ಹೆಬ್ಬಾಳ ಬಸ್ ಅಪಘಾತ: ನನ್ನಕ್ಕನ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಲೇಬೇಕು ಅನ್ನುತ್ತಾಳೆ ಅಕ್ಷಯ ತಂಗಿ ಸಂಧ್ಯಾ

ಹೆಬ್ಬಾಳ ಬಸ್ ಅಪಘಾತ: ನನ್ನಕ್ಕನ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಲೇಬೇಕು ಅನ್ನುತ್ತಾಳೆ ಅಕ್ಷಯ ತಂಗಿ ಸಂಧ್ಯಾ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 22, 2022 | 4:03 PM

ಬಿ ಬಿ ಎಮ್ ಪಿಯೇ ಸೋಮವಾರ ನಡೆದ ಅಪಘಾತಕ್ಕೆ ಕಾರಣ ಎಂದು ಸಂಧ್ಯಾ ಹೇಳುತ್ತಾಳೆ. ಸಬ್ ವೇ ಯಲ್ಲಿ ನೀರು ಶೇಖರಣೆಗೊಂಡಿದ್ದರೆ ಜನರಿಗೆ ರಸ್ತೆ ದಾಟುವುದಕ್ಕೆ ಬೇರೆ ಯಾವುದೇ ಪರ್ಯಾಯವಿಲ್ಲ ಅನ್ನೋದು ಪಾಲಿಕೆ ಅಧಿಕಾರಿಗಳಿಗೆ ಗೊತ್ತಿಲ್ಲವೇ ಎಂದು ಸಂಧ್ಯಾ ಕೇಳುತ್ತಾಳೆ.

ತುಮಕೂರು: ಸದಾಶಿವನಗರದ ಶಾಲೆಯೊಂದರಲ್ಲಿ 7 ನೇ ಕ್ಲಾಸ್ ಓದುತ್ತಿರುವ ಈ ಹುಡುಗಿ ಸಂಧ್ಯಾ (Sandhya) ಸೋಮವಾರ ಬೆಂಗಳೂರಿನ ಟಿವಿ9 ವರದಿಗಾರರೊಂದಿಗೆ ಮಾತಾಡಿದ್ದಳು. ಇಂದು ಅಂದರೆ ಮಂಗಳವಾರ ಅವಳು ತನ್ನ ಕುಟುಂಬದ ಸದಸ್ಯರೊಂದಿಗೆ ತುಮಕೂರಲ್ಲಿದ್ದಳು. ನಿನ್ನೆ ಹೆಬ್ಬಾಳದ ಬಸ್ ನಿಲ್ದಾಣದ (Hebbal Bus Stop) ಬಳಿ ರಸ್ತೆ ದಾಟುತ್ತಿದ್ದ ಅವಳ ಅಕ್ಕ ಅಕ್ಷಯಾಗೆ ಬಿ ಬಿ ಎಮ್ ಪಿ (BBMP) ಕಸದ ಟ್ರಕ್ (garbage truck) ಡಿಕ್ಕಿ ಹೊಡೆದ ಕಾರಣ ಅವಳು ಸ್ಥಳದಲ್ಲೇ ಮೃತಪಟ್ಟಿದ್ದಳು. ಆದರೂ ಅವಳ ದೇಹವನ್ನು ಯಲಹಂಕದ ಆಸ್ಪತ್ರೆಯೊಂದಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಬಿ ಎಮ್ ಟಿ ಸಿಯಲ್ಲಿ ಚಾಲಕನಾಗಿ ಸೇವೆ ಸಲ್ಲಿಸುತ್ತಿರುವ ಅಕ್ಷಯಾ ಮತ್ತು ಸಂಧ್ಯಾರ ತಂದೆ ತುಮಕೂರು ಜಿಲ್ಲೆಯವರು. ಹಾಗಾಗಿ ಅಂತಿಮ ಸಂಸ್ಕಾರ ನಡೆಸಲು ಅಕ್ಷಯಾಳ ದೇಹವನ್ನು ಅಲ್ಲಿಗೆ ತೆಗೆದುಕೊಂಡು ಹೋಗಲಾಗಿದೆ.

