ಹಾಸನದಲ್ಲಿ ಮುಂದುವರಿದ ಕಾಡಾನೆಗಳ ಉಪಟಳ; ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಸಂಚಾರ ನಡೆಸಿದ ಒಂಟಿ ಸಲಗನ ವಿಡಿಯೋ ವೈರಲ್
ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಕಾಡಾನೆ ಸಂಚಾರ ನಡೆಸಿದೆ. ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ರಸ್ತೆ ಪಕ್ಕದಲ್ಲೇ ಒಂಟಿಸಲಗ ಸಂಚರಿಸುತ್ತಿದೆ.
ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ (Elephants) ಉಪಟಳ ಮುಂದುವರಿದಿದೆ. ತಡರಾತ್ರಿ ಮನೆಯ ಕಿಟಕಿ ಮುರಿದು ಭತ್ತದ ಚೀಲಗಳನ್ನು ಹೊರಗೆ ಎಳೆದು ಕಾಡಾನೆಗಳು ಭತ್ತ (Paddy) ತಿಂದು ಹಾಕಿವೆ. ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದ ಮಂಜುನಾಥ್ ಎಂಬುವವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಕುಟುಂಬದವರು ಮನೆಯಲ್ಲಿ ಇದ್ದಾಗಲೇ ಕಾಡಾನೆ ದಾಂಧಲೆ ನಡೆಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುತ್ತಿಲ್ಲ ಅಂತ ಸರ್ಕಾರದ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಕಾಡಾನೆ ಸಂಚಾರ ನಡೆಸಿದೆ. ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ರಸ್ತೆ ಪಕ್ಕದಲ್ಲೇ ಒಂಟಿಸಲಗ ಸಂಚರಿಸುತ್ತಿದೆ. ಕೆಂಪುಹೊಳೆ ಸಮೀಪ ಓಡಾಟ ನಡೆಸಿದ ಕಾಡಾನೆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವರ್ಷದ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕ ಕಾಡಾನೆ ದಾಳಿಗೆ ಬಲಿಯಾಗಿದ್ದ. ಶಿರಾಡಿ ಘಾಟ್ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳ ಸಂಚಾರ ಮಾಡುತ್ತವೆ. ಒಂಟಿ ಸಲಗ ಸಂಚಾರದಿಂದ ಸವಾರರಲ್ಲಿ ಭೀತಿ ಹೆಚ್ಚಾಗಿದೆ.
ಇದನ್ನೂ ಓದಿ
ಕಸದ ಲಾರಿಗೆ ಬಾಲಕಿ ಬಲಿ: ಚಾಲಕನ ಬಂಧನ, ಇಂದು ಮೃತಳ ಅಂತ್ಯಕ್ರಿಯೆ
ಬ್ಯಾಂಕ್ ನಿಮ್ಮನ್ನು ಸುಸ್ತಿದಾರ ಎಂದು ಘೋಷಿಸಿಬಿಟ್ಟರೆ ಅದಕ್ಕೆ ಪರ್ಯಾಯ ಏನು?