ತುಮಕೂರು: ಮಾರ್ಚ್ 19ರಂದು ಬೆಳಗ್ಗೆ ತುಮಕೂರಿನಲ್ಲಿ ದೊಡ್ಡ ದುರಂತ ನಡೆದು ಹೋಗಿದೆ. ವೈಎನ್ ಹೊಸಕೋಟೆಯಿಂದ ಪಾವಗಡಕ್ಕೆ ಹೊರಟಿದ್ದ ಖಾಸಗಿ ಬಸ್, ಪಳವಳ್ಳಿ ಕಟ್ಟೆ ಬಳಿ ಪಲ್ಟಿಯಾಗಿತ್ತು(Pavagada Bus Accident). ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಪೋತಗಾನಹಳ್ಳಿ ನಿವಾಸಿ 21 ವರ್ಷದ ಹರ್ಷಿತಾಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ ರಾತ್ರಿ ಹರ್ಷಿತಾ ಕೊನೆಯುಸಿರೆಳೆದಿದ್ದಾರೆ. ಸದ್ಯ ಘಟನೆ ಸಂಬಂಧ ಬಸ್ ನಿರ್ವಾಹಕ ಮುರುಳಿ ಮಾತನಾಡಿದ್ದು ಅಪಘಾತದ ಬಗ್ಗೆ ವಿವರಿಸಿದ್ದಾರೆ.
ಬಸ್ ನಿರ್ವಾಹಕ ಮುರುಳಿ ಬೇಜವಾಬ್ದಾರಿ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಬಸ್ನಲ್ಲಿ 127 ಜನರಿದ್ದರು. ನಾನು ಬಸ್ನ ಟಾಪ್ ಮೇಲಿದ್ದೆ. ಬಸ್ ಡ್ರೈವರ್ ನಿಧಾನವಾಗಿ ಹೋಗುತ್ತಿದ್ದರು. ಬಸ್ ಮೇಲೆ ಇದ್ದರಿಂದ ಯಾಕೆ ಪಲ್ಟಿ ಆಯ್ತು ಅಂತ ಗೊತ್ತಿಲ್ಲ. ಬೇಡ ಅಂತ ಹತ್ತಿದ್ರು ಜನರೇ ಬಸ್ ಹತ್ತಿದ್ದು ಎಂದು ನಿರ್ವಾಹಕ ಮುರುಳಿ ಬೇಜವಾಬ್ದಾರಿ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಜನರಿಗೆ ಹತ್ತಬೇಡಿ ಅಂತ ಹೇಳಲು ಆಗಲ್ಲ. ನನಗೂ ಗಾಯಗಳಾಗಿವೆ. ನಿನ್ನೆ ಎರಡು ಬಸ್ಗಳು ಬಂದಿರಲಿಲ್ಲ, ಹೀಗಾಗಿ ನಮ್ಮ ಬಸ್ ಫುಲ್ ರಶ್ ಆಗಿದೆ. ನಾನು ಘಟನೆ ನಡೆಯುವಾಗ ಮೇಲೆ ಇದ್ದೆ ಎಂದು ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಬಸ್ ನಿರ್ವಾಹಕ ಮುರುಳಿ ತಿಳಿಸಿದ್ದಾರೆ.
ಇನ್ನು ಮತ್ತೊಂದು ಕಡೆ ಬಸ್ ಸ್ಟೇರಿಂಗ್‌ನ ಬೇರಿಂಗ್ ಕಟ್ ಆದ ಹಿನ್ನೆಲೆ ಅಪಘಾತ ಸಂಭವಿಸಿದೆ ಎಂದು ಪೊಲೀಸರ ವಿಚಾರಣೆ ವೇಳೆ ಬಸ್ ಚಾಲಕ ರಘು ಮಾಹಿತಿ ನೀಡಿದ್ದಾರೆ. ಬಂಧಿತ ಖಾಸಗಿ ಬಸ್ ಚಾಲಕನಿಗೆ ಪಾವಗಡ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದ್ದು ವೈದ್ಯಕೀಯ ಪರೀಕ್ಷೆ ನಂತರ ಜಡ್ಜ್ ಮುಂದೆ ಹಾಜರುಪಡಿಸುವುದಾಗಿ ಪಾವಗಡ ಪೊಲೀಸರು ತಿಳಿಸಿದ್ದಾರೆ.