ಸಂಧ್ಯಾ ಕೂಡ ಅಕ್ಷಯಾ ಸ್ಥಳದಲ್ಲೇ ಸಾವನ್ನಪ್ಪಿದಳು ಅಂತ ಹೇಳುತ್ತಾಳೆ. ಭಾನುವಾರ ರಾತ್ರಿ ಬೆಂಗಳೂರಲ್ಲಿ ಮಳೆ ಸುರಿದ ಕಾರಣ ಹೆಬ್ಬಾಳ ಬಸ್ ನಿಲ್ದಾಣದ ಎದುರುಗಡೆಯಿರುವ ಸಬ್ ವೇ ಯಲ್ಲಿ ಗಲೀಜು ನೀರು ತುಂಬಿಕೊಂಡಿತ್ತು. ಹಾಗಾಗಿ ಅಕ್ಷಯಾ ಮತ್ತು ಸಂಧ್ಯಾ ಸೇರಿದಂತೆ 6 ಶಾಲಾ ಮಕ್ಕಳು ಮಿಡಿಯನ್ ಜಿಗಿದು ರಸ್ತೆ ಕ್ರಾಸ್ ಮಾಡುವ ಪ್ರಯತ್ನದಲ್ಲಿದ್ದಾಗ ಟ್ರಕ್ ಅಕ್ಷಯಾಗೆ ಡಿಕ್ಕಿ ಹೊಡೆದಿದೆ.

ಬಿ ಬಿ ಎಮ್ ಪಿಯೇ ಸೋಮವಾರ ನಡೆದ ಅಪಘಾತಕ್ಕೆ ಕಾರಣ ಎಂದು ಸಂಧ್ಯಾ ಹೇಳುತ್ತಾಳೆ. ಸಬ್ ವೇ ಯಲ್ಲಿ ನೀರು ಶೇಖರಣೆಗೊಂಡಿದ್ದರೆ ಜನರಿಗೆ ರಸ್ತೆ ದಾಟುವುದಕ್ಕೆ ಬೇರೆ ಯಾವುದೇ ಪರ್ಯಾಯವಿಲ್ಲ ಅನ್ನೋದು ಪಾಲಿಕೆ ಅಧಿಕಾರಿಗಳಿಗೆ ಗೊತ್ತಿಲ್ಲವೇ ಎಂದು ಸಂಧ್ಯಾ ಕೇಳುತ್ತಾಳೆ.

ಮಳೆಗಾಲದಲ್ಲಿ ಸದರಿ ಸಬ್ ವೇಯಲ್ಲಿ ಪ್ರತಿದಿನ ನೀರು ಸೇರಿಕೊಳ್ಳುವುದರಿಂದ ಪಾದಾಚಾರಿಗಳು ರಸ್ತೆ ದಾಟಲು ನೆರವಾಗುವ ಹಾಗೆ ಒಂದು ಸ್ಸ್ಕೈವೇಯನ್ನಾದರೂ ಅಲ್ಲಿ ನಿರ್ಮಿಸಬೇಕೆಂಬ ಕನಿಷ್ಟ ಜ್ಞಾನವೂ ಅವರಿಗಿಲ್ಲ, ಅವರಿಗೆ ಶಿಕ್ಷೆಯಾಗಲೇ ಬೇಕು, ಅವರು ನಿರ್ಲಕ್ಷ್ಯ ಧೋರಣೆಯಿಂದ ತನ್ನಕ್ಕನ ಪ್ರಾಣ ಹೋಗಿದೆ ಎಂದು ಅವಳು ಹೇಳುತ್ತಾಳೆ.

ಇದನ್ನೂ ಓದಿ:   ಹೆಬ್ಬಾಳ ಬಸ್ ನಿಲ್ದಾಣ ಬಳಿ ಬಿ ಬಿ ಎಮ್ ಪಿ ಕಸದ ಟ್ರಕ್ ಗುದ್ದಿ 13 ವರ್ಷದ ಶಾಲಾ ಬಾಲಕಿ ಸ್ಥಳದಲ್ಲೇ ಸಾವು