AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ವರ್ಷದ ನಂತರ ಮತ್ತೂ ಎತ್ತರಕ್ಕೆ ಏರಲಿದ್ದಾರಾ ಯೋಗಿ ಆದಿತ್ಯನಾಥ್​? ಮುಖ್ಯಮಂತ್ರಿ ಪ್ರಮಾಣ ವಚನ ಮುಹೂರ್ತ ಏನೆನ್ನುತ್ತದೆ?

ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಅದು ಮಾರ್ಚ್ 25ನೇ ತಾರೀಕಿನ ಸಂಜೆ 4 ಗಂಟೆಗೆ. ಆ ಮುಹೂರ್ತದ ಬಗ್ಗೆ ಜ್ಯೋತಿಷ್ಯ ವಿಶ್ಲೇಷಣೆ ಇಲ್ಲಿದೆ.

3 ವರ್ಷದ ನಂತರ ಮತ್ತೂ ಎತ್ತರಕ್ಕೆ ಏರಲಿದ್ದಾರಾ ಯೋಗಿ ಆದಿತ್ಯನಾಥ್​? ಮುಖ್ಯಮಂತ್ರಿ ಪ್ರಮಾಣ ವಚನ ಮುಹೂರ್ತ ಏನೆನ್ನುತ್ತದೆ?
ಯೋಗಿ ಆದಿತ್ಯನಾಥ
TV9 Web
| Updated By: Srinivas Mata|

Updated on: Mar 22, 2022 | 8:14 AM

Share

ಮುಖ್ಯಮಂತ್ರಿ ಜವಾಬ್ದಾರಿ ವಹಿಸಿಕೊಳ್ಳುವ ಪದವಿ ಪ್ರಮಾಣ ಸಮಾರಂಭಕ್ಕೆ ಬಹಳ ಪ್ರಾಮುಖ್ಯ ಇದೆ. ಸಾಂವಿಧಾನಿಕವಾಗಿ ಅದರ ಮುಖ್ಯತ್ವವನ್ನು ಹೊಸದಾಗಿ ಹೇಳುವ ಅಗತ್ಯ ಏನಿಲ್ಲ. ಆದರೆ ಜ್ಯೋತಿಷ್ಯ ಪ್ರಕಾರ ಕೂಡ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಅದರದೇ ಆದ ಮಹತ್ವ ಇದೆ. ಅಂದಹಾಗೆ ಉತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿಯಾಗಿ ಎರಡನೆಯ ಬಾರಿಗೆ ಯೋಗಿ ಆದಿತ್ಯನಾಥ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇದೇ ಮಾರ್ಚ್ 25ನೇ ತಾರೀಕಿನ ಸಂಜೆ 4 ಗಂಟೆಗೆ ಪ್ರಮಾಣ ವಚನ ಕಾರ್ಯಕ್ರಮ ಇದೆ. ಆ ದಿನದ ಮುಹೂರ್ತದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆ ಕಾಪು ಮೂಲದ ಪ್ರಕಾಶ್​ ಅಮ್ಮಣ್ಣಾಯ ಅವರು ವಿಶ್ಲೇಷಣೆಯೊಂದನ್ನು ಮಾಡಿದ್ದು, ಟಿವಿ9ಕನ್ನಡ ಡಿಜಿಟಲ್ ಓದುಗರಿಗಾಗಿ ನೀಡಿರುವ ಮಾಹಿತಿಯನ್ನು ಇಲ್ಲಿ ನೀಡಿದ್ದಾರೆ. ಅದನ್ನು ಅವರದೇ ಪದಗಳಲ್ಲಿ ಇಲ್ಲಿ ನೀಡಲಾಗುತ್ತಿದೆ.

