಗಮಿಸಿದೆ. ಇಂದು ಬೆಳಿಗ್ಗೆ 10 ಗಂಟೆ ಬಳಿಕ ಅಂತ್ಯಕ್ರಿಯೆ ನಡೆಯಲಿದೆ. ಮಗಳನ್ನು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿರುವ ತಾಯಿ ಗೀತಾ, ಅಂಡರ್ ಪಾಸ್ನಲ್ಲಿ ನೀರು ಇರಲಿಲ್ಲ ಅಂದಿದ್ದರೆ ನನ್ನ ಮಗಳು ವಾಪಸ್ ಬರುತ್ತಿದ್ದಳು. ರಸ್ತೆ ದಾಟಲು ಹೋಗಿ ವಾಪಸ್ ಬಂದಿಲ್ಲ ಎಂದರು.
ತುಂಬಾ ಚೆನ್ನಾಗಿ ಓದುತ್ತಿದ್ದಳು. ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದಳು. ತಾಯಿ ಬಳಿ ಚೆನ್ನಾಗಿ ಓದಿ ರ್ಯಾಂಕ್ ಬರ್ತಿನಿ. ಯಾವ ಟ್ಯೂಷನ್ ಬೇಡ, ಬುಕ್ಸ್ಗಳನ್ನ ಕೊಡಿಸಿ ಅಂತಾ ಹೇಳಿದ್ದಳು. ಆದರೆ ಬಿಬಿಎಂಪಿ ಮಾಡಿದ ಎಡವಟ್ಟಿಗೆ ಬಾಲಕಿ ಅಕ್ಷಯಾ ಬಲಿಯಾಗಿದ್ದಾಳೆ ಅಂತ ತಂದೆ ನರಸಿಂಹ ಮೂರ್ತಿ ಕಣ್ಣೀರಾಕಿದ್ದಾರೆ. ನರಸಿಂಹ ಮೂರ್ತಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲಕ ಕಮ್ ನಿರ್ವಾಹಕ ಆಗಿದ್ದಾರೆ.
ಘಟನೆ ಬಗ್ಗೆ ವಿವರಿಸಿದ ಮೃತಳ ಸಹೋದರಿ: ಘಟನೆ ಬಗ್ಗೆ ಮೃತಳ ಸಹೋದರಿ ಸಂಧ್ಯಾ ವಿವರಿಸಿದ್ದಾಳೆ. ನಾವು ಹೆಬ್ಬಾಳದಲ್ಲಿ ರಸ್ತೆ ದಾಟುತ್ತಿದ್ದಿವಿ. ಈ ವೇಳೆ ಬಿಬಿಎಂಪಿ ಕಸದ ಲಾರಿ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ನಮ್ಮ ಅಕ್ಕ ಅಕ್ಷಯಾ ಅಲ್ಲೆ ಸಾವನ್ನಪ್ಪಿದ್ದಾಳೆ. ಇದಕ್ಕೆ ನೇರ ಹೊಣೆ ಬಿಬಿಎಂಪಿ. ಮಳೆಯಿಂದ ಅಂಡರ್ ಪಾಸ್ನಲ್ಲಿ ನೀರು ತುಂಬಿಕೊಂಡಿತ್ತು. ಹೀಗಾಗಿ ನಾವು ಜೊತೆಗೆ ನಾಲ್ಕೈದು ಜನರು ರಸ್ತೆ ದಾಟುತ್ತಿದ್ದಿವಿ. ಬಿಬಿಎಂಪಿಯವರಿಗೆ ಶಿಕ್ಷೆ ಆಗಬೇಕು. ಜೈಲಿಗೆ ಹಾಕಬೇಕು ಅಂತ ಆಕ್ರೋಶ ಹೊರಹಾಕಿದ್ದಾಳೆ.
ಕಣ್ಣೀರು ಹಾಕಿದ ಮಹಿಳಾ ಪಿಸಿ: ಬಲಿಯಾದ ಬಾಲಕಿ ಕಂಡು ಮಹಿಳಾ ಪಿಸಿ ಮಾಧುರಿ ಕಣ್ಣೀರು ಹಾಕಿದ್ದಾರೆ. ಮಾಧುರಿ ಬಾಲಕಿ ಪ್ರಾಣ ಬಿಟ್ಟಿದನ್ನು ಕಣ್ಣಾರೆ ಕಂಡಿದ್ದರು. ಮಗುವಿನ ಒದ್ದಾಟ ಕಂಡು ಮಹಿಳಾ ಕಾನ್ಸ್ಟೇಬಲ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಇದನ್ನೂ ಓದಿ
ಹಾಸನದಲ್ಲಿ ಮುಂದುವರಿದ ಕಾಡಾನೆಗಳ ಉಪಟಳ; ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಸಂಚಾರ ನಡೆಸಿದ ಒಂಟಿ ಸಲಗನ ವಿಡಿಯೋ ವೈರಲ್
ಉರುಸ್ ಮೆರವಣಿಗೆಯಲ್ಲಿ ರಾರಾಜಿಸಿದ ಪುನೀತ್ ಫೋಟೋ; ಇಲ್ಲಿದೆ ವಿಡಿಯೋ
Published On - 9:24 am, Tue, 22 March 22