AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಬ್ಬಾಳ ಬಸ್ ನಿಲ್ದಾಣ ಬಳಿ ಬಿ ಬಿ ಎಮ್ ಪಿ ಕಸದ ಟ್ರಕ್ ಗುದ್ದಿ 13 ವರ್ಷದ ಶಾಲಾ ಬಾಲಕಿ ಸ್ಥಳದಲ್ಲೇ ಸಾವು

ಹೆಬ್ಬಾಳ ಬಸ್ ನಿಲ್ದಾಣ ಬಳಿ ಬಿ ಬಿ ಎಮ್ ಪಿ ಕಸದ ಟ್ರಕ್ ಗುದ್ದಿ 13 ವರ್ಷದ ಶಾಲಾ ಬಾಲಕಿ ಸ್ಥಳದಲ್ಲೇ ಸಾವು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 21, 2022 | 10:16 PM

ನತದೃಷ್ಟ ಬಾಲಕಿಯೊಂದಿಗೆ, ಸಂಧ್ಯಾ ಮತ್ತು ಮತ್ತಿಬ್ಬರಿಗೆ ಟ್ರಕ್ ಗುದ್ದಿದೆ. ಅವರಿಗೆಲ್ಲ ಚಿಕ್ಕಪುಟ್ಟ ಗಾಯಗಳಾಗಿವೆ. ಇವರನ್ನು ಗುದ್ದಿದ ಬಳಿಕ ಬಿ ಬಿ ಎಮ್ ಪಿ ಟ್ರಕ್ ಒಂದು ಬೈಕ್ ಗೂ ಡಿಕ್ಕಿ ಹೊಡೆದಿದೆ. ಗಾಯಗೊಂಡವರೆಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನ ರಸ್ತೆಗಳಲ್ಲಿ ನಡೆದಾಡುವಾಗ ಮತ್ತು ವಾಹನ ಓಡಿಸುವಾಗ ಬಿ ಎಮ್ ಟಿ ಸಿ (BMTC) ಬಸ್ ಮತ್ತು ಬಿ ಬಿ ಎಮ್ ಪಿ (BBMP) ಕಸ ಸಾಗಿಸುವ ಟ್ರಕ್ ಗಳ ಬಗ್ಗೆ ಬಹಳ ಎಚ್ಚರದಿಂದಿರಬೇಕಾಗುತ್ತದೆ. ನಗರದಲ್ಲಿ ಸಂಭವಿಸುವ ಅಪಘಾತಗಳಲ್ಲಿ ಬಸ್ ಮತ್ತು ಟ್ರಕ್ ಗಳ ಪಾಲು ದೊಡ್ಡದು. ಸೋಮವಾರ ಮಧ್ಯಾಹ್ನ ಬಿ ಬಿ ಎಮ್ ಪಿ ಯ ಗಾರ್ಬೇಜ್ ಟ್ರಕ್ (garbage truck) ಶಾಲೆಯಿಂದ ಮನೆಗೆ ಹೋಗುತ್ತಿದ್ದ 13 ವರ್ಷ ವಯಸ್ಸಿನ ಬಾಲಕಿಯೊಬ್ಬಳ ಜೀವ ತೆಗೆದಿದೆ. ಟಿವಿ9 ಬೆಂಗಳೂರು ವರದಿಗಾರನಿಗೆ ಆಪಘಾತ ನಡೆದ ಬಗ್ಗೆ ವಿವರಣೆ ನೀಡುತ್ತಿರುವ ಹುಡುಗಿಯ ಹೆಸರು ಸಂಧ್ಯಾ. ಮೃತಪಟ್ಟ ಬಾಲಕಿ ಅಕ್ಷತಾ ಈ ಸಂಧ್ಯಾಳ ಅಕ್ಕ. ಅವರಿಬ್ಬರು ಸದಾಶಿವನಗರದಲ್ಲಿರುವ ಸ್ಟೆಲ್ಲಾ ಮೇರೀಸ್ ಶಾಲೆಯ ವಿದ್ಯಾರ್ಥಿಗಳು.

ಭಾನುವಾರ ನಗರದಲ್ಲಿ ಮಳೆಯಾಗಿರದ್ದರೆ ಬಾಲಕಿಯ ಜೀವ ಉಳಿಯುತಿತ್ತು. ಜೋರು ಸುರಿದ ಮಳೆಯಿಂದಾಗಿ ಹೆಬ್ಬಾಳದ ಬಸ್ ನಿಲ್ದಾಣದ ಮುಂದಿರುವ ಕೆಳಸೇತುವೆಯಲ್ಲಿ ನೀರು ಸೇರಿಕೊಂಡಿದ್ದರಿಂದ ಸಂಧ್ಯಾ, ಅವಳ ಅಕ್ಕ ಅಕ್ಷತಾ ಮತ್ತು ಇನ್ನೂ ಒಂದಿಬ್ಬರು ಬಾಲಕಿಯರು ಮೇನ್ ರೋಡ್ ಕ್ರಾಸ್ ಮಾಡಲು ಮುಂದಾಗಿದ್ದಾರೆ. ಅದೇ ಸಮಯಕ್ಕೆ ಯಮದೂತ ಟ್ರಕ್ ಸಂಧ್ಯಾಗೆ ಜೋರಾಗಿ ಡಿಕ್ಕಿ ಹೊಡೆದಿದೆ ಮತ್ತು 13ರ ಬಾಲೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.

ನತದೃಷ್ಟ ಬಾಲಕಿಯೊಂದಿಗೆ, ಸಂಧ್ಯಾ ಮತ್ತು ಮತ್ತಿಬ್ಬರಿಗೆ ಟ್ರಕ್ ಗುದ್ದಿದೆ. ಅವರಿಗೆಲ್ಲ ಚಿಕ್ಕಪುಟ್ಟ ಗಾಯಗಳಾಗಿವೆ. ಇವರನ್ನು ಗುದ್ದಿದ ಬಳಿಕ ಬಿ ಬಿ ಎಮ್ ಪಿ ಟ್ರಕ್ ಒಂದು ಬೈಕ್ ಗೂ ಡಿಕ್ಕಿ ಹೊಡೆದಿದೆ. ಗಾಯಗೊಂಡವರೆಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:   Shocking Video: ಬೆಂಜ್ ಕಾರ್ಖಾನೆಗೆ ಚಿರತೆ ಮರಿಯ ಸರ್​ಪ್ರೈಸ್​ ವಿಸಿಟ್!; 6 ಗಂಟೆ ಸತಾಯಿಸಿದ ಚಿರತೆಯ ವಿಡಿಯೋ ವೈರಲ್