“ಊರ್ಧ್ವಮುಖ ರಾಶಿ ಸಿಂಹ ಲಗ್ನದಲ್ಲಿ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ನಡೆಯಲಿದೆ. ಮೇಲ್ನೋಟಕ್ಕೆ ಹನ್ನೊಂದನೆ ಮನೆಯ (ಕಿರೀಟ ಸ್ಥಾನ. ರಾಜ್ಯಾಭಿಷೇಕಕ್ಕೆ ಈ ಸ್ಥಾನ ಶುದ್ಧ ಇರಬೇಕು) ಅಧಿಪತಿ ಬುಧ ಮತ್ತು ಲಗ್ನಾಧಿಪತಿ ರವಿ ಅಷ್ಟಮ ರಂಧ್ರ ಸ್ಥಾನದಲ್ಲಿದ್ದಾರೆ. ಅಂದರೆ ರಂಧ್ರ ಕೊರೆಯುವವರು ಇದ್ದಾರೆ ಎಂದರ್ಥ. ಏಕಾದಶಕ್ಕೆ ಗುರು ದೃಷ್ಟಿ ಇರುವುದರಿಂದ ಆ ಸಮಸ್ಯೆ ನಿವಾರಣೆ ಇದೆ. ಆದರೆ ಆರನೆ ಮನೆಯಾದ ಮಕರದಲ್ಲಿ ಇರುವ ಗ್ರಹ ಯುದ್ಧ ಸ್ಥಿತಿಯನ್ನು ಸೂಚಿಸುತ್ತಿದೆ. ಇದು ಶತ್ರು ಸ್ಥಾನ. ಶತ್ರು ಸ್ಥಾನಾಧಿಪತಿ ಮೂರನೆಯ ಪೂರ್ಣ ದೃಷ್ಟಿ (ಕೆಟ್ಟ ದೃಷ್ಟಿ) ಯಲ್ಲಿ ಲಾಭಾಧಿಪತಿ, ಲಗ್ನಾಧಿಪತಿಯ ವೀಕ್ಷಣೆ ಮಾಡುತ್ತಿದೆ. ಹೇಗೆ ವೀಕ್ಷಿಸುತ್ತಿದೆ ಅಂದರೆ ಶತ್ರುಗಳು ಪರಸ್ಪರ ಹೊಡೆದುಕೊಂಡು ನೋಡುತ್ತಾರೆ. ಎಣ್ಣೆ- ಶೀಗೆಯಂತಿರುವ ಶತ್ರುಗಳು ಒಮ್ಮೊಮ್ಮೆ ಒಟ್ಟಾಗುತ್ತಾರೆ. ಅಲ್ಲಿ ಕುಜನೂ ಬಲಿಷ್ಟ, ಶನಿಯೂ ಬಲಿಷ್ಟ, ಶುಕ್ರನೂ ಬಲಿಷ್ಟನೆ.

“ಅಷ್ಟಮದಲ್ಲಿ ನಿಪುಣ ಯೋಗ. ಅಂದರೆ ನಿಶ್ಚಿತವಾಗಿ ಪ್ರಜೆಗಳಿಂದ ಪ್ರಶಂಸಿಸಲ್ಪಡುತ್ತಾರೆ. ಒಂದು ತರ್ಕ ಇದೆ. ಪ್ರಶಂಸೆ ಪಡೆಯಬೇಕಾದರೆ ಸಂಗ್ರಾಮ ನಡೆಯಬೇಕು, ಆ ಸಂಗ್ರಾಮದಲ್ಲಿ ಗೆಲುವು ಬರಬೇಕು. ಅದು ನಡೆಯಲಿದೆ. ಕಾನೂನು ಸುವ್ಯವಸ್ಥೆ ಹದಗೆಡುವಂಥ ಸನ್ನಿವೇಶ ಹೆಚ್ಚಾಗಲಿದೆ. ಅದೂ ಮೊದಲ ಕೆಲ ತಿಂಗಳಲ್ಲಿ. ಎನ್​ಕೌಂಟರ್ ಮೂಲಕ ಅಪರಾಧಿಗಳು ಹತರೂ ಆಗುತ್ತಾರೆ. ಪದವಿ ಪ್ರಮಾಣ ಸಮಯಕ್ಕೆ ಮೂಲಾ ನಕ್ಷತ್ರ, ಅಷ್ಟಮಿ ಇದೆ. ದುರ್ಗಾಶಕ್ತಿ ಯೋಗಿಗೆ ಒದಗಲಿದೆ. ಸ್ವಾಭಿಮಾನ, ಹಠ ಈ ಸರ್ಕಾರಕ್ಕೆ ಬರಲಿದೆ. ಕರ್ಮಸ್ಥಾನದಲ್ಲಿ ಉಚ್ಚ ರಾಹು ಇದೆ. ಅತ್ಯಂತ ಪ್ರಾಮಾಣಿಕ ಆಡಳಿತವೂ ಸಿಗಲಿದೆ. ಇಬ್ಬರು ಸ್ತ್ರೀಯರು (ಒಂದು ಮೇಲ್ನೋಟಕ್ಕೆ ಸಾತ್ವಿಕ, ಇನ್ನೊಂದು ಆನೆಯಂತಿರುವ ಬಲಾಢ್ಯೆ) ಇವರು ಯಾರ್ಯಾರನ್ನೋ ಎತ್ತಿ ಹಿಡಿದು ಸರ್ಕಾರವನ್ನು ವಿಫಲಗೊಳಿಸಲು ಪ್ರಯತ್ನ ಮಾಡಬಹುದು.

