ಪಾವಗಡ ಬಸ್ ಅಪಘಾತ ಪ್ರಕರಣ: ಬಸ್ ಚಾಲಕನಿಗೆ ಜಾಮೀನು ಮಂಜೂರು
130 ಕ್ಕೂ ಹೆಚ್ಚು ಜನರನ್ನ ತುಂಬಿಕೊಂಡು ಬಂದು ಆರು ಜನರ ಸಾವಿಗೆ ಕಾರಣವಾಗಿದ್ದ ಬಸ್ ಚಾಲಕ ರಘುಗೆ ಜಾಮೀನು ಸಿಕ್ಕಿದೆ. ಘಟನೆಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ, 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ತುಮಕೂರು: ಇಲ್ಲಿನ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಯ ಬಳಿ ನಡೆದ ಭೀಕರ ಬಸ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಬಸ್ ಚಾಲಕನಿಗೆ ಜಾಮೀನು ಮಂಜೂರು ಮಾಡಲಾಗಿದೆ. ಪಾವಗಡ ಕೋರ್ಟ್ ನಿಂದ ಜಾಮೀನು ಲಭಿಸಿದೆ. ವಿಚಾರಣೆ ಬಳಿಕ ಪಾವಗಡ ಪೊಲೀಸರು ಚಾಲಕನನ್ನು ಕೋರ್ಟ್ಗೆ ಹಾಜರುಪಡಿಸಿದ್ದರು. ಇದೀಗ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 130 ಕ್ಕೂ ಹೆಚ್ಚು ಜನರನ್ನ ತುಂಬಿಕೊಂಡು ಬಂದು ಆರು ಜನರ ಸಾವಿಗೆ ಕಾರಣವಾಗಿದ್ದ ಬಸ್ ಚಾಲಕ ರಘುಗೆ ಜಾಮೀನು ಸಿಕ್ಕಿದೆ. ಘಟನೆಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ, 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಜಿಲ್ಲೆಯ ಪಾವಗಡದ ಪಳವಳ್ಳಿ ಬಳಿ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿ ಖಾಸಗಿ ಬಸ್ ಚಾಲಕ ರಘು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಚಾಲಕನ ಹೆಸರು ಬಳಸದೆ ಬಸ್ ನಂಬರ್ ಉಲ್ಲೇಖಿಸಿ FIR ದಾಖಲು ಮಾಡಲಾಗಿತ್ತು. KA06 C8933 SVT ಬಸ್ ಚಾಲಕ A1 ಎಂದು ಉಲ್ಲೇಖ ಮಾಡಿ ಪ್ರಕರಣ ದಾಖಲು ಮಾಡಲಾಗಿತ್ತು. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಖಾಸಗಿ ಬಸ್ ಪಲ್ಟಿ ದುರಂತದಲ್ಲಿ ಮೃತರ ಸಂಖ್ಯೆ 6 ಕ್ಕೆ ಏರಿಕೆ ಆಗಿದೆ. 40 ಕ್ಕೂ ಹೆಚ್ಚು ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 7 ಗಾಯಾಳುಗಳಿಗೆ ವಿಕ್ಟೋರಿಯಾ, ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ದುರಂತ ಸಂಭವಿಸಿದ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದರು, ಬಳಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಒಬ್ಬರು ಮೃತಪಟ್ಟಿದ್ದರು. ಚಿಕಿತ್ಸೆ ಫಲಿಸದೆ ರಾತ್ರಿ ವಿಕ್ಟೋರಿಯಾದಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಅಜಿತ್, ಕಲ್ಯಾಣ್, ಶಾನವಾಜ್, ಬಾಬು ವಲಿ ಹಾಗೂ ಒಂದೇ ಕುಟುಂಬದ ಅಮೂಲ್ಯ, ಹರ್ಷಿತಾ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Pavagada Bus Accident: ಟಾಪ್ನಲ್ಲಿ ಜನರನ್ನು ಕೂರಿಸಿಕೊಂಡು ಬಂದ ಬಸ್; ಅಪಘಾತಕ್ಕೂ ಮೊದಲ ವಿಡಿಯೋ ಇಲ್ಲಿದೆ
ಇದನ್ನೂ ಓದಿ: Bus Accident: ಪಾವಗಡದ ಭೀಕರ ಬಸ್ ಅಪಘಾತಕ್ಕೆ ನಾಲ್ಕು ಮುಖ್ಯ ಕಾರಣಗಳು; ಏನದು?
Published On - 12:18 pm, Mon, 21 March 22