ಮೃತರ ಕುಟುಂಬಕ್ಕೆ ಒಟ್ಟು 6 ಲಕ್ಷ ಪರಿಹಾರ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸಾರಿಗೆ ಸಚಿವ ಶ್ರೀರಾಮುಲು ಸೇರಿದಂತೆ ಹಲವರು ಆಸ್ಪತ್ರೆಗಳಿಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ರು. ಈ ವೇಳೆ ಮಾತನಾಡಿದ ಶ್ರೀರಾಮುಲು, ಮೃತರ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ಹಾಗೂ ಗಾಯಾಳುಗಳಿಗೆ 50 ಸಾವಿರ ಪರಿಹಾರ ಘೋಷಿಸಿದ್ರು. ಅಲ್ದೆ, ವೈಯಕ್ತಿಕವಾಗಿ 1 ಲಕ್ಷ ಪರಿಹಾರ ವಿತರಿಸೋದಾಗಿ ಹೇಳಿದ್ರು.
ಖಾಸಗಿ ಬಸ್ಗಳ ಲೈಸೆನ್ಸ್ ರದ್ದಿಗೆ ನಿರ್ಧಾರ ಬಸ್ ದುರಂತಕ್ಕೆ ಚಾಲಕನ ನಿರ್ಲಕ್ಷ್ಯ, ಅಜಾಗರೂಕತೆಯೇ ಕಾರಣ ಅಂತಾ ಹೇಳಲಾಗಿದೆ. ಹೀಗಾಗಿ, ಇನ್ಮುಂದೆ ಪಾವಗಡ ಮತ್ತು ತುಮಕೂರು ಭಾಗದಲ್ಲಿ ಖಾಸಗಿ ಬಸ್ಗಳ ಲೈಸೆನ್ಸ್ ರದ್ದು ಮಾಡೋದಾಗಿ ಸಚಿವ ರಾಮುಲು ಹೇಳಿದ್ರು. ಜತೆಗೆ ಈ ಭಾಗದ ಎಲ್ಲಾ ಗ್ರಾಮಗಳಿಗೆ ಇನ್ಮುಂದೆ ಸರ್ಕಾರಿ ಬಸ್ ಬಿಡೋದಾಗಿಯೂ ಭರವಸೆ ನೀಡಿದ್ರು. ಅಲ್ದೆ, ದುರಂತಕ್ಕೆ ಕಾರಣವಾದ ಆರ್ಟಿಒ ಅಧಿಕಾರಿಗಳು ಸೇರಿ ಯಾರೇ ಆಗಿದ್ರೂ, ತನಿಖೆ ನಡೆಸಿ ಕ್ರಮ ಕೈಗೋಳ್ಳೋದಾಗಿ ಹೇಳಿದ್ರು.
ಇದನ್ನೂ ಓದಿ: ಮನುಷ್ಯ ಏಕಾಂಗಿಯಾಗಿ ಬದುಕುವುದಕ್ಕೆ ಸಾಧ್ಯವಿಲ್ಲ; ಸಂಘಜೀವಿಯಾದಾಗ ಸಹಕಾರ ಮುಖ್ಯ: ಬಸವರಾಜ ಬೊಮ್ಮಾಯಿ
ಮತ್ತೊಂದು ದೊಡ್ಡ ಗೆಲುವಿಗಾಗಿ ಕಾದಿರುವ ಆಲಿಯಾ ಭಟ್