“ಅದೆಲ್ಲ ಏನೇ ನಡೆದರೂ ಲಗ್ನದ ಅಷ್ಟಮಾಧಿಪತಿ ಗುರು (ರುದ್ರ) ದೃಷ್ಟಿ ಲಗ್ನಕ್ಕಿದೆ. ಅಲ್ಲದೆ ಗುರು ಪಂಚಮಾಧಿಪತಿಯೂ ಹೌದು. ಅಷ್ಟಮ ಗುರುವು ನಿಸ್ವಾರ್ಥತೆಯ ಸಂಕೇತ. ಒಟ್ಟಿನಲ್ಲಿ ಸಂಘರ್ಷಗಳು ಇದ್ದದ್ದೇ. 2022ರ ಏಪ್ರಿಲ್ ನಂತರ ಶನಿಯೂ ಮೂಲ ತ್ರಿಕೋಣ ಕುಂಭಕ್ಕೆ ಪ್ರವೇಶ ಮಾಡುವುದರಿಂದ ಹಲವಾರು ಸತ್ಕರ್ಮಗಳು ನಡೆಯಲಿವೆ, ಪ್ರಜೆಗಳ ಬಯಕೆಗಳು ಈಡೇರಲಿವೆ. ಇನ್ನು ಮೂರು ವರ್ಷ ಉತ್ತಮ ಆಡಳಿತ ನೀಡಿ, ಯೋಗಿ ಆದಿತ್ಯನಾಥ್ ಇನ್ನೂ ಉನ್ನತ ಪೀಠ ಏರುವ ಸೂಚನೆಯನ್ನೂ ಈ ಮುಹೂರ್ತ ತಿಳಿಸುತ್ತದೆ. ಅಂದರೆ ಕೇಂದ್ರದಲ್ಲಿ ಸಚಿವರೋ ಅಥವಾ “ಪ್ರಧಾನ” ಹುದ್ದೆಗೇ ಏರಬಹುದು ಅಥವಾ ಪಕ್ಷದಲ್ಲಿ ಬಹಳ ಮಹತ್ತರ ಹುದ್ದೆಯನ್ನು ಅಲಂಕರಿಸುವ ಮುನ್ಸೂಚನೆ ಇದಾಗಿದೆ”.

ಇದನ್ನೂ ಓದಿ: ಮಾರ್ಚ್ 22, 26ಕ್ಕೆ ತಿಥಿ ದಗ್ಧ ಯೋಗ; ಭೀಕರ ಅನಾಹುತಕ್ಕೆ ಸಾಕ್ಷಿ ಆಗಬಹುದು ಜಗತ್ತು ಎನ್ನುತ್ತಾರೆ ಕರ್ನಾಟಕದ ಖ್ಯಾತ ಜ್ಯೋತಿಷಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