ಮಾತಿನ ಮಹತ್ವದ ಬಗ್ಗೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಏನು ಹೇಳಿದ್ದಾರೆ ಕೇಳಿ..!
ಮಾತು ಮಾಣಿಕ್ಯ ಅಂತ ನಮಗೆಲ್ಲರಿಗೂ ಗೊತ್ತು. ಅದೇ ರೀತಿ ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎನ್ನುವ ಮಾತು ಕೂಡ ನಮಗೆ ತಿಳಿದಿದೆ.
ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ( Siddeshwara Swamiji) ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆಗಿದ್ದು ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಷ್ಣಾತರು. ಮಾತು ಮಾಣಿಕ್ಯ ಅಂತ ನಮಗೆಲ್ಲರಿಗೂ ಗೊತ್ತು. ಅದೇ ರೀತಿ ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎನ್ನುವ ಮಾತು ಕೂಡ ನಮಗೆ ತಿಳಿದಿದೆ. ಆದರೂ ಕೂಡ ನಾವುಗಳು ಕೆಲವೊಮ್ಮೆ ಮಾತನಾಡುವಾಗ ಎಡವುತ್ತೇವೆ. ನಾವು ಕಷ್ಟ ಪಟ್ಟು ಸಾಲವೆಲ್ಲ ಮಾಡಿ ಒಂದು ಸುಂದರ ಮನೆಯನ್ನ ಕಟ್ಟಿಸುತ್ತೇವೆ. ಅದರ ಗೃಹ ಪ್ರವೇಶಕ್ಕೆ ಜನರು ಬಂದು, ತುಂಬಾ ಚನ್ನಾಗಿ ಕಟ್ಟಿಸಿದ್ದಿರೆ ಎಂದರೆ ಎಷ್ಟು ಖುಷಿಯಾಗುತ್ತೆ. ಅದೇ ಒಂದು ವೇಳೆ ಮನೆ ಸರಿಯಾಗಿಲ್ಲ ಎಂದರೆ ಯಾರಿಗಾದರೂ ಬೇಜಾರ್ ಆಗುತ್ತಾರೆ. ಸಮಯ, ಸಂದರ್ಭಕ್ಕೆ ತಕ್ಕಂತೆ ನಾವು ಶಬ್ಧ ಪ್ರಯೋಗ ಮಾಡುವುದು ಬಹಳ ಮುಖ್ಯ. ಮಾತಿನ ಮಹತ್ವದ ಕುರಿತು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಸುಂದರವಾಗಿ ಹೇಳಿದ್ದಾರೆ ಕೇಳಿ.
ಇದನ್ನೂ ಓದಿ:
ತ್ವಚೆಯಲ್ಲಿ ಫಂಗಲ್ ಇನ್ಫೆಕ್ಷನ್ ಆಗಿದೆಯೇ? ಈ 5 ತಪ್ಪುಗಳನ್ನು ಎಂದಿಗೂ ಮಾಡಬೇಡಿ